ಮನೆ Uncategorized ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಸ್ಲೀಪರ್ ಬಸ್ ಪಲ್ಟಿ: ಇಬ್ಬರು ಪ್ರಯಾಣಿಕರು ಸಾವು

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಸ್ಲೀಪರ್ ಬಸ್ ಪಲ್ಟಿ: ಇಬ್ಬರು ಪ್ರಯಾಣಿಕರು ಸಾವು

0

ಯಾದಗಿರಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಸ್ಲೀಪರ್ ಬಸ್ ಪಲ್ಟಿಯಾಗಿ ಇಬ್ಬರು ಪ್ರಯಾಣಿಕರು ಸಾವನಪ್ಪಿರುವ ಘಟನೆ ಶಹಾಪುರ ಹತ್ತಿಗೂಡು ಬ್ರಿಡ್ಜ್ ಬಳಿ ಭಾನುವಾರ ತಡರಾತ್ರಿ ನಡೆದಿದೆ.

Join Our Whatsapp Group

ಕಲಬುರಗಿಯಿಂದ ಬೆಂಗಳೂರಿಗೆ ಹೊರಟಿದ್ದ ಬಸ್ ಶಹಾಪುರ ಮಾರ್ಗವಾಗಿ ತಾಲೂಕಿನ ಹತ್ತಿಗುಡೂರು ಬ್ರಿಡ್ಜ್ ಬಳಿ  ಸಂಚರಿಸುವಾಗ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ ನಲ್ಲಿದ್ದ 37 ಪ್ರಯಾಣಿಕರ ಪೈಕಿ ಕಲಬುರಗಿಯ ಇಬ್ಬರು ಪ್ರಯಾಣಿಕರು ಸಾವಿಗೀಡಾಗಿದ್ದಾರೆ.

ಭಾಗಲಕೋಟ ಭಾಗದ ಬಸ್ ಚಾಲಕ  ಯಾದಗಿರಿ, ಕಲಬುರಗಿ, ಶಹಾಪುರ ರಸ್ತೆ ಮಾರ್ಗಕ್ಕೆ ಹೊಸ ಅನುಭವ ಇರುವ ಕಾರಣ ರಸ್ತೆಯ ಹಿಡಿತ ಅರಿಯದ ಚಾಲನ ನಿಯಂತ್ರಣ ತಪ್ಪಿದೆ ಎಂದು ಹೇಳಲಾಗುತ್ತಿದೆ.

ಭಾನುವಾರ ರಾತ್ರಿ 11.40 ಸುಮಾರು ಹತ್ತಿಗುಡೂರು ಬ್ರಿಡ್ಜ್ ಕ್ರಾಸ್ ಬಳಿ ಎದುರಿಗೆ ವಾಹನ ಬಂದ ತಕ್ಷಣ ರಸ್ತೆಗೆ ಬದಿಗೆ ತೆಗೆದುಕೊಂಡ ಬಸ್ ಚಾಲಕ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದುವಿಗೆ ಪಲ್ಟಿಯಾಗಿ ಬಿದ್ದಿರುವ ಘಟನೆ ತಡವಾಗಿ ತಿಳಿದುಬಂದಿದೆ.

ಶಹಾಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಿಂದಿನ ಲೇಖನಎಲ್ಲಾ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಜಾರಿ
ಮುಂದಿನ ಲೇಖನರಾಜ್ಯ ವಿಧಾನಪರಿಷತ್ ಚುನಾವಣೆ: ಆರು ಸ್ಥಾನಗಳಿಗೆ ಮತದಾನ