ನವದೆಹಲಿ(Newdelhi): ಪ್ರಧಾನಿ ನರೇಂದ್ರ ಮೋದಿ ಅವರು 5ಜಿ ದೂರಸಂಪರ್ಕ ಸೇವೆಗಳಿಗೆ ಶನಿವಾರ ಚಾಲನೆ ನೀಡಲಿದ್ದಾರೆ.
ಅವರು ಆಯ್ದ ನಗರಗಳಲ್ಲಿ ಈ ಸೇವೆಗೆ ಚಾಲನೆ ನೀಡಲಾಗುತ್ತಿದ್ದು, ಎರಡು ವರ್ಷಗಳಲ್ಲಿ ದೇಶಾದ್ಯಂತ ಹಂತ ಹಂತವಾಗಿ ಲಭ್ಯವಾಗಲಿದೆ.
5ಜಿ ಸೇವೆಗಳು ಆರಂಭವಾದ ನಂತರದಲ್ಲಿ ಹೊಸ ಆರ್ಥಿಕ ಅವಕಾಶಗಳು ತೆರೆದುಕೊಳ್ಳುವ ನಿರೀಕ್ಷೆ ಇದೆ. 5ಜಿ ತಂತ್ರಜ್ಞಾನವು 4ಜಿ ತಂತ್ರಜ್ಞಾನಕ್ಕಿಂತ ಹಲವು ಪಟ್ಟು ಹೆಚ್ಚು ವೇಗದ ಇಂಟರ್ನೆಟ್ ಸಂಪರ್ಕವನ್ನು ಒದಗಿಸುತ್ತದೆ.
ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೊ, ಸುನೀಲ್ ಭಾರ್ತಿ ಮಿತ್ತಲ್ ಮಾಲೀಕತ್ವದ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು 5ಜಿ ಸೇವೆಗಳನ್ನು ಆರಂಭಿಸಲು ಅಗತ್ಯವಿರುವ ತರಂಗಾಂತರಗಳನ್ನು ಹರಾಜಿನ ಮೂಲಕ ಖರೀದಿಸಿವೆ.
ಖಾಸಗಿ ನೆಟ್‌ವರ್ಕ್ ಸ್ಥಾಪಿಸಲು ಅಗತ್ಯವಿರುವ 5ಜಿ ತರಂಗಾಂತರಗಳನ್ನು ಅದಾನಿ ಸಮೂಹ ಖರೀದಿ ಮಾಡಿದೆ.
Saval TV on YouTube