ಬೆಳಗಾವಿ: ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಹೊಳಿಹೊಸೂರ ಗ್ರಾಮದಲ್ಲಿ ಪೊಲೀಸರು ದಾಳಿ ನಡೆಸಿ ನಾಲ್ಕು ಲಕ್ಷ ರೂ ಬೆಲೆಯ ಮದ್ಯ ವಶಕ್ಕೆ ಪಡೆಯಲಾಗಿದೆ.
ಗ್ರಾಮದ ನಾಗಪ್ಪ ಗಂಗಪ್ಪ ಗೊರಕೊಳ್ಳ ಹಾಗೂ ರುದ್ರಪ್ಪ ಭೀಮಪ್ಪ ತೋರಗಲ್ಲ ಮನೆಯಲ್ಲಿ ಸಂಗ್ರಹಿಸಿಡಲಾಗಿದ್ದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.
3.82 ಲಕ್ಷ ರೂ ಬೆಲೆಯ 9600 ವಿಸ್ಕಿ ಪ್ಯಾಕೆಟ್‌ಗಳು, 9600 ಮತ್ತು 17,660 ರೂ ಮೌಲ್ಯದ 288 ವಿಸ್ಕಿ ಪ್ಯಾಕೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಿತ್ತೂರು ಮತ್ತು ಬೈಲಹೊಂಗಲ ಪೊಲೀಸರು ಜಂಟಿ ದಾಳಿ ನಡೆಸಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














