ಮನೆ ಅಪರಾಧ ಎರಡು ಬೈಕ್‌ ಗಳ ನಡುವೆ ಅಪಘಾತ: ಓರ್ವ ಸಾವು: ಇನ್ನೋರ್ವನಿಗೆ ಗಂಭೀರ ಗಾಯ

ಎರಡು ಬೈಕ್‌ ಗಳ ನಡುವೆ ಅಪಘಾತ: ಓರ್ವ ಸಾವು: ಇನ್ನೋರ್ವನಿಗೆ ಗಂಭೀರ ಗಾಯ

0

ಮೈಸೂರು: ಎರಡೂ ಪಲ್ಸರ್ ಬೈಕ್‌ ಗಳ ನಡುವೆ ಡಿಕ್ಕಿಯಾಗಿ  ಓರ್ವ ಬೈಕ್ ಸವಾರ ಸಾವನ್ನಪ್ಪಿ ಮತ್ತೋರ್ವ ಸವಾರ ಗಾಯಗೊಂಡಿರುವ ಘಟನೆ ಮೈಸೂರಿನ ಬಲ್ಲಾಳ್ ವೃತ್ತದ ಶ್ರೀರಾಮಂಮದಿರ ಬಳಿ ತಡರಾತ್ರಿ ಈ ಘಟನೆ ನಡೆದಿದೆ.

ದರ್ಶನ್ ಕುಮಾರ್ (27) ಮೃತಪಟ್ಟ ಬೈಕ್ ಸವಾರ. ಮತ್ತೋರ್ವ ಬೈಕ್ ಸವಾರ ಶಿವಕುಮಾರ್‌ಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗಂಗೋತ್ರಿ ಲೇಔಟ್ ನಿವಾಸಿಯಾಗಿರುವ ದರ್ಶನ್ ಕುಮಾರ್, ಕಾರ್ಪೋರೇಷನ್‌ ನಲ್ಲಿ ವಾಟರ್‌ಮ್ಯಾನ್ ಆಗಿದ್ದ ಕೆಲಸ ನಿರ್ವಹಿಸುತ್ತಿದ್ದನು. ಬೈಕ್ ಅಪಘಾತಕ್ಕೆ ನ್ಯೂ ಕಾಂತರಾಜ ಅರಸು ರಸ್ತೆ ಗುಂಡಿಬಿದ್ದಿರುವುದೇ ಕಾರಣ. ನಗರದಲ್ಲಿ ಗುಂಡಿ ಬಿದ್ದ ರಸ್ತೆಗಳಿಂದ ಹೆಚ್ಚಿದ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ಘಟನೆ ಸಂಬಂಧ ಕೆ.ಆರ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಗುಂಡು ಹಾರಿಸಿ ಮಕ್ಕಳನ್ನು ಹೆದರಿಸಿದ ಸಚಿವರ ಮಗನನ್ನು ಥಳಿಸಿದ ಗ್ರಾಮಸ್ಥರು
ಮುಂದಿನ ಲೇಖನರಾಷ್ಟ್ರಗೀತೆ ಹಾಡುವಾಗ ‘ಚ್ಯೂಯಿಂಗ್ ಗಮ್’ ಜಗಿದು ಟ್ರೋಲ್ ಆದ ಕೊಹ್ಲಿ