ಮನೆ ಅಂತಾರಾಷ್ಟ್ರೀಯ  ಶೋಪಿಯಾನ್ ಎನ್’ಕೌಂಟರ್: ಜೆಇಎಂ ಉಗ್ರನ ಹೊಡೆದುರುಳಿಸಿದ ಭದ್ರತಾ ಪಡೆ

 ಶೋಪಿಯಾನ್ ಎನ್’ಕೌಂಟರ್: ಜೆಇಎಂ ಉಗ್ರನ ಹೊಡೆದುರುಳಿಸಿದ ಭದ್ರತಾ ಪಡೆ

0

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಕಪ್ರೆನ್ ಎಂಬಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಉಗ್ರನನ್ನು ಶುಕ್ರವಾರ ಭದ್ರತಾ ಪಡೆಗಳು ಎನ್‌’ಕೌಂಟರ್‌’ನಲ್ಲಿ ಹೊಡೆದುರುಳಿಸಿವೆ.

ಈ ಬಗ್ಗೆ ಕಾಶ್ಮೀರ ವಲಯ ಪೊಲೀಸ್‌ ಇಲಾಖೆ ಟ್ವೀಟ್‌ ಮಾಡಿ ಮಾಹಿತಿ ನೀಡಿದೆ.

 ‘ಭಯೋತ್ಪಾದಕ ಸಂಘಟನೆ ಜೆಇಎಮ್‌ನ ಒಬ್ಬ ಉಗ್ರನನ್ನು ಹೊಡೆದುರಳಿಸಲಾಗಿದೆ. ಉಗ್ರನನ್ನು ಕುಲ್ಗಾಮ್-ಶೋಪಿಯಾನ್ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಕಮ್ರಾನ್ ಭಾಯಿ ಹನೀಸ್ ಎಂದು ಗುರುತಿಸಲಾಗಿದೆ. ಇನ್ನೂ ಶೋಧ ನಡೆಯುತ್ತಿದೆ’ ಎಂದು ಕಾಶ್ಮೀರದ ಎಡಿಜಿಪಿ ವಿಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಹಿಂದಿನ ಲೇಖನವಂದೇ ಭಾರತ್ ಎಕ್ಸ್‌’ಪ್ರೆಸ್‌ ವಿಶೇಷ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ
ಮುಂದಿನ ಲೇಖನಶಿರಸಿ: ಶಾಲಾ ಬಸ್ ಪಲ್ಟಿ- ಮಹಿಳೆ ಸಾವು