ಮನೆ ದೇವಸ್ಥಾನ ಪ್ರತಿಷ್ಠಾ ಮಾಹಿತಿ : ಶ್ರೀ ಕ್ಷೇತ್ರದ ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳು

ಪ್ರತಿಷ್ಠಾ ಮಾಹಿತಿ : ಶ್ರೀ ಕ್ಷೇತ್ರದ ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳು

0

 1991 ಶ್ರೀ ಅನ್ನಪೂರ್ಣ ಚೈತನ್ಯ ಛತ್ರ ಭೋಜನಶಾಲೆಯ ನಿರ್ಮಾಣವನ್ನು ಪೂರ್ಣಗೊಳಿಸಿ ಆಗಿನ ಮುಖ್ಯಮಂತ್ರಿಗಳಾದ ಶ್ರೀಯುತ ಎಸ್ ಬಂಗಾರಪ್ಪನವರಿಂದ ಉದ್ಘಾಟನೆಯನ್ನು ನೆರವೇರಿಸಿದ್ದಾರೆ. ದೇವಸ್ಥಾನದ ತ್ರಿಕಾಲ ಪೂಜಾ ವ್ಯವಸ್ಥೆಯನ್ನು ಪ್ರಾರಂಭಿಸಿ ಯಾತ್ರಾದಿಗಳಿಗೆ ದಿನವಿಡೀ ಸೇವೆ ಸಲ್ಲಿಸುವ ದರ್ಶನ ಪಡೆಯುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

Join Our Whatsapp Group

 1992  ಯಾತ್ರಾದಿಗಳ ಉಪಯೋಗಕ್ಕಾಗಿ ಸುಸಜ್ಜಿತ ಸ್ಥಾನಗೃಹ ಹಾಗೂ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

 1993 ನೌಕರರ ವಸತಿ ಗೃಹಗಳಿಗೆ ವಿದ್ಯುತ್ ಸೌಲಭ್ಯವನ್ನು ಅಳವಡಿಸಿಲಾಯಿತು. ಹೊರನಾಡಿನ ಅಂಕರಖಣದಲ್ಲಿ ಗುಹಾಂತರ್ಗತ ಸಿದ್ದ ಗಣಪತಿ ದೇವಸ್ಥಾನವನ್ನು ನಿರ್ಮಿಸಿ ಸಿದ್ದ ಗಣಪತಿಯನ್ನು ಪ್ರತಿಷ್ಠಾಪಿಸಿದ್ದಾರೆ.

 1994 ಹಳೆಯ ಪ್ರಾಥಮಿಕ ಶಾಲೆಯಿಂದ ದೇವಸ್ಥಾನದವರೆಗೆ ಕಚ್ಚಾ ರಸ್ತೆಯನ್ನು ವ್ಯವಸ್ಥಿತ ರೀತಿಯಲ್ಲಿ ಡಂಬರೀಕರಣ ಗೊಳಿಸಲಾಗಿದೆ.

 1995 ದೇವರ ಅಭಿಷೇಕಕ್ಕಾಗಿ ಶುದ್ಧ ನೀರಿನ ಬಳಕೆ ಬಾವಿಯನ್ನು ನಿರ್ಮಿಸಲಾಗಿದೆ.

 1996 ದೇವಸ್ಥಾನದ ಎಡ ಪಾರ್ಶ್ವದಲ್ಲಿ ಸುಸಜ್ಜಿತ ವಸತಿಗೃಹವನ್ನು ನಿರ್ಮಾಣಸಲಾಗಿದೆ.ತುರ್ತು ಸಂದರ್ಭದಲ್ಲಿ ವಿದ್ಯುತ್ ಪೂರೈಕೆಗಾಗಿ ಜನರೇಟನ್ನು ಅಳವಡಿಸಲಾಗಿದೆ.

 1997 ಗರ್ಭಗುಡಿಯ ಸುತ್ತಲಿನ ಪ್ರಕಾರದಲ್ಲಿ ಯಾತ್ರಾದಿಗಳು  ವರ್ಷದ ಎಲ್ಲಾ ಕಾಲದಲ್ಲೂ ಅನಿರ್ಬಾಧಿತವಾಗಿ ಸಂಚರಿಸಲು ಮೇಲ್ಚಾವಣಿಯನ್ನು ನಿರ್ಮಿಸಲಾಗಿದೆ. ದೇವಸ್ಥಾನಕ್ಕೆ ಹಾಗೂ ನೌಕರರ ವರ್ಗದವರ ವಸತಿ ಗೃಹಗಳಿಗೆ ಶುದ್ಧವಾದ ನೀರಿನ ಪೂರೈಕೆಗೆ ಒಂದು ಕಿ.ಮೀ.  ಉದ್ದದ ಕೊಳವೆ ಮಾರ್ಗವನ್ನು ನಿರ್ಮಿಸಲಾಗಿದೆ.ಅನ್ನಪೂರ್ಣ ಚೈತನ್ಯ ಛತ್ರದ ಮೇಲಂತಸ್ತಿನಲ್ಲಿ 24 ಕೊಠಡಿಗಳ ವಸತಿ ಗೃಹವನ್ನು ನಿರ್ಮಿಸಲಾಗಿದೆ.

 1998 160 ಕೊಠಡಿಗಳ ವಸತಿಗೃಹ ಹಾಗೂ ವಿಶಾಲ ಭೋಜನ ಶಾಲೆಯ ಸಂಕೀರ್ಣದ ನಿರ್ಮಾಣ ಕಾರ್ಯ ಆರಂಭ.

 1999 ದೇವಸ್ಥಾನದ ವಿವಿಧ ವಿಭಾಗಗಳಿಗೆ ಸಂಪರ್ಕ ಕಲ್ಪಿಸುವ ಅಂತರ ಸಂಪರ್ಕ ದೂರವಾಣಿ ಹಾಗೂ ಕಾರ್ಯಾಲಯದಲ್ಲಿ ಗಣಕ ಯಂತ್ರಗಳ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

 2,000 ಶ್ರೀ ಉದ್ಭವ ಗಣಪತಿ ಸ್ವಾಮಿಗೆ ರಜತ ಮಂಟಪ ಹಾಗೂ ಶ್ರೀ ಆದಿಶಕ್ತಿ ಅಮ್ಮನವರಿಗೆ ನೂತನ ರಜತ ಪ್ರಭಾವಳಿಯ ಸಮರ್ಪಣೆ. ಹೊರನಾಡಿನ ಅಂಕರಖಣದಲ್ಲಿ ವೇದ ಪಾಠಶಾಲೆಯನ್ನು ಪ್ರಾರಂಭಿಸಲಾಗಿದೆ.ಇಲ್ಲಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ವಸತಿಯೊಂದಿಗೆ ವೈದಾಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೊರನಾಡಿನ ರಥ ಬೀದಿಯಲ್ಲಿ ಸೌರಶಕ್ತಿ ಚಾಲಿತ ವಿದ್ಯುತ್ ದೀಪಗಳನ್ನು ಸ್ಥಾಪಿಸಲಾಗಿದೆ.