ಮನೆ ರಾಜಕೀಯ ಕೇಂದ್ರ ಬಜೆಟ್ 2022: ಇಂದಿನ ಬಜೆಟ್ ಭಾರತದ ಮುಂದಿನ 25 ವರ್ಷಗಳಿಗೆ ಮಾರ್ಗದರ್ಶಿ; ವಿತ್ತ ಸಚಿವೆ...

ಕೇಂದ್ರ ಬಜೆಟ್ 2022: ಇಂದಿನ ಬಜೆಟ್ ಭಾರತದ ಮುಂದಿನ 25 ವರ್ಷಗಳಿಗೆ ಮಾರ್ಗದರ್ಶಿ; ವಿತ್ತ ಸಚಿವೆ ಸೀತಾರಾಮನ್

0

ನವದೆಹಲಿ: ನಾನು ಇಂದು ಮಂಡಿಸುತ್ತಿರುವ ನಮ್ಮ ಸರ್ಕಾರದ ಬಜೆಟ್​ ಭಾರತದ ದೇಶದ ಮುಂದಿನ 25 ವರ್ಷಗಳ ಮಾರ್ಗದರ್ಶಿಯಾಗಿರಲಿದೆ ಎಂದು ಹೇಳಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಇಂದು ಮಂಡನೆ ಮಾಡಿದ ಬಜೆಟ್’ನ 7 ಆಧಾರ ಸ್ತಂಭಗಳನ್ನು ವಿತ್ತ ಸಚಿವೆ ಹೆಸರಿಸಿದ್ದು,  ಪಿಎಂ ಗತಿಶಕ್ತಿ. ಅಂತರ್ಗತ ಅಭಿವೃದ್ಧಿ. ಉತ್ಪಾದಕತೆ ವರ್ಧನೆ, ಅವಕಾಶಗಳ ಹೆಚ್ಚಳ.ವಿದ್ಯುತ್ ಉತ್ಪಾದನೆ, ವಿತರಣೆಯಲ್ಲಿ ಸುಧಾರಣೆ. ಪರಿಸರ ಸಂರಕ್ಷಣೆ.ವ್ಯವಸ್ಥಿತ ಹೂಡಿಕೆಗಳಿಗೆ ಒತ್ತ. ಇದು ಈ ಆಧಾರ ಸ್ತಂಭಗಳಾಗಿದೆ.

ಬಜೆಟ್​ನ ಮೊದಲ ಆಧಾರ ಸ್ತಂಭವಾಗಿರುವ ಪಿಎಂ ಗತಿಶಕ್ತಿಗೆ ಕೇಂದ್ರ ಹಣಕಾಸು ಸಚಿವರು ಹೆಚ್ಚಿನ ಒತ್ತು ನೀಡಿದ್ದು. ಬಹಳಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. 

ಪ್ರಧಾನ ಮಂತ್ರಿ ಗತಿಶಕ್ತಿ ಮಾಸ್ಟರ್​ ಪ್ಲಾನ್ ಮೂಲಕ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರಾಷ್ಟ್ರೀಯ ಮೂಲಸೌಕರ್ಯ ಪೈಪ್​ಲೈನ್ ರೂಪುರೇಷೆ ಮೂಲಕ ದೇಶದ ಭವಿಷ್ಯ ಅವಶ್ಯಕತೆಗಳನ್ನು ಅರಿತುಕೊಳ್ಳಲು ಮತ್ತು ಅದನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. 

ಕೋವಿಡ್ ಸಾಂಕ್ರಾಮಿಕದಿಂದಾಗಿ ಗ್ರಾಮೀಣ ಪ್ರದೇಶಗಳ ಮಕ್ಕಳ ಶಿಕ್ಷಣಕ್ಕೆ ತೊಡಕಾಗಿರುವುದಕ್ಕೆ ‘ವನ್ ಕ್ಲಾಸ್ ವನ್ ಟಿವಿ’ ಆರಂಭಿಸಲಾಗುವುದು. ಪ್ರಧಾನಿ ‘ಇ-ವಿದ್ಯಾ’ ಯೋಜನೆ ಅಡಿಯಲ್ಲಿ 200 ಚಾನೆಲ್​ಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಸಚಿವೆ ತಿಳಿಸಿದ್ದಾರೆ.

2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗುವುದು, ಮುಂದಿನ 3 ವರ್ಷಗಳಲ್ಲಿ ಉತ್ತಮ ದಕ್ಷತೆಯೊಂದಿಗೆ 400 ಹೊಸ ತಲೆಮಾರಿನ ವಂದೇ ಭಾರತ್ ರೈಲುಗಳನ್ನು ತರಲಾಗುವುದು,  ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳನ್ನು ಮುಂದಿನ 3 ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಮೆಟ್ರೋ ವ್ಯವಸ್ಥೆಗಳನ್ನು ನಿರ್ಮಿಸಲು ನವೀನ ಮಾರ್ಗಗಳ ಅನುಷ್ಠಾನ ಮಾಡಲಾಗುವುದು ಎಂದರು.

ಈ ಕೇಂದ್ರ ಬಜೆಟ್ ಮುಂದಿನ 25 ವರ್ಷಗಳ ‘ಅಮೃತ್ ಕಲ್’ಮೇಲೆ ಅಡಿಪಾಯ ಹಾಕಲು ಮತ್ತು ಆರ್ಥಿಕತೆಯ ನೀಲನಕ್ಷೆಯನ್ನು ನೀಡಲು ಪ್ರಯತ್ನಿಸುತ್ತದೆ. ನಾವು ಓಮೈಕ್ರಾನ್ ಅಲೆಯ ಮಧ್ಯೆ ಇದ್ದೇವೆ, ನಮ್ಮ ವ್ಯಾಕ್ಸಿನೇಷನ್ ಅಭಿಯಾನದ ವೇಗವು ಹೆಚ್ಚು ಸಹಾಯ ಮಾಡಿದೆ. ನಾವು ಬಲವಾದ ಬೆಳವಣಿಗೆಯೊಂದಿಗೆ ಮುಂದುವರಿಯುತ್ತೇವೆ ಎಂದು ನನಗೆ ವಿಶ್ವಾಸವಿದೆ. ಭಾರತದ ಬೆಳವಣಿಗೆ 9.27% ​​ಎಂದು ಅಂದಾಜಿಸಲಾಗಿದೆ ಎಂದು ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಹಿಂದಿನ ಲೇಖನಸಬ್ಸಿಡಿ ಬಿಡುಗಡೆಗೆ ಲಂಚ ಬೇಡಿಕೆ: ಜಂಟಿ ನಿರ್ದೇಶಕ, ಉಪನಿರ್ದೇಶಕಿ ಎಸಿಬಿ ಬಲೆಗೆ
ಮುಂದಿನ ಲೇಖನವಿಮೆಯುಳ್ಳ ವಾಹನವನ್ನು ಓಡಿಸಲು ಪಡೆದ ವ್ಯಕ್ತಿಗೆ ಅಪಘಾತದ ಪರಿಹಾರ ಲಭ್ಯವಿರುವುದಿಲ್ಲ: ಗುವಾಹಟಿ ಹೈಕೋರ್ಟ್‌