ಮನೆ ರಾಜಕೀಯ ಆಜಾದಿ ಕಿ ಅಮೃತ ಮಹೋತ್ಸವ: ಪ್ರತಿಯೊಬ್ಬರು ಮನೆ ಮುಂದೆ ಧ್ವಜಾರೋಹಣ ಮಾಡುವಂತೆ ಪ್ರಧಾನಿ ಕರೆ

ಆಜಾದಿ ಕಿ ಅಮೃತ ಮಹೋತ್ಸವ: ಪ್ರತಿಯೊಬ್ಬರು ಮನೆ ಮುಂದೆ ಧ್ವಜಾರೋಹಣ ಮಾಡುವಂತೆ ಪ್ರಧಾನಿ ಕರೆ

0

ನವದೆಹಲಿ(New delhi): 75ನೇ ಸ್ವಾತಂತ್ರ್ಯೋತ್ಸವದ  ಅಮೃತ ಮಹೋತ್ಸವದ ಅಂಗವಾಗಿ ಪ್ರತಿಯೊಬ್ಬರು ತಮ್ಮ ಮನೆ ಮುಂದೆ ತ್ರಿವರ್ಣ ಧ್ವಜ ಹಾರಿಸುವಂತೆ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನಿ, ‘ಹರ್‌ ಘರ್‌ ತಿರಂಗ’ ಆಂದೋಲನವನ್ನು ಬಲಪಡಿಸಲು ಆಗಸ್ಟ್‌ 13-15ರ ನಡುವೆ ರಾಷ್ಟ್ರಧ್ವಜವನ್ನು ಮನೆಯಲ್ಲಿ ಆರೋಹಣ ಅಥವಾ ಪ್ರದರ್ಶನ ಮಾಡಬೇಕು. ಈ ಅಭಿಯಾನ ರಾಷ್ಟ್ರಧ್ವಜದ ಮೇಲೆ ಭಾರತೀಯರ ಸಂಬಂಧವನ್ನು ಮತ್ತಷ್ಟು ಬಲಗೊಳಿಸುತ್ತದೆ ಎಂದು ಹೇಳಿದ್ದಾರೆ.

1947ರ ಜುಲೈ 22ರಂದು ರಾಷ್ಟ್ರ ಧ್ವಜವನ್ನು ಅಂಗೀಕರಿಸಲಾಯಿತು ಎಂದು ಸ್ಮರಿಸಿರುವ ಅವರು, ಸ್ವತಂತ್ರ ಭಾರತದ ಧ್ವಜದ ಕನಸು ಕಂಡ ಎಲ್ಲರ ಪ್ರಯತ್ನದ ಮತ್ತು ಶೌರ್ಯದ ಸ್ಮರಣೆಯನ್ನು ನಾವಿಂದು ಮಾಡುತ್ತಿದ್ದೇವೆ. ಅವರ ಕನಸಿನಂತೆ ರಾಷ್ಟ್ರವನ್ನು ಸದೃಢವಾಗಿಸಲು ಬದ್ಧರಾಗಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ.

ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಅನಾವರಣಗೊಳಿಸಿದ ಮೊದಲ ತ್ರಿವರ್ಣ ಧ್ವಜದ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ.