ಕೋಪನ್ ಹೇಗನ್(Coapan Heagen) (ಡೆನ್ಮಾರ್ಕ್): ಪ್ರಧಾನಿ ನರೇಂದ್ರ ಮೋದಿ ಅವರ ಯುರೋಪ್ ಪ್ರವಾಸದ ಎರಡನೇ ದಿನ ಕೋಪನ್ ಹೇಗನ್ ನ ಅಮಾಲಿಯನ್ ಬರ್ಗ್ ಅರಮನೆಯಲ್ಲಿ ಡೆನ್ಮಾರ್ಕ್ ಕಿಂಗ್ ಡಮ್ ನ ರಾಣಿ 2ನೇ ಮಾರ್ಗರೆಥ್ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸುವ ಮೂಲಕ ಅಧಿಕೃತವಾಗಿ ಡೆನ್ಮಾರ್ಕ್ ಪ್ರವಾಸವನ್ನು ಮುಗಿಸಿದರು.
ಇದಕ್ಕೂ ಮೊದಲು ಕೋಪನ್ಹೇಗನ್ಗೆ ಆಗಮಿಸಿದ ಪ್ರಧಾನಮಂತ್ರಿ ಮೋದಿ ತಮ್ಮ ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡರಿಕ್ಸೆನ್ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನು ನಡೆಸಿದರು. ಅಲ್ಲಿ ಇಬ್ಬರೂ ನಾಯಕರು ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಸಹಕಾರ ಸಂಬಂಧ ವಿಚಾರವಾಗಿ ಚರ್ಚೆ ನಡೆಸಿದರು.
ಪಿಎಂ ಮೋದಿ ಮತ್ತು ಮೆಟ್ಟೆ ಫ್ರೆಡರಿಕ್ಸೆನ್ ಉಕ್ರೇನ್ ಬಗ್ಗೆ ಚರ್ಚಿಸಿದರು. ನಂತರ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಂತರದಲ್ಲಿ ವಲಸೆ ವಿಚಾರವಾಗಿ ಉದ್ದೇಶದ ಘೋಷಣೆಗೆ ಸಹಿ ಮಾಡಿದರು. ಅದರ ಜೊತೆಗೆ ಕೌಶಲ್ಯ ಅಭಿವೃದ್ಧಿ, ವೃತ್ತಿಪರ ಶಿಕ್ಷಣ ಮತ್ತು ಉದ್ಯಮಶೀಲತೆ ವಿಚಾರವಾಗಿ ತಿಳುವಳಿಕೆ ಪತ್ರ ಸಹಿ ಹಾಕಲಾಯಿತು. ಉಭಯ ದೇಶಗಳ ನಡುವೆ ಒಟ್ಟು ಒಂಬತ್ತು ಒಪ್ಪಂದಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು
ಡೆನ್ಮಾರ್ಕ್ನಲ್ಲಿರುವ ಭಾರತೀಯ ಸದಸ್ಯರುಪ್ರಧಾನಿ ಮೋದಿ ಅವರು ಬುಧವಾರದಂದು ಎರಡನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಇದಕ್ಕಾಗಿ ಫ್ರಾನ್ಸ್ನ ಪ್ಯಾರಿಸ್‌ಗೆ ತೆರಳುತ್ತಿದ್ದಾರೆ. ಈ ವೇಳೆ ಮರು ಆಯ್ಕೆಯಾದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.