Saval TV on YouTube
ಬೆಂಗಳೂರು: ಮೆಜೆಸ್ಟಿಕ್’ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು-ಮೈಸೂರು-ಚೆನ್ನೈ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್’ಪ್ರೆಸ್ ವಿಶೇಷ ರೈಲಿಗೆ ಚಾಲನೆ ನೀಡಿದರು.
ವಂದೇ ಭಾರತ್ ಎಕ್ಸ್‌ಪ್ರೆಸ್ ವಿಶೇಷ ರೈಲಿನ ಬಳಿಕ ಪ್ರಧಾನಿಯವರು ಭಾರತ್ ಗೌರವ್ ಕಾಶಿ ದರ್ಶನ ವಿಶೇಷ ರೈಲಿಗೂ ಚಾಲನೆ ನೀಡಿದರು.
ವಂದೇ ಭಾರತ್ ಎಕ್ಸ್’ಪ್ರೆಸ್ ರೈಲು ಸಂಜೆ 5.20ಕ್ಕೆ ಎಂಜಿಆರ್ ಚೆನ್ನೈ ಸೆಂಟ್ರಲ್ ಸ್ಟೇಷನ್ ತಲುಪಲಿದೆ. 16 ಕೋಚ್ಗಳ ವಂದೇ ಭಾರತ್ ರೈಲು ಬೆಂಗಳೂರು ಕಂಟೋನ್ಮೆಂಟ್, ಬೈಯ್ಯಪ್ಪನ ಹಳ್ಳಿ, ಕೆ.ಆರ್.ಪುರಂ, ವೈಟ್ ಫೀಲ್ಡ್, ದೇವನಗೊಂದಿ, ಮಾಲೂರು, ತ್ಯಾಕಲ್, ಬಂಗಾರಪೇಟೆ, ವರದಪುರ, ಬಿಸನತ್ತಂ, ಕುಪ್ಪಂ, ಮುಲನೂರ್, ಸೋಮನಾಯಕ್ಕನ್ ಪಟ್ಟಿ, ಜೋಲಾರ್ ಪೇಟ್ ಜಂಕ್ಷನ್ ಸೇರಿದಂತೆ 40 ರೈಲು ನಿಲ್ದಾಣಗಳಲ್ಲಿ ಸ್ಟಾಪ್ ತೆಗೆದುಕೊಳ್ಳಲಿದೆ.