ಮನೆ ರಾಷ್ಟ್ರೀಯ ಇರಾನ್ ವಶದಲ್ಲಿರುವ 17 ಮಂದಿ ಭಾರತೀಯರ ಬಿಡುಗಡೆಗೆ ಸಕಾರಾತ್ಮಕ ಪ್ರತಿಕ್ರಿಯೆ: ಎಸ್. ಜೈ ಶಂಕರ್

ಇರಾನ್ ವಶದಲ್ಲಿರುವ 17 ಮಂದಿ ಭಾರತೀಯರ ಬಿಡುಗಡೆಗೆ ಸಕಾರಾತ್ಮಕ ಪ್ರತಿಕ್ರಿಯೆ: ಎಸ್. ಜೈ ಶಂಕರ್

0

ಬೆಂಗಳೂರು: ಇರಾನ್ ವಶದಲ್ಲಿರುವ ಸರಕು ಹಡಗಿನಲ್ಲಿರುವ 17 ಮಂದಿ ಭಾರತೀಯರನ್ನು ಬಿಡುಗಡೆ ಮಾಡುವ ಸಂಬಂಧ ಆ ದೇಶದ ವಿದೇಶಾಂಗ ಸಚಿವರ ಜತೆ ಮಾತನಾಡಿದ್ದು, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಎಂದು ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಹೇಳಿದರು.

Join Our Whatsapp Group

ನಮ್ಮ ಮಾತುಕತೆ ಬಳಿಕ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಮುಂದಿನ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಭಾರತದ ಆತಂಕ ಅರ್ಥವಾಗುತ್ತದೆ ಎಂದು ಇರಾನ್ ವಿದೇಶಾಂಗ ಸಚಿವರು ನನಗೆ ಹೇಳಿದರು. ಹೀಗಾಗಿ ಬಿಡುಗಡೆ ವಿಶ್ವಾಸವಿದೆ. ಭಾರತದ ಒಳಗೂ, ಹೊರಗೂ ಪ್ರತಿಯೊಬ್ಬ  ಭಾರತೀಯನ ರಕ್ಷಣೆ ಮೋದಿಯವರ ಗ್ಯಾರಂಟಿ ಎಂದೂ ಹೇಳಿದರು.

ಮಧ್ಯ ಪ್ರಾಚ್ಯ ಭಾಗದಲ್ಲಿ 90 ಲಕ್ಷ ಭಾರತೀಯರು ವಾಸವಿದ್ದಾರೆ. ಅವರ ರಕ್ಷಣೆಯೇ ನಮ್ಮ ಬದ್ಧತೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಮತ್ತು ಇರಾನ್ ಎರಡೂ ದೇಶಗಳ ಸಂಪರ್ಕದಲ್ಲಿ ಇದ್ದೇವೆ , ಸಂಘರ್ಷ ಬಿಟ್ಟು ಮಾತುಕತೆಗೆ ಸಲಹೆ ನೀಡಿದ್ದೇವೆ ಎಂದು ಜೈ.ಶಂಕರ್ ತಿಳಿಸಿದರು.