ಮನೆ ಮನರಂಜನೆ ಡಿ.9 ರಂದು ಪ್ರಿಯಾಮಣಿ ನಟನೆಯ  `56’ ಚಿತ್ರ ಬಿಡುಗಡೆ

ಡಿ.9 ರಂದು ಪ್ರಿಯಾಮಣಿ ನಟನೆಯ  `56’ ಚಿತ್ರ ಬಿಡುಗಡೆ

0

ಪ್ರಿಯಾಮಣಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “56′ ಚಿತ್ರ ಡಿ.09ರಂದು ಬಿಡುಗಡೆಯಾಗುತ್ತಿದೆ.

ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಅನ್ನು, ಹಿರಿಯ ಸಿನಿಮಾ ಪ್ರಚಾರಕರ್ತ ನಾಗೇಂದ್ರ ಅವರು ಬಿಡುಗಡೆ ಮಾಡಿದರು.

ಪ್ರವೀಣ್‌ ರೆಡ್ಡಿ ಈ ಚಿತ್ರದ ನಾಯಕ ಹಾಗೂ ನಿರ್ಮಾಪಕ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ.

ನಿರ್ದೇಶಕ ರಾಜೇಶ್‌ ಆನಂದ್‌ ಲೀಲಾ ಮಾತನಾಡಿ, ನಿರ್ಮಾಪಕ ಪ್ರವೀಣ್‌ ರೆಡ್ಡಿ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಚಿತ್ರಕ್ಕೆ ನಟಿ ಪ್ರಿಯಾಮಣಿ ಅವರು ಚಿನ್ನದ ಕಳಶವಿದ್ದಂತೆ. ಮೆಡಿಕಲ್‌ ಮಾಫಿಯಾದ ಸುತ್ತ ಸಾಗುವ ಸೈನ್ಸ್‌ ಫಿಕ್ಷನ್‌ ಕತೆ ಈ ಚಿತ್ರದಲ್ಲಿದೆ. ಇಲ್ಲಿವರೆಗೆ ಇದನ್ನು ಯಾರೂ ತೆರೆಮೇಲೆ ತರುವ ಪ್ರಯತ್ನ ಮಾಡಿಲ್ಲ ಎಂದರು.

ಸಂಚಿತ್‌ ಫಿಲಂಸ್‌ ವೆಂಕಟ್‌ ಗೌಡ ಚಿತ್ರದ ವಿತರಣೆಯ ಜವಾಬ್ದಾರಿ ಹೊತ್ತಿದ್ದು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗೆಯಾಗಲಿದೆ.

ಹಿಂದಿನ ಲೇಖನದಾಖಲೆಗಳನ್ನು ಲಿಂಕ್‌ ಮಾಡುವಲ್ಲಿ ರಾಜ್ಯಕ್ಕೆ 2 ನೇ ಸ್ಥಾನ: ಸಚಿವ ಡಾ.ಕೆ.ಸುಧಾಕರ್
ಮುಂದಿನ ಲೇಖನಶಿವಮೊಗ್ಗ: ಶರಾವತಿ ನೀರಿಗೆ ಇಳಿದ ಬಸ್, ತಪ್ಪಿದ ಭಾರಿ ದುರಂತ