ಮನೆ ರಾಜಕೀಯ ಶ್ರೀರಾಮಸೇನೆ ದೇಶದ್ರೋಹದ ಕೆಲಸ ಮಾಡಿಲ್ಲ: ಸಿದ್ದು ವಿರುದ್ಧ ಕಿಡಿಕಾರಿದ ಮುತಾಲಿಕ್‌

ಶ್ರೀರಾಮಸೇನೆ ದೇಶದ್ರೋಹದ ಕೆಲಸ ಮಾಡಿಲ್ಲ: ಸಿದ್ದು ವಿರುದ್ಧ ಕಿಡಿಕಾರಿದ ಮುತಾಲಿಕ್‌

0

ಬಾಗಲಕೋಟೆ (Bagalkote)- ಸಿದ್ದರಾಮಯ್ಯ ಅವರು ಗೊಂದಲ, ಹತಾಶೆಯಿಂದ ಮಾತನಾಡ್ತಿದಾರೆ ಅನಿಸುತ್ತೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.

ಬುಲ್ಡೋಜರ್ ನಿಂದ ಮೊದಲು ಶ್ರೀರಾಮಸೇನೆ ಕಿತ್ತೊಗೆಯಬೇಕು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಶ್ರೀರಾಮಸೇನೆ ನಾವೇನು ದೇಶದ್ರೋಹದ ಕೆಲಸ ಮಾಡಿಲ್ಲ. ನಾವು ಪೊಲೀಸ್‌‌ ಠಾಣೆಗೆ, ಎಂಎಲ್ ಎ ಮನೆಗೆ ಬೆಂಕಿ ಹಚ್ಚಿಲ್ಲ ಇದನ್ನು ಸಿದ್ದರಾಮಯ್ಯ ಅವ್ರು ಎಂಐಎಂ, ಮುಸ್ಲಿಮರಿಗೆ ಹೇಳಬೇಕಿದೆ. ಮೇಲಿಂದ‌ ಮೇಲೆ ಹಿಂದೂ ಸಂಘಟನೆಗಳ ಮೇಲಿನ ಪ್ರಹಾರ ಸರಿಯಲ್ಲ ಎಂದಿದ್ದಾರೆ.

ನಾವು ಕಾನೂನು ವಿರುದ್ಧದ ಕಾರ್ಯಗಳು ಮಾಡಿಲ್ಲ, ಮಾಡೋದು ಇಲ್ಲ. ಕಾಂಗ್ರೆಸ್ ದೇಶಕ್ಕೆ ಅಹಿತಕರ ಕೆಲಸ ಮಾಡ್ತಿದೆ. ಕಾಂಗ್ರೆಸ್ ತುಷ್ಟೀಕರಣ ಮಾಡಿದ ಪರಿಣಾಮ ಡಿಜೆ ಹಳ್ಳಿ, ಕೆಜೆ ಹಳ್ಳಿ, ಹುಬ್ಬಳ್ಳಿ ಅಥವಾ ಪಾದರಾಯಪುರ ಘಟನೆಗಳು, ಹರ್ಷನ ಕೊಲೆ ಇರಬಹುದು. ಇವುಗಳಿಗೆಲ್ಲಾ ಕಾರಣ ಕಾಂಗ್ರೆಸ್ ಎಂದು ಮುತಾಲಿಕ್ ಕಿಡಿಕಾರಿದರು.

ಶ್ರೀರಾಮ ಸೇನೆ, ಭಜರಂಗದಳದ ಮೇಲೆಕೆ ನಿಮ್ಮ ಕಣ್ಣು? ಇವುಗಳ ಹೆಸರುಗಳನ್ನು ಕೇಳಿದ ತಕ್ಷಣ ನಿಮಗೇಕೆ ತೊಂದರೆ ಆಗ್ತಿದೆ? ಹುಬ್ಬಳ್ಳಿಯಲ್ಲಿ ದೇವಸ್ಥಾನಗಳ ಮೇಲೆ ದಾಳಿ ನಡೆಸಲಾಗಿದೆ, ಕಾನೂನು ಬಾಹಿರ ಬಡಾವಣೆಯಲ್ಲಿ ಮುಸ್ಲಿಂಮರು ವಾಸ ಮಾಡ್ತಿದಾರೆ. ಜಾಗ ಯಾವುದೂ ಅವರದಲ್ಲ, ಪರ್ಮಿಶನ್‌ ಇಲ್ಲ, ದಾಖಲಾತಿ ಇಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್ ಮೂಲೆಗುಂಪಾಗಿದೆ. ಕರ್ನಾಟಕದಲ್ಲಿ ಸ್ವಲ್ಪ ಉಸಿರಾಡುತ್ತಿದೆ. ಆ ಸ್ವಲ್ಪ ಉಸಿರಾಟಕ್ಕೂ ಪೂರ್ಣ ವಿರಾಮ ಕೊಡಲು ಹಿಂದೂ ಸಮಾಜ ನಿಧಾ೯ರ ಮಾಡಿದೆ. ಕಾಂಗ್ರೆಸ್ ಪೂರ್ಣ ನಾಶ ಆಗೋವರೆಗೂ ಈ ದೇಶಕ್ಕೆ ಸುಖ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜಸ್ಥಾನದಲ್ಲಿ ಇರೋದು ಕಾಂಗ್ರೆಸ್ ಸರ್ಕಾರ ಗಲಾಟೆ ವೇಳೆ ಅಲ್ಲಿನ 300 ವರ್ಷಗಳ ಪುರಾತನ ದೇವಾಲಯ ಒಡೆಯಲಾಗಿದೆ. ಅಲ್ಲಿನ ಸಿಎಂ ತಪ್ಪಾಗಿದೆ ಅಂತಾ ಪುನಃ ನಿರ್ಮಾಣ ಮಾಡ್ತೀವಿ ಅಂದಿದಾರೆ. ಸಾಕಷ್ಟು ಹಿಂದು ಬಡವರ ಮನೆಗಳನ್ನು ಒಡೆಯಲಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ಅವ್ರು ಏನ್ ಹೇಳ್ತಾರೆ? ಎಂದು ಪ್ರಶ್ನಿಸಿದರು.

ಹಿಂದಿನ ಲೇಖನಅಕ್ಷಯ ತೃತೀಯಕ್ಕೆ ಮುಸ್ಲಿಂರ ಅಂಗಡಿಯಿಂದ ಚಿನ್ನ ಖರೀದಿಸಬೇಡಿ: ಪ್ರಮೋದ್‌ ಮುತಾಲಿಕ್‌
ಮುಂದಿನ ಲೇಖನಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರಿಡಬೇಡಿ: ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಬಿಎಸ್ವೈ