ಮನೆ ಕ್ರೀಡೆ 2021: ಈ ವರ್ಷ ಕ್ರಿಕೆಟ್ ಜಗತ್ತನ್ನು ಕಾಡಿದ ವಿವಾದಗಳು

2021: ಈ ವರ್ಷ ಕ್ರಿಕೆಟ್ ಜಗತ್ತನ್ನು ಕಾಡಿದ ವಿವಾದಗಳು

0

2021 ಮುಗಿಯುವ ಹಂತಕ್ಕೆ ಬಂದು ತಲುಪಿದ್ದು ಜನರು ನೂತನ ವರ್ಷವನ್ನು ಬರಮಾಡಿಕೊಳ್ಳುವ ಹಂತದಲ್ಲಿದ್ದಾರೆ. ವರ್ಷಪೂರ್ತಿ ಕೊರೋನಾವೈರಸ್ ಭೀತಿಯಲ್ಲಿಯೇ ಮುಗಿದಿದ್ದು ಕ್ರಿಕೆಟ್ ಜಗತ್ತು ಕೂಡ ಈ ವೈರಸ್ ಹಾವಳಿಯಿಂದ ಹೊರತಾಗಿರಲಿಲ್ಲ. ಕೇವಲ ಕೊರೋನಾವೈರಸ್ ಮಾತ್ರವಲ್ಲದೇ ಇನ್ನೂ ಕೆಲ ಅಂಶಗಳಿಂದ ಹಿನ್ನಡೆ ಮತ್ತು ವಿವಾದಗಳನ್ನು ಕ್ರಿಕೆಟ್ ಜಗತ್ತು ಎದುರಿಸಿದ್ದು, ಈ ವರ್ಷ ಕ್ರಿಕೆಟ್ ಜಗತ್ತಿನಲ್ಲಿ ಉಂಟಾದ ವಿವಾದಗಳ ಪಟ್ಟಿ ಈ ಕೆಳಕಂಡಂತಿದೆ..

ಮೊದಲೇ ಹೇಳಿದ ಹಾಗೆ ಕೊರೋನಾವೈರಸ್ ಕೇವಲ ಜನ ಸಾಮಾನ್ಯರಿಗೆ ಮಾತ್ರವಲ್ಲದೇ ಕ್ರಿಕೆಟ್ ಆಟಕ್ಕೂ ಕೂಡ ದೊಡ್ಡ ಮಟ್ಟದ ಹೊಡೆತವನ್ನು ನೀಡಿದೆ. ಈ ವರ್ಷ ನಡೆಯಬೇಕಿದ್ದ ಪ್ರಮುಖ ಸರಣಿಗಳಲ್ಲಿ ಒಂದಾದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪ್ರವಾಸ ಕೂಡ ಇದೇ ಕೊರೋನಾವೈರಸ್ ಕಾಟಕ್ಕೆ ಬಲಿಯಾಯಿತು. ಹೌದು, ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಸರಣಿಗಳನ್ನು ಆಡಬೇಕಿತ್ತು. ಆದರೆ ದಕ್ಷಿಣ ಆಫ್ರಿಕಾದಲ್ಲಿ ಕೊರೋನಾವೈರಸ್ ಮತ್ತು ನೂತನವಾಗಿ ಕಾಣಿಸಿಕೊಂಡಿರುವ ವೈರಸ್ ಹಾವಳಿ ಹೆಚ್ಚಾಗಿದ್ದು ಇಂತಹ ಸಂದರ್ಭದಲ್ಲಿ ಪ್ರವಾಸವನ್ನು ಕೈಗೊಂಡು ಕ್ರಿಕೆಟ್ ಆಡುವುದು ಆಟಗಾರರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಕ್ಷೇಮವಲ್ಲ ಎಂದು ತಿಳಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಸಿಇಒ ನಿಕ್ ಹಾಕ್ಲೇ ದಕ್ಷಿಣ ಆಫ್ರಿಕಾ ಪ್ರವಾಸವನ್ನು ರದ್ದುಪಡಿಸಿರುವುದಾಗಿ ಹೇಳಿದರು. ಹೀಗೆ ದಕ್ಷಿಣ ಆಫ್ರಿಕಾ ಪ್ರವಾಸವನ್ನು ರದ್ದುಪಡಿಸಿದ ಆಸ್ಟ್ರೇಲಿಯಾಕ್ಕೆ ಹಣದ ನಷ್ಟ ಉಂಟಾಗಿದ್ದು ಮಾತ್ರವಲ್ಲದೇ ಪ್ರತಿಷ್ಠಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವ ಅವಕಾಶಕೂಡ ಕೈ ತಪ್ಪಿತು.

ಹಿಂದಿನ ಲೇಖನವ್ಯಕ್ತಿ ಸ್ವಾತಂತ್ರ್ಯ ಕುರಿತಂತೆ ನ್ಯಾ. ಡಿ ವೈ ಚಂದ್ರಚೂಡ್‌ ನಿರ್ಧರಿಸಿದ ಐದು ಪ್ರಕರಣಗಳು ಇವು
ಮುಂದಿನ ಲೇಖನಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ಎ.ಮಂಜು ಗಂಭೀರ ಆರೋಪ