ಮನೆ ರಾಜ್ಯ ಚುನಾವಣಾ ಪ್ರಚಾರಕ್ಕೆ ಬಂದಾಗ ಸಮಸ್ಯೆ ಬಗೆಹರಿಸುವಂತೆ ಹೇಳಿದ ಮಹಿಳೆ ಮೇಲೆ ಪ್ರೀತಂಗೌಡ ಬೆಂಬಲಿಗನಿಂದ ಹಲ್ಲೆ: ದೂರು...

ಚುನಾವಣಾ ಪ್ರಚಾರಕ್ಕೆ ಬಂದಾಗ ಸಮಸ್ಯೆ ಬಗೆಹರಿಸುವಂತೆ ಹೇಳಿದ ಮಹಿಳೆ ಮೇಲೆ ಪ್ರೀತಂಗೌಡ ಬೆಂಬಲಿಗನಿಂದ ಹಲ್ಲೆ: ದೂರು ದಾಖಲು

0

ಹಾಸನ: ರಾಜ್ಯ ವಿಧಾನಸಭೆ ಚುನಾವಣೆಗೆ ಕೇವಲ ಆರು ದಿನಗಳು ಬಾಕಿ ಉಳಿದಿದ್ದು, ವಿವಿಧ ಪಕ್ಷಗಳ ಚುನಾವಣಾ ಪ್ರಚಾರ ಜೋರಾಗಿಯೇ ನಡೆಯುತ್ತಿದೆ.

Join Our Whatsapp Group

ಈ ನಡುವೆ ಪ್ರಚಾರಕ್ಕೆ ಬಂದಾಗ ಸಮಸ್ಯೆ ಬಗೆಹರಿಸುವಂತೆ ಹೇಳಿದ ಮಹಿಳೆ ಮೇಲೆಯೇ ಹಲ್ಲೆ ಮಾಡಿದ ಆರೋಪ ಹೊಸಕೊಪ್ಪಲು ಬಡಾವಣೆಯ ಗಾಂಧಿನಗರದಲ್ಲಿ ಕೇಳಿಬಂದಿದೆ.

ಬುಧವಾರ(ಮೇ.3) ರಾತ್ರಿ ಬಿಜೆಪಿ ಅಭ್ಯರ್ಥಿ ಶಾಸಕ ಪ್ರೀತಂಗೌಡ, ಬಿಜೆಪಿ ಮುಖಂಡ ಹಾಗೂ ನಗರಸಭೆ ಅಧ್ಯಕ್ಷ ಮೋಹನ್ ಕುಮಾರ್ ಪುತ್ರ ಚೇತನ್ ಮತ್ತು ಸಂಗಡಿಗರು ಪ್ರಚಾರಕ್ಕೆ ತೆರಳಿದ್ದರು.

ಈ ವೇಳೆ ಗೀತಮ್ಮ ಎಂಬ ಮಹಿಳೆ, ನಮ್ಮ ಮನೆ ಬಳಿ ಕಸ ಸಂಗ್ರಹ ವಾಹನ ಬರೋದಿಲ್ಲ, ಬೀದಿ ದೀಪ ಇಲ್ಲ. ನಮ್ಮ ಬೇಡಿಕೆ ಈಡೇರಿಸಿ ಆನಂತರ ಮತ ಹಾಕುತ್ತೆವೆ ಎಂದಿದ್ದಾಳೆ. ಇದೇ ಕಾರಣಕ್ಕೆ ಮಹಿಳೆ ಗೀತಮ್ಮ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಪ್ರಶ್ನೆ ಮಾಡಿದ ಮಹಿಳೆ ಮೇಲೆ ಹಲ್ಲೆ ಮಾಡಿ ಮನೆಯ ಗೇಟ್ ಒದ್ದು, ಮನೆ ಮುಂದೆ ಗಲಾಟೆ ಮಾಡೋ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ನಗರಸಭೆ ಅಧ್ಯಕ್ಷನ ಪುತ್ರ ಚೇತನ್ ಮತ್ತು ಸುಪ್ರಿತ್ ಎಂಬುವವರ ವಿರುದ್ಧ ಹಾಸನ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಹಿಂದಿನ ಲೇಖನಕಾಂಗ್ರೆಸ್ ಪಕ್ಷ ಎಸ್.ಡಿ.ಪಿ.ಐ, ಪಿಎಫ್’ಐ  ಕಪಿಮುಷ್ಟಿಯಲ್ಲಿದೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಂದಿನ ಲೇಖನವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಿಸಿದ ಕೆಎಸ್​’ಆರ್​’ಟಿಸಿ