ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆಯ ಈ ಆದೇಶ ಪೋಷಕರ ಮತ್ತು ಪಾಲಕರ ಮುಖದಲ್ಲಿ ಮಂದಹಾಸ ಮೂಡಿಸಿದ್ದು ಮುಕ್ತ ಕಂಠದಿಂದ ಶ್ಲಾಘನೆಗೆ ಒಳಗಾಗಿದೆ.
ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆ ಈ ಹೊಸ ಆದೇಶವನ್ನು ಹೊರಡಿಸಿದ್ದು ಕೂಡಲೇ ಜಾರಿಗೆ ತರುವಂತೆ ಸೂಚಿಸಿದೆ. ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ ಇನ್ನು ಮುಂದೆ ಶಾಲಾ ಬಸ್ ಮತ್ತು ಇತರ ವಾಹನಗಳನ್ನು ಓಡಿಸುವ ಚಾಲಕರು ಮತ್ತು ಅವರ ಸಹಾಯಕರು ಕಡ್ಡಾಯವಾಗಿ ಪೊಲೀಸ್ ವೆರಿಫಿಕೇಶನ್ ಸರ್ಟಿಫಿಕೇಟ್ ಅನ್ನು ಹೊಂದಿರಬೇಕು ಎಂದು ಹೇಳಿದೆ.
ಈ ಮೂಲಕ ಶಾಲಾ ಬಸ್‌ಗಳಲ್ಲಿ ಮತ್ತು ಇತರ ವಾಹನಗಳಲ್ಲಿ ಮಕ್ಕಳ ಮೇಲೆ ನಡೆಯುತ್ತಿದ್ದ ಕಿರುಕುಳ ಮತ್ತು ಇತರ ತೊಂದರೆಗಳನ್ನು ನಿಲ್ಲಿಸುವತ್ತ ಮುಖ ಮಾಡಿದೆ. ಶಾಲಾ ಮಕ್ಕಳ ಮೇಲೆ ವಾಹನಗಳಲ್ಲಿ ನಡೆಯುತ್ತಿದ್ದ ಶೋಷಣೆ ಮತ್ತು ಕಿರುಕುಳವನ್ನು ನಿಯಂತ್ರಿಸಲು ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮೇಲೆ ತಿಳಿಸಿದಂತೆ, ಬಸ್‌ನ ಚಾಲಕರು ಮತ್ತು ಸಹಾಯಕರು ಪೊಲೀಸ್ ವೇರಿಫಿಕೇಷನ್ ನಡೆಸಿದ ಬಳಿಕ ಸಿಗುವ ಪ್ರಮಾಣ ಪತ್ರವನ್ನು ಸ್ಟೂಡೆಂಟ್ ಅಚಿವ್‌ಮೆಂಟ್ ಟ್ರ್ಯಾಕಿಂಗ್ ಸಿಸ್ಟ ಪೋರ್ಟಲ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಈ ಕುರಿತಾಗಿ ಶಾಲಾ ಮ್ಯಾನೇಜ್‌ಮೆಂಟ್‌ಗಳಿಗೆ ಸೂಚನೆ ನೀಡಲಾಗಿದ್ದು, ಕಟ್ಟುನಿಟ್ಟಾಗಿ ಈ ನಿಯಮವನ್ನು ಪಾಲಿಸಬೇಕು ಎಂದು ಸಹ ತಿಳಿಸಲಾಗಿದೆ. ಇನ್ನು ಈ ಸರ್ಟಿಫಿಕೇಟ್‌ಗಳನ್ನು ಎರಡು ವರ್ಷಗಳಿಗೆ ಒಂದು ಬಾರಿ ರಿನೀವಲ್ ಸಹ ಮಾಡಿಸಬೇಕು ಎಂದು ಸೂಚಿಸಿದೆ.
ಈ ಆದೇಶವನ್ನು ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಹೊರಡಿಸಿದ್ದು, ಕಡ್ಡಾಯವಾಗಿ ಶಾಲಾ ಮ್ಯಾನೇಜ್‌ಮೆಂಟ್‌ಗಳು ಇದನ್ನು ಪಾಲಿಸಬೇಕು. ಸಹಾಯಕರಾಗಿ ಮಹೀಳೆಯರನ್ನೇ ನೇಮಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಸರ್ಕಾರದ ಈ ಆದೇಶವನ್ನು ಸ್ವಾಗತಿಸಿರುವ ಖಾಸಗಿ ಶಾಲೆಗಳು, ಈ ಸರ್ಟಿಫಿಕೇಟ್ ಅನ್ನು ಉಚಿತವಾಗಿ ನೀಡುವಂತೆ ಸರ್ಕಾರವನ್ನು ಕೋರಿದ್ದಾರೆ ಎಂದು ಸಹ ತಿಳಿದು ಬಂದಿದೆ.