ಮನೆ ಅಪರಾಧ ಖೈದಿಗಳು ಪೆಟ್ರೋಲ್ ಬಂಕ್ ಉದ್ಯೋಗಿಗಳಾಗಿ ಕೆಲಸ ಮಾಡಲು ಅವಕಾಶ

ಖೈದಿಗಳು ಪೆಟ್ರೋಲ್ ಬಂಕ್ ಉದ್ಯೋಗಿಗಳಾಗಿ ಕೆಲಸ ಮಾಡಲು ಅವಕಾಶ

0


ಬೆಂಗಳೂರು(Bengaluru): ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಜೈಲು ಶಿಕ್ಷಿಗೆ ಗುರಿಯಾಗಿ ಕೇಂದ್ರ ಕಾರಾಗೃಹದಲ್ಲಿರುವ ಖೈದಿಗಳಿಗೆ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಖೈದಿಗಳಿಗೆ ಎಫ್‍ಎಂ ರೇಡಿಯೋ ಕೇಂದ್ರ, ಕೈದಿಗಳ ಭೇಟಿಗೆ ಹೊಸ ತಂತ್ರಜ್ಞಾನ, ಕೃಷಿ ಚಟುವಟಿಕೆಯೊಂದಿಗೆ ಕೈದಿಗಳಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ.
ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳಿಗೆ ಕೆಲಸ ನೀಡಲು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸಹಭಾಗಿತ್ವದಲ್ಲಿ ಜೈಲು ಆವರಣದಲ್ಲಿ ಒಂದು ಎಕರೆ ಜಾಗ ಗುರುತಿಸಲಾಗಿದೆ.
ಪೆಟ್ರೋಲ್ ಬಂಕ್ ಗಳಲ್ಲಿ ಕೆಲಸ ಮಾಡುವ ಕೈದಿಗಳಿಗೆ ದಿನನಿತ್ಯ ಕೂಲಿ ನೀಡಿ ತಿಂಗಳ ಕೊನೆಯಲ್ಲಿ ದುಡಿದ ಹಣ ಅವರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಈಗಾಗಲೇ ಪೆಟ್ರೋಲ್ ಬಂಕ್ ತೆರೆಯಲು ಅಧಿಕಾರಿಗಳು ಸಭೆ ನಡೆಸಿದ್ದು, ಸದ್ಯದಲ್ಲಿಯೇ ಪೆಟ್ರೋಲ್ ಬಂಕ್ ಆರಂಭವಾಗಲಿದೆ. ಇದರೊಂದಿಗೆ ದೊಡ್ಡ ಶಾಪಿಂಗ್ ಮಾಲ್ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಪೆಟ್ರೋಲ್ ಬಂಕ್ ನ್ ಉಸ್ತುವಾರಿಯನ್ನು ಜೈಲು ಹಕ್ಕಿಗಳೇ ನೋಡಿಕೊಳ್ಳಲಿದ್ದಾರೆ.
ಈ ಪೆಟ್ರೋಲ್ ಬಂಕ್ ನಲ್ಲಿ ಜೈಲಿನಲ್ಲಿರುವ ಕೈದಿಗಳು ಗ್ರಾಹಕರ ವಾಹನಗಳಿಗೆ ಪೆಟ್ರೋಲ್ ತುಂಬಿಸಲಿದ್ದಾರೆ ಎನ್ನಲಾಗಿದೆ. ಕೈದಿಗಳಿಗೆ ಉದ್ಯೋಗ ನೀಡುವ ಈ ಯೋಜನೆ ಇದ್ದಾಗಿದೆ. ಈಗಾಗಲೇ ಸ್ವತಃ ಕೈದಿಗಳು ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿಕೊಂಡು ಬರುತ್ತಿದ್ದಾರೆ.
ಇವರು ತಯಾರಿಸುವ ಉತ್ಪನ್ನಗಳಿಗೆ ಈಗಲೂ ಉತ್ತಮ ಬೇಡಿಕೆ ಇದ್ದು, ಕೊರೊನಾ ಸಮಯದಲ್ಲಿ ಮಾಸ್ಕ್ ತಯಾರಿಸಲು ಅವರಿಗೆ ತರಬೇತಿ ನೀಡಿ, ಪ್ರತಿದಿನ ತರಬೇತಿ ಅವಧಿಯಲ್ಲಿ 75 ರೂ.ಹಾಗೂ ತರಬೇತಿ ಬಳಿಕ 100 ರೂ.ನೀಡಲಾಗಿತ್ತು. ಈಗ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಪೆಟ್ರೋಲ್ ಬಂಕ್ ತೆರೆದು ಜೈಲು ಖೈದಿಗಳನ್ನೇ ನಿಯೋಜಿಸಿಕೊಳ್ಳುವ ಖೈದಿಗಳಿಗೆ ಉದ್ಯೋಗ ಒದಗಿಸಲು ಮುಂದಾಗಿದ್ದು,ಕಾರಾಗೃಹದ ಆವರಣದಲ್ಲಿ ಪೆಟ್ರೋಲ್ ಬಂಕ್ ಸ್ಥಾಪಿಸಲು ಕಾರಾಗೃಹ ಕೈಗೊಂಡಿರುವ ಮೊದಲ ಪ್ರಯತ್ನ ಇದಾಗಿದೆ.
ಕೇಂದ್ರ ಕಾರಾಗೃಹದಲ್ಲಿರುವ ಖೈದಿಗಳ ಮನ ಪರಿವರ್ತನೆಗೆ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರೊಂದಿಗೆ ಕೈದಿಗಳಿಗೆ ಗ್ರಂಥಾಲಯ, ಕೃಷಿ ಚಟುವಟಿಕೆ, ರೆಡಿಯೋ ಜಾಕಿ, ಸಾಕ್ಷರತಾ ತರಬೇತಿ, ಯೋಗ ಧ್ಯಾನ ಮತ್ತು ಪ್ರಾಣಾಯಾಮ ತರಬೇತಿಯೊಂದಿಗೆ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಮುಖ್ಯ ವಾಹಿನಿಗೆ ತರಲು ಮುಂದಾಗಿದ್ದು, ಸದ್ಯದಲ್ಲಿಯೇ ಪೆಟ್ರೋಲ್ ಬಂಕ್ ಆರಂಭಿಸಿ ಉದ್ಯೋಗಿಗಳಾಗಿ ಕೆಲಸ ಮಾಡಲಿದ್ದಾರೆ. ಜೊತೆಗೆ ಸಂಬಳವು ಪಡೆಯಲಿದ್ದಾರೆ.
ಕೇಂದ್ರ ಕಾರಾಗೃಹದ ಜಮೀನಿನಲ್ಲಿ ಪೆಟ್ರೋಲ್ ಬಂಕ್ ಆರಂಭಿಸಲು ಇಂಡಿಯನ್ ಆಯಿಲ್ ಕಾರ್ಪೋರೇಶನ್ಸಂ ಯೋಗದಲ್ಲಿ ಶೀಘ್ರ ಆರಂಭವಾಗಲಿದ್ದು, ಈ ಪೆಟ್ರೋಲ್ ಬಂಕ್ ನಲ್ಲಿ ಕೈದಿಗಳಿಗೆ ಕೆಲಸ, ನಿಯೋಜಿಸಿಕೊಂಡು ಸಂಬಳ ಅವರೇ ನೀಡಲಿದ್ದಾರೆ.