ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಹತ್ಯೆ ಸಂಚಿಗೆ ಸಂಬಂಧಿಸಿದೆ ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರು, ಕಾರ್ಯಕರ್ತ ರವಿ ಎಂಬಾತನ ಜೊತೆ ಮಾತನಾಡಿದ್ದಾರೆಂಬ ಆಡಿಯೋ ವೈರಲ್ ಇದಾಗಿದೆ.
ಸುದ್ದಿಗೋಷ್ಠಿಯಲ್ಲಿ ರವಿ ಎಂಬಾತನ ಜೊತೆಯಲ್ಲಿ ಮಣಿಕಂಠ ರಾಥೋಡ್ ಮಾತಾಡಿದ್ದಾರೆ ಎನ್ನಲಾದ ಆಡಿಯೋ ತುಣಕನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದೆ.
ಆಡಿಯೋದಲ್ಲಿ ಏನಿದೆ?
ರವಿ, ಕಾರ್ಯಕರ್ತ: ಅಣ್ಣಾ, ನಿಮ್ಮ ಮೇಲೆ ಎಷ್ಟು ಕೇಸ್ಗಳಿವೆ?
ಮಣಿಕಂಠ ರಾಥೋಡ್: ಯಾವ ಬೋ.. ಮಗ ಕಾಂಗ್ರೆಸ್ ನವನು ಕೇಳಲಿ. 44 ಕೇಸ್ ಗಳಿವೆ ಅಂತ ಹೇಳಲಿ.
ರವಿ: ಅಣ್ಣಾ…ಅದನ್ನು ಖರ್ಗೆ ಕಡೆಯವರು ಮಾಡ್ತಾರೆ. ನಾವ್ಯಾರು ಮಾಡಲ್ಲ.
ಮಣಿಕಂಠ ರಾಥೋಡ್: ಖರ್ಗೆ ಕಡೆಯಿಂದಲೇ ಕೇಳಲೇ?
ರವಿ: ಅಣ್ಣಾ ನನ್ನ ಹತ್ರ ಅವರ ನಂಬರ್ ಇಲ್ಲ. ಕೇಳೋಣ ಅಂದ್ರೆ ಅವರ ನಂಬರ್ ಇಲ್ಲ, ಇದ್ರೆ ಕೊಡಿ. ಫೋನ್ ಮಾಡಿ ನಮ್ಮ ಅಣ್ಣನ ಬಗ್ಗೆ ಯಾಕೆ ಹಿಂಗ್ ಮಾತಾಡ್ತೀರಿ ಅಂತ ಕೇಳ್ತೀನಿ.
ಮಣಿಕಂಠ ರಾಥೋಡ್: ನನ್ನ ಬಳಿ ಅವರ ನಂಬರ್ ಇಲ್ಲಾ. ನಂಬರ್ ಇದ್ದಿದ್ದರೇ ಪ್ರಿಯಾಂಕ್ ಖರ್ಗೆ ಅವರ ಹೆಂಡತಿ. ಮಕ್ಕಳನ್ನು ಸಾಫ್ ಮಾಡುತ್ತಿದ್ದೆ.
ರವಿ: ಯಾರ ಹೆಂಡರ ಮಕ್ಕಳ ಅಣ್ಣಾ?
ಮಣಿಕಂಠ ರಾಥೋಡ್: ಇವಾಗ ಯಾರ ಹೆಸರು ತೊಗೊಂಡಿ ನೀನು?
ರವಿ: ಖರ್ಗೆ ಅವರದ್ದು ಅಣ್ಣಾ.
ಮಣಿಕಂಠ ರಾಥೋಡ್: ಖರ್ಗೆ ಅವರ ನಂಬರ್ ಇದ್ರೆ ಅವರ ಹೆಂಡ್ರು ಮಕ್ಕಳನ್ನೆಲ್ಲಾ ಸಾಫ್ ಮಾಡ್ತೀನಿ ಲೇ? ನಂಬರ್ ಇದ್ರೆ ನಾನೇ ಫೋನ್ ಮಾಡಿ ಬೈಯ್ತಿದ್ದೆ ಎಂದು ಹೇಳಿರುವುದು ಕಂಡು ಬಂದಿದೆ.