ಮನೆ ರಾಜ್ಯ 60 ಸಾವಿರ ಮೌಲ್ಯದ ಮೊಬೈಲ್ ಹಿಂತಿರುಗಿದ ಆಟೋ ಚಾಲಕನಿಗೆ ಪ್ರಶಂಸೆ

60 ಸಾವಿರ ಮೌಲ್ಯದ ಮೊಬೈಲ್ ಹಿಂತಿರುಗಿದ ಆಟೋ ಚಾಲಕನಿಗೆ ಪ್ರಶಂಸೆ

0

ಮೈಸೂರು(Mysuru): ಚಾಲಕರೊಬ್ಬರು ಆಟೋದಲ್ಲೇ ಮರೆತು ಹೋಗಿದ್ದ ೬೦ ಸಾವಿರ ಮೌಲ್ಯದ ಮೊಬೈಲ್ ವಾಪಸ್ ನೀಡಿ ಮಾನವೀಯತೆ ಮೆರೆದ ಆಟೋ ಚಾಲಕನನ್ನು ಪೊಲೀಸರು ಪ್ರಶಂಸಿದ್ದಾರೆ.

ಮೈಸೂರಿಗೆ ಪ್ರವಾಸಕ್ಕೆಂದು ಆಗಮಿಸಿದ್ದ ಬೆಂಗಳೂರಿನ ಮರಿಯಪ್ಪನ ಪಾಳ್ಯದ ಶ್ಯಾಮ್ ಎಂಬುವವರು ಜಗನ್ಮೋಹನ ಪ್ಯಾಲೆಸ್ ಹತ್ತಿರ ಬಾಡಿಗೆ ಆಟೋ ಹತ್ತಿ, ಜೂ ಹತ್ತಿರ ಇಳಿದುಕೊಂಡಿದ್ದು, ತಮ್ಮ ೬೦ ಸಾವಿರ ಮೌಲ್ಯದ ಒನ್ ಪ್ಲಸ್ ಮೊಬೈಲನ್ನು ಆಟೋದಲ್ಲಿಯೇ ಬಿಟ್ಟು ಹೋಗಿದ್ದರು.

ಈ ಸಂಬಂಧ ಶ್ಯಾಮ್ ಎಂಬುವವರು ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಸಿದ್ದಾರ್ಥ ಸಂಚಾರ ಠಾಣೆಯ ಎಎಸ್‌ಐಗೆ ವಿಚಾರ ತಿಳಿಸಿದ್ದು, ಈ ಬಗ್ಗೆ ವಿಚಾರ ಮಾಡುತ್ತಿದ್ದಾಗ ಸದರಿ ಆಟೋ ರಿಕ್ಷಾದ ಚಾಲಕ ರಾಜು ಸ್ಥಳಕ್ಕೆ ವಾಪಸ್ ಬಂದು ಶ್ಯಾಮ್ ಅವರು ಆಟೋದಲ್ಲಿ ಬಿಟ್ಟು ಹೋಗಿದ್ದ ಮೊಬೈಲನ್ನು ಶ್ಯಾಮ್ ನೀಡಿದ್ದಾರೆ.

ಮೊಬೈಲ್ ಅನ್ನು ವಾರಸುದಾರರಿಗೆ ಹಿಂತಿರುಗಿಸಿದ ಆಟೋ ಚಾಲಕನಿಗೆ ಪೊಲೀಸ್ ಇಲಾಖೆಯಿಂದ ಪ್ರಶಂಸಿಸಲಾಗಿದೆ.

ರಾಜು ಅವರ ಸಮಯೋಚಿತ ವರ್ತನೆ ಮತ್ತು ಪ್ರಾಮಾಣಿಕತೆಯನ್ನು ಮೈಸೂರು ನಗರ ಪೊಲೀಸ್ ಘಟಕದಿಂದ ಶ್ಲಾಘಿಸಿದ್ದು, ಈ ಸಂಬಂಧ  ಡಿಸಿಪಿ ಗೀತ ಪ್ರಸನ್ನ ರಾಜು ರವರಿಗೆ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿದ್ದಾರೆ.

ಹಿಂದಿನ ಲೇಖನಹೆಂಡತಿಯನ್ನು  ಹತ್ಯೆಗೈದು ಡ್ರಮ್ ನಲ್ಲಿ ತುಂಬಿಟ್ಟ ಗಂಡ
ಮುಂದಿನ ಲೇಖನಪಠ್ಯದಲ್ಲಿ ಬಿಟ್ಟ ಅಂಶ ಮತ್ತೆ ಸೇರಿಸುತ್ತೇವೆ: ಸಚಿವ ಬಿ.ಸಿ ನಾಗೇಶ್