ಮನೆ ಯೋಗಾಸನ ನಿತ್ಯ ಅಭ್ಯಾಸಕ್ಕೆ ಪ್ರಾಣಯಾಮಗಳು

ನಿತ್ಯ ಅಭ್ಯಾಸಕ್ಕೆ ಪ್ರಾಣಯಾಮಗಳು

0

ಪ್ರಾಣಾಯಾಮ ಮಾಡುವ ಸಮಯದಲ್ಲಿ ಪಾಲಿಸಬೇಕಾದ ಮಹತ್ವದ ವಿಷಯಗಳು :-

*ಪ್ರಾಣಾಯಾಮಮಾಡುವಾಗ ಬೆನ್ನು ನೇರವಾಗಿರಲಿ ಮತ್ತು ಮೈ,ಕೈಗಳು ಸದಾ ಸಡಿಲವಾಗಿರಲಿ ಆದ್ದರಿಂದ ಪ್ರಾಣ ಶಕ್ತಿ ಸಾರಾಗ ಚಲನೆಗೆ ಅನುಕೂಲ ವಾಗುವುದರಿಂದ ಅತ್ಯಂತ ಮಹತ್ವದ್ದಾಗಿದ್ದೆ.

*ಉಸಿರು ತೆಗೆದುಕೊಂಡಾಗ ಹೊಟ್ಟೆಯನ್ನು ಉಬ್ಬಿಸಬಾರದು, ಎದೆಯನ್ನು ಉಬ್ಬಿಸಬೇಕು.

*ಸಾಧ್ಯವಾದಷ್ಟು ಜಲಂದರ ಬಂಧ ಮತ್ತು ಮುದ್ರೆಗಳೊಂದಿಗೆ ಪ್ರಾಣಾಯಾಮ ಮಾಡಬೇಕು.

*ಪ್ರಾಣಾಯಮ ಮಾಡುವಾಗ ಕಣ್ಣುಮುಚ್ಚಿರಬೇಕು. ಯೋಗಾಸನ ಮಾಡುವಾಗ ಕಣ್ಣು ತೆರೆದಿರಬೇಕು.

*ಶ್ವಾಸಕೋಶಗಳು ಮಾಡುವ ಕ್ರಿಯೆಯನ್ನು ಮನಸ್ಸು ಕೇವಲ ಗಮನಿಸುತ್ತಿರಲಿ ಕಣ್ಣು ಕಿವಿಗಳು ಅಂತರ ದೃಷ್ಟಿ ಹೊಂದಿರಲಿ.

*ಪ್ರಾಣಾಯಾಮದ ನಂತರ ಯೋಗಾಸನ ಮಾಡಕೂಡದು, ಮೊದಲು ಯೋಗಾಸನಗಳು ಆ ನಂತರ ಪ್ರಾಣಯಾಮಗಳನ್ನು ಮಾಡಬೇಕು.

* ಆದರೆ ಕಷ್ಟಕರವಾದ ಆಚರಣೆ ಮಾಡಿದ ನಂತರ ತಕ್ಷಣದಲ್ಲಿ ಪ್ರಾಣಾಯಾಮ ಮಾಡಕೂಡದು ಸ್ವಲ್ಪ ಹೊತ್ತು ವಿಶ್ರಮಿಸಿ ಮುಂದುವರಿಸಬಹುದು ಅದಕ್ಕೆ ಶಿರಸಾಸನ ಸರ್ವಂಗಾಸನ ಮತ್ತು ಸೂರ್ಯ ನಮಸ್ಕಾರಗಳು ಮಾಡಿದ ತಕ್ಷಣದಲ್ಲಿ ಶವಾಸನ ಮಾಡಲು ಹೇಳಿರುವುದನ್ನು ಗಮನಿಸಬಹುದು.

* ದೇಹ ಮನಸ್ಸು ಧಣಿದಾಗ ದುರ್ಬಲವಾಗಿದ್ದಾಗ ಅಭ್ಯಾಸ ಬೇಡ, ಮನಸ್ಸು ಉದ್ವೇಗಗೊಂಡಾಗ ಅಂತರ-ಕುಂಭಕ ಬೇಡ ನೆನಪಿರಲಿ. ಮತ್ತೆ ಮತ್ತೆ ಹೇಳಲೇ ಬೇಕಿದೆ ನಂತರ ಕುಂಭಕವನ್ನು ಸರಿಯಾಗಿ ಸಾಧನೆ ಮಾಡಿದ ನಂತರ ಮಾತ್ರ ಪ್ರಾರಂಭಿಸಬೇಕು. ಪ್ರಾರಂಭದ ಹಂತದಲ್ಲಂತೂ ಬೇಡವೇ ಬೇಡ.

* ಮಲಗುವ ಮುಂಚೆ ಕುಂಭಕ ಸಹಿತ ಪ್ರಾಣಾಯಾಮ ಬೇಡ ನಿದ್ರೆ ಬರೋದಿಲ್ಲ ಬದಲಿಗೆ ಕುಂಬಾಕ ರಹಿತ ಅಥವಾ ಬಾಹ್ಯ ಕುಂಭಕದೊಂದಿಗೆ ಪ್ರಾಣಾಯಾಮ ಮಾಡಬೇಕು. ನಿದ್ರಾಹೀನತೆ ವಾಸಿಯಾಗುತ್ತದೆ.

* ಊಟ ಮಾಡಿದ ತಕ್ಷಣ ಅಥವಾ ಹಸಿವಾದಾಗ ಕೂಡ ಪ್ರಾಣಾಯಾಮದ ಅಭ್ಯಾಸ ಬೇಡ ಹಸಿವಾದಾಗ ಒಂದು ಲೋಟ ಹಣ್ಣಿನ ರಸ ಅಥವಾ ಹಾಲು ಸೇವಿಸಿ ಆರಂಭಿಸಬಹುದು.

ಇನ್ನೂ ನಮ್ಮ ಸಾಮಾನ್ಯ ಆರೋಗ್ಯಕ್ಕೆ ಪ್ರತಿದಿನ ಅಭ್ಯಾಸಕ್ಕೆ ಅತ್ಯವಶ್ಯಕವಾದ ಈ ಕೆಳಗಿನ ಪ್ರಾಣಾಯಾಮಗಳನ್ನು ಸ್ವಲ್ಪ ವಿವರವಾಗಿ ಅಭ್ಯಾಸಿಸೋಣ :

1.ಸಾಮಾನ್ಯ ಪ್ರಾಣಾಯಮ (ಕನಿಷ್ಠ 10 ನಿಮಿಷಗಳವರೆಗೆ)

2. ಕಪಾಲಭಾತಿ (ಕನಿಷ್ಠ ಐದು ನಿಮಿಷದವರೆಗೆ ಸೆಕೆಂಡ್ ಒಂದರಂತೆ ಐದು ನಿಮಿಷಕ್ಕೆ ರೂ.300 ಸಲ ಸಾಕು.)

3.ಬಾಹ್ಯ ಪ್ರಾಣಾಯಾಮ ( 7ರಿಂದ 8 ಸಲ)

4. ಅಗ್ನಿಸಾರ ಕ್ರಿಯೆ ( 7 ರಿಂದ 8 ಸಲ)

5. ಉಜ್ಜಯಿ ಪ್ರಾಣಾಯಾಮ ( 7 ರಿಂದ 8 ಸಲ)

6. ನಾಡಿಶೋಧನ ಮತ್ತು ನಾಡಿ ಶುದ್ದಿ ಪ್ರಾಣಾಯಾಮ (ಕನಿಷ್ಠ 15 ನಿಮಿಷಗಳವರೆಗೆ)

7. ಉದ್ಗೀತ (ಸಬೀಜ ಪ್ರಣಾಯಾಮ) : ( ಸಶಬ್ದವಾಗಿ ಐದಾರು ಸಲ ದೀರ್ಘ ಓಂಕಾರ ಧ್ಯಾನ )

8. ಪ್ರಾಣವದ್ಯಾನ (ನಿರ್ಬೀಜ ಪ್ರಾಣಾಯಾಮ) : ನಿಶಬ್ದವಾಗಿ ಅದೇ ಐದಾರುಸಲ ದೀರ್ಘಓಂಕಾರ ಧ್ಯಾನ )

9. ಭ್ರಮರಿ ಪ್ರಾಣಾಯಾಮ ( 8 ರಿಂದ 10ಸಲ)

ಇವೆಲ್ಲ ಸೇರಿ ಅಂದರೆ ಈ ಮೇಲಿನ ಪ್ರಾಣಾಯಾಮಗಳಿಗೆ ಮಾತ್ರವೇ. ಸುಮಾರು 40 ರಿಂದ 45 ನಿಮಿಷಗಳು ಸಾಕು. ದಿನಾಲೂ ಇಷ್ಟೊಂದು ಬೇಕೇ ಬೇಕು ಮತ್ತೆ ಮತ್ತೆ ಹೇಳಲೇಬೇಕಿದೆ –“ ಯೋಗಾಭ್ಯಾಸದಲ್ಲಿ ಒಳದಾರಿ  ಅಥವಾ (short cut method-ಶಾರ್ಟ್ಕಟ್ ಮೆಥಡ್) ಇಲ್ಲವೇ ಇಲ್ಲ. ಪ್ರಾಮಾಣಿಕ ಸಾಧನೆ ಮಾಡಿದಷ್ಟು ನಿಮಗೆ ಫಲಪ್ರಾಪ್ತಿ.

ಇದರೊಂದಿಗೆ ಸಮಯ ಸಿಕ್ಕಾಗಲ್ಲ ಧ್ಯಾನ ಮುದ್ರೆ ಅಥವಾ ಪ್ರಾಣ ಮುದ್ರೆಗಳೊಂದಿಗೆ ಅಥವಾ ಮುದ್ರೆಗಳಿಲ್ಲದೆ ಹಾಗೆ ಅದರ ಕುಂಭಕರ ಹಿತವಾಗಿ ದೀರ್ಘ ಪ್ರಣಯಮ ಎಷ್ಟು ಮಾಡಿದರು ತುಂಬಾ ಒಳ್ಳೆಯದೇ, ಇನ್ನು ಪ್ರಾರಂಬಿಸಿ.

1.ಸಾಮಾನ್ಯ ಪ್ರಾಣಾಯಾಮ :-

ಪದ್ಮಾಸನ, ಸಿದ್ದಾಸನ, ವಜ್ರಾಸನ, ಸುಖಾಸನ ಇತ್ಯಾದಿ ಯಾವುದೇ ಅನುಕೂಲವಾದ ಹಾಸನದಲ್ಲಿ ಕುಳಿತು ಬೆನ್ನು ನೇರವಾಗಿಸಿ, ಧ್ಯಾನ ಮುದ್ರೆ ಅಥವಾ ಪ್ರಾಣಮುದ್ರೆಯಲ್ಲಿ ಕುಳಿತುಕೊಂಡು ಕಣ್ಣು ಮುಚ್ಚಿಕೊಂಡು ನಿಧಾನವಾಗಿ ದೀರ್ಘವಾಗಿ ಸಂಪೂರ್ಣವಾಗಿ ಶ್ವಾಸಕೋಶಗಳು ತುಂಬುವಷ್ಟು ಉಸಿರು ತೆಗೆದುಕೊಂಡು ಅದೇ ಕ್ರಮದಲ್ಲಿ ಉಸಿರನ್ನು ಹೊರಗೆ ಬಿಡಬೇಕು. ಉಸಿರಾಟ ಕ್ರಮಬದ್ಧವಾಗಿರಲಿ ಉಸಿರನ್ನು ತೆಗೆದುಕೊಂಡಾಗ ಹೊಟ್ಟೆ ಉಬ್ಬಬಾರದು, ಎದೆ ಒಬ್ಬಬೇಕು. ಉಸಿರಾಟ ಸಶಬ್ದವಾಗಿರಬೇಕು. ಉಸಿರನ್ನು ಒಳಗೆ ತೆಗೆದುಕೊಳ್ಳುವಾಗ ʼಸೊʼ ಎಂಬ ಮತ್ತು ಹೊರಬಿಡುವಾಗ ʼಹಂʼ ಶಬ್ದ ಕೇಳಬೇಕು. ಮತ್ತು ನಿಮ್ಮ ಗಮನ ಸಂಪೂರ್ಣವಾಗಿ ಉಸಿರಾಟದ ಮೇಲೆಯೆ ಇರಬೇಕು. ಐದು ನಿಮಿಷದಿಂದ ಪ್ರಾರಂಭಿಸಿ ಪ್ರತಿದಿನ ಪ್ರತಿ ಕನಿಷ್ಠ 20 ನಿಮಿಷ ಅಥವಾ ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು ಮಾಡಿದರೆ ಇನ್ನೂ ಉತ್ತಮ. ಪ್ರಯತ್ನ ಪಡಬಹುದು.

ಪ್ರಯೋಜನಗಳು :-

ರಕ್ತದೊತ್ತಡ ಶಮನ, ಉದರ, ಶ್ವಾಸಕೋಶಗಳಿಗೆ ಬಲ, ಉಬ್ಬಸ ರೋಗಕ್ಕೆ ಪ್ರಯೋಜನ. ಹೃದಯ ಶುದ್ಧಿ, ರೋಗ ನಿರೋಧಕ ಶಕ್ತಿ ಹೆಚ್ಚಳ, ಆಯುರ್ವೇದಿ ,ಇತ್ಯಾದಿ…

ಮುಂದುವರೆಯುತ್ತದೆ…