ಮನೆ ಕಾನೂನು ಕಲಬುರಗಿಯ ಅಂಗನವಾಡಿಗಳಲ್ಲಿ ಕಳಪೆ ಆಹಾರ ಪೂರೈಕೆ: ಲೋಕಾಯುಕ್ತ ದಾಳಿ

ಕಲಬುರಗಿಯ ಅಂಗನವಾಡಿಗಳಲ್ಲಿ ಕಳಪೆ ಆಹಾರ ಪೂರೈಕೆ: ಲೋಕಾಯುಕ್ತ ದಾಳಿ

0

ಕಲಬುರಗಿ: ಅಂಗನವಾಡಿಗಳಲ್ಲಿ ಕಳಪೆ ಆಹಾರ ಪೂರೈಕೆ ಹಿನ್ನೆಲೆ ಕಲಬುರಗಿ  ಜಿಲ್ಲೆಯ ಹಲವು ಅಂಗನವಾಡಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ಮಾಡಿದ್ದಾರೆ.

ಕಲಬುರಗಿಯ ಹನುಮಾನ ನಗರದ ತಾಂಡಾ ಅಂಗನವಾಡಿಯಲ್ಲಿ ಪರೀಶಿಲನೆ‌ ವೇಳೆ ಮೊಟ್ಟೆ ತೂಕದಲ್ಲಿ ಬಾರಿ ವ್ಯತ್ಯಾಸ ಬಂದಿದ್ದು, ನಿಗದಿತ ತೂಕಕ್ಕಿಂತ ಕಡಿಮೆಯಿದೆ. ಕನಿಷ್ಠ 50 ಗ್ರಾಂ ಮೊಟ್ಟೆ ತೂಕ ಇರಬೇಕು‌ ಎಂಬ ನಿಯಮವಿದೆ. ಆದ್ರೆ, ಅಂಗನವಾಡಿಗಳಲ್ಲಿ ಸಿಕ್ಕ ಮೊಟ್ಟೆಯ ತೂಕ 23-30 ಗ್ರಾಂ ಮಾತ್ರ ಇದೆ.

ಲೋಕಾಯುಕ್ತ ಎಸ್ಪಿ ಜಾನ್ ಆಂಟೋನಿ ನೇತೃತ್ವದಲ್ಲಿ ಇಂದು(ಮಾ.15) ಅಧಿಕಾರಿಗಳು ದಾಳಿ ನಡೆಸಿದ್ದರು. ಚಿಕ್ಕ ಮಕ್ಕಳಿಗೆ ಕೊಡುವ ಮೊಟ್ಟೆಯಲ್ಲಿಯೂ ಭಾರಿ ಗೋಲ್ ಮಾಲ್ ಆಗಿದ್ದು, ಮೊಟ್ಟೆ ತೂಕ ಕಡಿಮೆ ಜೊತೆಗೆ ಮೊಟ್ಟೆಗಳು ಕೂಡ ಕೊಳೆತ ಹೋಗಿವೆ. ಇನ್ನು ಆಹಾರ ಪೊಟ್ಟಣಗಳಲ್ಲಿಯೂ ಕಳಪೆ ಆಹಾರ ಪೂರೈಕೆ ಪತ್ತೆಯಾಗಿದೆ. ಇದನ್ನು ಕಂಡು ಖುದ್ದು ಲೋಕಾಯುಕ್ತ ಎಸ್ಪಿ ಹೌಹಾರಿದ್ದಾರೆ.

ಹಿಂದಿನ ಲೇಖನಸಿದ್ದರಾಮಯ್ಯ ಬಗ್ಗೆ ಹುಷಾರು ಎಂದು ರಾಮಕೃಷ್ಣ ಹೆಗಡೆ ಹೇಳಿದ್ದರು: ಪ್ರಧಾನಿ ಹೆಚ್ ​ಡಿ ದೇವೇಗೌಡ
ಮುಂದಿನ ಲೇಖನಮಾ.22ಕ್ಕೆ ‘ಲೈನ್ ಮ್ಯಾನ್’ ಸಿನಿಮಾ ತೆರೆಗೆ