ಮೈಸೂರು: ನಾಳೆ ನಾಡಿನೆಲ್ಲೆಡೆ ಶಿವರಾತ್ರಿ ಹಬ್ಬದ ಸಂಭ್ರಮವಾಗಿದ್ದು, ಮೈಸೂರು ಅರಮನೆ ಆವರಣದಲ್ಲಿರುವ ತ್ರೀನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬಕ್ಕೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ.
ನಾಳೆ ದೇವಸ್ಥಾನದ ಶಿವಲಿಂಗಕ್ಕೆ ನಾಳೆ ಅಭಿಷೇಕ ಪೂಜೆ ಸಲ್ಲಿಸಿ ನಂತರ 11ಕೆಜಿಯ ಚಿನ್ನದ ಕೊಳಗವನ್ನ ಶಿವಲಿಂಗಕ್ಕೆ ಧಾರಣೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಇಂದು ಜಿಲ್ಲಾಡಳಿತದ ಖಜಾನೆಯಿಂದ ಅರಮನೆ ಆಡಳಿತ ಮಂಡಳಿಗೆ ಚಿನ್ನದ ಕೊಳಗವನ್ನ ಹಸ್ತಾಂತರ ಮಾಡಲಾಗಿದೆ.
ಶ್ರೀಕಂಠನದತ್ತ ನರಸಿಂಹ ರಾಜ ಒಡೆಯರ್ ಹುಟ್ಟಿದ ನೆನಪಿಗಾಗಿ 1952ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರು ಕೊಡುಗೆ ನೀಡಿರುವ ಚಿನ್ನದ ಮುಖವಾಡ ಇದಾಗಿದೆ. ಚಿನ್ನದ ಮುಖವಾಡವಿರುವ ಶಿವಲಿಂಗ ನೋಡಲು ನಾಳೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ.















