ಮನೆ ಶಿಕ್ಷಣ ಮುಂದೂಡಲಾಗಿದ್ದ UGC NET, CSIR NET ಪರೀಕ್ಷಾ ದಿನಾಂಕ ಪ್ರಕಟ

ಮುಂದೂಡಲಾಗಿದ್ದ UGC NET, CSIR NET ಪರೀಕ್ಷಾ ದಿನಾಂಕ ಪ್ರಕಟ

0

ಹೊಸದಿಲ್ಲಿ: ಪರೀಕ್ಷಾ ಅಕ್ರಮಗಳ ಕಾರಣದಿಂದ ಇತ್ತೀಚೆಗಷ್ಟೇ ಮುಂದೂಡಿಕೆಯಾಗಿದ್ದ ಯುಜಿಸಿ ನೆಟ್ (UGC NET) ಮತ್ತು ಸಿಎಸ್ಐಆರ್ ನೆಟ್ (CSIR NET) ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಾಗಿದೆ.

Join Our Whatsapp Group

ಯುಜಿಸಿ ನೆಟ್ ಪರೀಕ್ಷೆಯು ಆಗಸ್ಟ್ 21 ಮತ್ತು ಸೆಪ್ಟೆಂಬರ್ 4, 2024 ರ ನಡುವೆ ನಡೆಯಲಿದೆ. ಮತ್ತೊಂದೆಡೆ ಸಿಎಸ್ಐಆರ್ ನೆಟ್ ಪರೀಕ್ಷೆಯು ಜುಲೈ 25-27, 2024 ರಂದು ನಿಗದಿಯಾಗಿದೆ. ಸಂಶೋಧನಾ ಫೇಲೋಶಿಪ್ ಮತ್ತು ಉಪನ್ಯಾಸಕ ವೃತ್ತಿ ಕೈಗೊಳ್ಳುವವರಿಗೆ ಈ ಎರಡು ಪರೀಕ್ಷೆಗಳು ಬಹುಮುಖ್ಯವಾಗಿದೆ.

ಇದೇ ವೇಳೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಆಲ್ ಇಂಡಿಯಾ ಆಯುಷ್ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆ (AIAPGET) 2024 ಜುಲೈ 6ರಂದು ನಡೆಯಲಿದೆ ಎಂದು ಪ್ರಕಟಿಸಿದೆ.

ಐಐಟಿಗಳು, ಎನ್‌ಐಟಿಗಳು, ಆರ್‌ಐಇಗಳು ಮತ್ತು ಸರ್ಕಾರಿ ಕಾಲೇಜುಗಳು ಸೇರಿದಂತೆ ಆಯ್ದ ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾಲಯಗಳು ಅಥವಾ ಸಂಸ್ಥೆಗಳಲ್ಲಿ ನಾಲ್ಕು ವರ್ಷಗಳ ಸಮಗ್ರ ಶಿಕ್ಷಕರ ಶಿಕ್ಷಣ ಕಾರ್ಯಕ್ರಮಕ್ಕೆ (ಐಟಿಇಪಿ) ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ (ಎನ್‌ಸಿಇಟಿ) ವೇಳಾಪಟ್ಟಿ ಮುಂದೂಡಲಾಗಿತ್ತು. ಇದು ಈಗ ಜುಲೈ 10 ರಂದು ನಡೆಸಲಾಗುವುದು.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸಿದ ಯುಜಿಸಿ-ನೆಟ್ ಪರೀಕ್ಷೆಯನ್ನು ನಡೆದ ಒಂದು ದಿನದ ನಂತರ ಶಿಕ್ಷಣ ಸಚಿವಾಲಯ ರದ್ದುಗೊಳಿಸಿದೆ. 9 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.