ಮೈಸೂರು: ಸಾಲಿಗ್ರಾಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಹಲಗೆ ಗೌಡನ ಕೊಪ್ಪಲು ಗ್ರಾಮದ ವಾಸಿ ಚಿತ್ರ ಕೋಂ ಮಹಾದೇವ ಅವರ ಅಪ್ರಪ್ತ ವಯಸ್ಸಿನ ಬಾಲಕಿ ಭಾವನ (ಹೆಸರನ್ನು ಬದಲಾಯಿಸಲಾಗಿದೆ) ಹಾಡ್ಯ ಗ್ರಾಮದ ಜೆಎಸ್ಎಸ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅದೇ ಗ್ರಾಮದ ವಾಸಿ ಧರ್ಮ ಬಿನ್ ಸೋಮೇಗೌಡ ಎಂಬುವನು ಅಪ್ರಾಪ್ತ ಭಾವನಳನ್ನು ಪರಿಚಯ ಮಾಡಿಕೊಂಡು ಪ್ರೀತಿಸುವುದಾಗಿ ಮತ್ತು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಪುಸಲೈಸಿ ದಿನಾಂಕ 18-01-2023 ರಂದು ಮನೆಯಲ್ಲಿ ಯಾರೂ ಇಲ್ಲದಿರುವಾಗ ಆರೋಪಿ ಧರ್ಮನು ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿದ್ದು, ನಂತರದ ದಿನಗಳಲ್ಲಿಯೂ ಸಹ ಲೈಂಗಿಕ ಸಂಪರ್ಕ ಮಾಡಿರುತ್ತಾನೆ.
ಇದರ ಪರಿಣಾಮವಾಗಿ ಬಾಲಕಿಯು ಗರ್ಭಿಣಿಯಾಗಿ ಚೆಲುವಾಂಬ ಆಸ್ಪತ್ರೆಯಲ್ಲಿ ಒಂದು ಗಂಡು ಮಗುವಿಗೆ ಜನನ ನೀಡಿರುತ್ತಾಳೆ.
ಈ ಬಗ್ಗೆ ಬಾಲಕಿಯ ಹೇಳಿಕೆ ದೂರನ್ನು ದಾಖಲಿಸಿ ಕೊಂಡು ತನಿಖೆ ನಡೆಸಿದ ಸಾಲಿಗ್ರಾಮ ಪೊಲೀಸ್ ಠಾಣೆಯ ಪೋಲಿಸ್ ನಿರೀಕ್ಷಕರಾದ ಕೃಷ್ಣರಾಜುರವರು ಆರೋಪಿಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಆನಂದ್ ಹೊಗಾಡೆರವರು ಆರೋಪಿಯ ವಿರುದ್ಧ ಆರೋಪ ಸಾಬೀತಾಗಿದೆ ಎಂದು ತಿಳಿಸಿ ದಿನಾಂಕ:27/8/ 2024 ರಂದು ಆರೋಪಿಗೆ ಪೋಕ್ಸೋ ಕಾಯ್ದೆ ಅಡಿಯಲ್ಲಿನ ಅಪರಾಧಗಳಿಗೆ 20 ವರ್ಷಗಳ ಕಠಿಣ ಸಜಾ ಹಾಗೂ ರೂ 50 ಸಾವಿರ ದಂಡವನ್ನು ವಿಧಿಸಿದ್ದು, ದಂಡದ ಪೂರ್ತಿ ಹಣವನ್ನು ಪರಿಹಾರದ ರೂಪದಲ್ಲಿ ನೊಂದ ಬಾಲಕಿಗೆ ನೀಡಬೇಕೆಂದು ತೀರ್ಪು ನೀಡಿದೆ ಎಂದು ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಬಿ ಜಯಂತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.