ಮನೆ ರಾಜ್ಯ ಪ್ರಧಾನಿ ಮೋದಿ ದಿನಬಳಕೆ ವಸ್ತುಗಳ ಮೇಲಿನ ಜಿಎಸ್ ಟಿ ಕಡಿಮೆ ಮಾಡಬಹುದು: ಶೋಭಾ ಕರಂದ್ಲಾಜೆ

ಪ್ರಧಾನಿ ಮೋದಿ ದಿನಬಳಕೆ ವಸ್ತುಗಳ ಮೇಲಿನ ಜಿಎಸ್ ಟಿ ಕಡಿಮೆ ಮಾಡಬಹುದು: ಶೋಭಾ ಕರಂದ್ಲಾಜೆ

0

ಮೈಸೂರು(Mysuru):  ಅಗತ್ಯ ವಸ್ತುಗಳ ಮೇಲೆ  ಜಿಎಸ್ ಟಿ ಏರಿಕೆಯಾಗಿದ್ದು, ಪ್ರಧಾನಿ ಮೋದಿ ದಿನಬಳಕೆ ವಸ್ತುಗಳ ಮೇಲಿನ ಜಿಎಸ್ ಟಿ ಕಡಿಮೆ ಮಾಡಬಹುದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ  ಅವರು, ಇಂದು ಜಿಎಸ್ ಟಿ ಸಂಬಂಧ ಸಭೆ ನಡೆಯಲಿದೆ. ನಮ್ಮ ಪ್ರಧಾನಿ ತಾಯಿ ಹೃದಯದವರು ಅವರಿಗೆ ಜನರ ಭಾವನೆಗಳು ಅರ್ಥವಾಗುತ್ತದೆ. ದಿನಬಳಕೆ ವಸ್ತುಗಳ ಮೇಲಿನ ಜಿಎಸ್ ಟಿ ಕಡಿಮೆ ಮಾಡಬಹುದು ಎಂದು ಹೇಳಿದ್ದರು.

ನೆರೆ ಸಂಪೂರ್ಣ ತಗ್ಗಿದ ಮೇಲೆ ನಷ್ಟದ ಬಗ್ಗೆ ಗೊತ್ತಾಗುತ್ತೆ ಪ್ರವಾಹ ತಗ್ಗುವವರೆಗೂ ಹಾನಿ ಬಗ್ಗೆ ತಿಳಿಯಲ್ಲ. ರಸ್ತೆ ಸೇತುವೆ ಹಾನಿ ಬಗ್ಗೆ ಮಾತ್ರ ವರದಿ ತಯಾರಾಗುತ್ತಿದೆ. ರಾಜ್ಯದ ವರದಿ ಕೇಂದ್ರದ ಕೈಸೇರಿದ ನಂತರ ಪರಿಹಾರದ ಮಾಹಿತಿ ದೊರೆಯಲಿದೆ ಎಂದು ತಿಳಿಸಿದ್ದರು.