ಮನೆ ರಾಜ್ಯ ಎಸ್’ಡಿಪಿಐ – ಪಿಎಫ್’ಐ ಕಾರ್ಯಕರ್ತರ ಮನೆ ಮೇಲೆ ಪೊಲೀಸರ ದಾಳಿ: ಐವರು ವಶಕ್ಕೆ

ಎಸ್’ಡಿಪಿಐ – ಪಿಎಫ್’ಐ ಕಾರ್ಯಕರ್ತರ ಮನೆ ಮೇಲೆ ಪೊಲೀಸರ ದಾಳಿ: ಐವರು ವಶಕ್ಕೆ

0

ಮಂಗಳೂರು(Mangalore): ಎಸ್’ಡಿಪಿಐ ಮತ್ತು ನಿಷೇಧಿತ ಪಿಎಫ್’ಐ ಕಾರ್ಯಕರ್ತರ ಮನೆ ಮೇಲೆ ನಗರ ಪೊಲೀಸರು ದಾಳಿ ಮಾಡಿದ್ದು, ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪಿಎಫ್​​ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಬಳಿಕ ಇದೇ ಮೊದಲ ಬಾರಿಗೆ ದಾಳಿ ನಡೆಸಲಾಗಿದೆ.

ಮಂಗಳೂರಿನ ಪಣಂಬೂರು, ಸುರತ್ಕಲ್, ಉಳ್ಳಾಲ, ಮಂಗಳೂರು ಗ್ರಾಮಾಂತರ ಸೇರಿ ಹಲವೆಡೆ ಮುಖಂಡರು, ಕಾರ್ಯಕರ್ತರ ಮನೆಗಳ ಮೇಲೆ ಇಂದು ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಪಿಎಫ್​’ಐನ ಐವರು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.  UAPA Act, ಸೆಕ್ಷನ್ 121 ಸೇರಿ ವಿವಿಧ ಐಪಿಸಿ ಸೆಕ್ಷೆನ್ ಅಡಿ ಕೇಸ್ ದಾಖಲಿಸಲಾಗಿದೆ.