ಶ್ರವಣ ನಕ್ಷತ್ರದಲ್ಲಿ ಅನ್ಯ ಅಂಶಗಳು :
ಇದರಲ್ಲಿ ಜ್ವರ ಬಂದರೆ 11 ದಿನಗಳು ಕ್ರೂರ, ವೈಷ್ಣವ ಶಾಂತಿ ಮಾಡಿದರೆ ಆರೋಗ್ಯ ಪ್ರಾಪ್ತಿ ಇದರಲ್ಲಿ ಕಳೆದ ಆಭರಣ ದೊರೆಯುವುದಿಲ್ಲ. ಕನ್ನೆ ಋತುಮತಿಯಾದರೆ ಪುತ್ರವತಿಯಾಗುತ್ತಾಳೆ. ಈ ನಕ್ಷತ್ರಲ್ಲಿ – ಪ್ರಯಾಣ, ಸೀಮಂತ, ನಾಮಕರಣ, ಅನ್ನಪ್ರಾಶನ, ಚೌಲ, ಜುಟ್ಟು ಬಿಡುವುದು, ಆಯುಷ್ಕರ್ಮ, ಅಭ್ಯಂಜನ,ತೀರ್ಥಸ್ನಾನ, ಆರೋಗ್ಯಸ್ನಾನ, ಮುಂಜಿ, ಮಂತ್ರೋಪದೇಶ, ಅಕ್ಷರಾಭ್ಯಾಸ, ವಿದ್ಯಾಭ್ಯಾಸ, ವೇದಾಧ್ಯಯನ, ಪಟ್ಟಾಭಿಷೇಕ, ದೇವೋತ್ಸವ, ದೇವಪ್ರತಿಷ್ಠೆ ನವೀನ ವಸ್ತ್ರಧಾರಣೆ, ಗೃಹಪ್ರವೇಶ, ಗ್ರಾಮಪ್ರವೇಶ, ಪ್ರಾಯಶ್ಚಿತ್ತ, ಉಪವಾಸ ವ್ರತ, ಪುರಾಣ ಶ್ರವಣಾರಂಭ, ಮೊಹರುಂಗುರ ಮಾಡಿಸುವುದು, ಯಜ್ಞ, ದಾನ ಸಂಕಲ್ಪ, ಹೊಸ ಹಸು ಪ್ರಾಪ್ತಿ ಗೋದಾನ, ಕಾಮ್ಯ ವೃಷೋತ್ಸರ್ಜನ, ತೀರ್ಥಯಾತ್ರೆ, ಗಯಾವಾರ್ಜನ, ನಿಧಿಪೂಜೆ, ಗರಡಿ ಸಾಧನೆ, ಕುದುರೆ ಸವಾರಿ, ರಥಾರೋಹಣ, ಹೊಸ ಭೂಮಿಯನ್ನು ಗೆಯ್ಯುವುದು, ಬೀಜಾವಾಪ, ರೋಗಕ್ಕೆ ಔಷಧ ಸೇವನೆ, ಈ ಮುಂತಾದ ಕಾರ್ಯಗಳನ್ನು ಮಾಡಬಹುದು.
ಈ ನಕ್ಷತ್ರದ 1ನೇ ಚರಣದಲ್ಲಿ ಜನಿಸಿದ ಜಾತಕನು ವ್ಯಾಜ್ಯಗಾರ, ಗುಲ್ಮಶೂಲೆ, ಅಲ್ಪಸಂತಾನಿ, 2ನೇ ಚರಣದಲ್ಲಿ ಭೋಗಶಾಲಿ, ಕಾಮಿ, ಸೇವಕರುಳ್ಳವ, ತಂತ್ರವಾದಿ, 3ನೇ ಚರಣದಲ್ಲಿ ವಿಚಕ್ಷಣ, ಕಲಹಕಾರಿ, ಕೆಲಸಗಾರ, ಕೋಮಲ, 4ನೇ ಚರಣದಲ್ಲಿ ಧನವಂತ, ಪಾರಮಾರ್ಥ ಬುದ್ದಿಯುಳ್ಳವನು, ವ್ಯಾಪಾರದಲ್ಲಿ ನಿಪುಣ.
ಉತ್ತರಾಷಾಢ ನಕ್ಷತ್ರದ 3.4ನೇ ಚರಣಗಳು, ಶ್ರವಣ ನಕ್ಷತ್ರಕ್ಕೆ ಆದಿಯಲ್ಲಿ ಚಂದ್ರದೆಶೆ 10 ವರ್ಷಗಳು, 2ನೇ ವರ್ಷದಲ್ಲಿ ರೋಗಪೀಡೆ, 3ನೇ ವರ್ಷದಲ್ಲಿ ವಿಷದೋಷ, 5ನೇ ವರ್ಷದಲ್ಲಿ ಅಗ್ನಿಭಯ, 7ನೇ ವರ್ಷದಲ್ಲಿ ಶಸ್ತ್ರಗಂಡ, 13ನೇ ವರ್ಷದಲ್ಲಿ ಮಹಾಜ್ವರ ಭಯ, 15ನೇ ವರ್ಷದಲ್ಲಿ ರೋಗಭಯ, 30ನೇ ವರ್ಷದಲ್ಲಿ ಶತ್ರುಕಂಟಕದೋಷ; ಮಿಥುನಮಾಸ, ಕೃಷ್ಣಪಕ್ಷ, ಏಕಾದಶಿ, ಭಾನುವಾರ, ಶ್ರವಣ ನಕ್ಷತ್ರ ಈ ಪೈಕಿ ಜ್ವರ ಬಂದರೆ ಪ್ರಾಣಹಾನಿಯಾಗುವುದು. ಪುಣ್ಯ ಸಂಪಾದನೆಯಾದರೆ ಅಪಮೃತ್ಯುಗಳನ್ನು ಕಳೆದುಳಿಯುತ್ತಾನೆ. ಸಾಮಾನ್ಯವಾಗಿ 90 ವರ್ಷ ಪರಮಾಯುಷ್ಯ.
* ಶ್ರವಣ ನಕ್ಷತ್ರದ ಜಾತಕರ ವಿವಾಹಕ್ಕೆ ಹೊಂದುವ ನಕ್ಷತ್ರಗಳು
*ಶ್ರವಣ ನಕ್ಷತ್ರದ ಕನೈಗೆ
ಅಶ್ವಿನಿ, ಭರಣಿ, ಕೃತ್ತಿಕಾ 2,3,4ನೇ ಚರಣ, ರೋಹಿಣಿ, ಮೃಗಶಿರಾ, ಪುನರ್ವಸು, ಪೂರ್ವಾಫಾಲ್ಗುಣಿ, ಉತ್ತರಾ, ಹಸ್ತಾ, ಚಿತ್ರಾ ವಿಶಾಖಾ 1,2,3ನೇ ಚರಣ, ಮೂಲಾ, ಪೂರ್ವಾಷಾಢಾ, ಉತ್ತರಾಷಾಢಾ, ಶ್ರವಣ, ಧನಿಷ್ಠಾ 3,4ನೇ ಚರಣ, ಶತಭಿಷಾ, ಪೂರ್ವಾ ಭಾದ್ರಪದಾ, ಉತ್ತರಾಭಾದ್ರಪದಾ, ರೇವತಿ
ಶ್ರವಣ ನಕ್ಷತ್ರದ ವರನಿಗೆ :
ಆಶ್ವಿನಿ, ಕೃತ್ತಿಕಾ 2,3,4ನೇ ಚರಣ, ರೋಹಿಣಿ, ಮೃಗಶಿರಾ, ಪುನರ್ವಸು 1,2,3ನೇ ಚರಣ, ಮಘಾ, ಪೂರ್ವಾಫಾಲ್ಗುಣಿ, ಉತ್ತರಾ, ಹಸ್ತಾ, ಚಿತ್ರಾ ಅನುರಾಧಾ, ಪೂರ್ವಾಷಾಢಾ, ಶ್ರವಣ, ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರಪದಾ, ಉತ್ತರಾ ಭಾದ್ರಪದಾ, ರೇವತಿ.
* ಶ್ರವಣ ನಕ್ಷತ್ರದವರ ಜನನಕ್ಕೆ ಶಾಂತಿ :
*ಇದಂ ವಿಷ್ಣುವಿದೆಚಕ್ರಯೇ ತೇಧಾನಿಧದೇ ಪದಂ ।
ಸಮೂಢ ಮಸ್ಯಪಾಗಂ ಸುರೇಸ್ವಾಹಾ* ||
ಈ ನಕ್ಷತ್ರದಲ್ಲಿ ಸಂತಾನದ ಜನನವಾದಾಗ ತಾಯ್ತಂದೆಯರು ಈ ಮೇಲಿನ ಮಂತ್ರವನ್ನು ಒಂದು ಮಾಲೆಯಷ್ಟು ಜಪ ಮಾಡಿ, ಯಥಾಸಾಮರ್ಥ ಅಕ್ಕಿ-ಬೆಲ್ಲ. ಎಳ್ಳನ್ನು ದಾನ ನೀಡಬೇಕು. ಇದರಿಂದ ಶ್ರವಣ ನಕ್ಷತ್ರದ ದೋಷ ಶಾಂತವಾಗುತ್ತದೆ.
ಯಂತ್ರ :
ಕ್ಷೀಂ ಕ್ಷಿ: ನ ಮಃ
ನಾ ರಾ ಯ ಣಾ
ಯ ವಿ ಶ್ವಾ ತ್ಮ
ನೇ ಹ್ರೀಂ ಸ್ವಾ ಹಾ
ಸರ್ವಪ್ರಥಮ ಈ ಯಂತ್ರವನ್ನು ಸ್ವರ್ಣಪತ್ರದ ಮೇಲೆ ಉತ್ತೀರ್ಣಗೊಳಿಸಿ, ಈ ಕೆಳಗಿನ ಮಂತ್ರವನ್ನು ಒಂದು ಸಹಸ್ರ ಸಂಖ್ಯೆ ಯಲ್ಲಿ ಜಪ ಮಾಡಿ, ಗುಗ್ಗುಳದ ಧೂಪ ಹಾಕಿ ಪೂಜಿಸಬೇಕು. ಶ್ಯಾಲ್ಯಾನ್ನ, ಷಡ್ರಸೋಪೇತ ನೈವೇದ್ಯ, ಶ್ಯಾಲ್ಯಾನ್ನ ಭಕ್ಷಗಳಿಂದ ಹೋಮ ಮಾಡಬೇಕು. ಪಾಯಸಾನ್ನ ಬಲಿ ನೀಡಬೇಕು.
ಅತೋದೇವಾ ಅವಂತುನೋ ಯತೋವಿಷ್ಣುರ್ವಿಚಕ್ರಮೇ। ಪೃಥಿವ್ಯಾ ಸಪ್ತಧಾಮಭಿಃ ॥
ನಂತರ, ಈ ಯಂತ್ರವನ್ನು ಧಾರಣೆ ಮಾಡಬೇಕು. ಇದರಿಂದ ಶ್ರವಣ ನಕ್ಷತ್ರದ ಸಮಸ್ತದೋಷಗಳು ಶಾಂತವಾಗುತ್ತವೆ.