ಮನೆ ರಾಜ್ಯ ಪಾಕ್ ಪರ ಘೋಷಣೆ: ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ ಎಂದ ಡಾ ಯತೀಂದ್ರ ಸಿದ್ದರಾಮಯ್ಯ

ಪಾಕ್ ಪರ ಘೋಷಣೆ: ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ ಎಂದ ಡಾ ಯತೀಂದ್ರ ಸಿದ್ದರಾಮಯ್ಯ

0

ಮೈಸೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ವಿಚಾರವಾಗಿ ಇಂದು ಪ್ರತಿಕ್ರಿಯಿಸಿದ ಮಾಜಿ‌ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ, ಬಿಜೆಪಿಯವರು ಈ ವಿಚಾರವನ್ನು ರಾಜಕೀಯ ಮಾಡ್ತಿದ್ದಾರೆ.   ಲೋಕಸಭಾ ಚುನಾವಣೆ‌ ಬಂದಾಗ ಪಾಕಿಸ್ತಾನ, ಭಯೋತ್ಪಾದನೆ ಅಂತಾ ವಿಚಾರ ಹೇಳಿ ಮತ ಪಡೆಯುತ್ತಾರೆ ಎಂದು ವಾಗ್ದಾಳಿ ನಡೆಸಿದರು

ಮೈಸೂರಿನಲ್ಲಿಂದು ಜನ ಸಂಪರ್ಕ ಸಭೆಗಳಲ್ಲಿ ಭಾಗವಹಿಸಿ ಜನರ ಸಮಸ್ಯೆಗಳನ್ನು ಆಲಿಸಿದ ಬಳಿಕ  ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ವಿಜಯಶಾಲಿಯಾದ ಕಾಂಗ್ರೆಸ್ ಅಭ್ಯರ್ಥಿಗಳ ಪರ ವಿಧಾನಸೌಧದಲ್ಲಿ ಘೋಷಣೆ ಮತ್ತು ಜೈಕಾರ ಕೂಗುವ ಸಮಯದಲ್ಲಿ ಪಾಕಪರ ಘೋಷಣೆ ಕೂಗಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದರೆ ಇನ್ನು ಕೆಲವು ಮಾಧ್ಯಮ ಮಾಧ್ಯಮಗಳು ಪಾಕ್ ಪರ ಘೋಷಣೆ ಕೂಗಿಲ್ಲ ಎಂದು ವರದಿ ಮಾಡುತ್ತಿವೆ. ಆದರೂ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಯಾರೇ ಆಗಿದ್ದರೂ ಅವರ ವಿರುದ್ಧ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ ಎಂದರು.

ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ದೇವಸ್ಥಾನದ ಹಣ ಮಸೀದಿ ಚರ್ಚ್‌ಗೆ ಕೊಡುತ್ತಾರೆ ಅಂತಾ ಸುಳ್ಳು ಹೇಳಿದರು. ಕೆಲ ಮಾಧ್ಯಮಗಳು ಅದು ಸುಳ್ಳು ಅಂತಾ ಗೊತ್ತಿದ್ದರು ಪ್ರಸಾರ ಮಾಡಿದವು. ಬೇಕು ಅಂತಾ ಧರ್ಮ ಪಾಕಿಸ್ತಾನ ಭಯೋತ್ಪಾದನೆ ಹೆಸರಿನಲ್ಲಿ ಭಾವನಾತ್ಮಕವಾಗಿ ಮಾತನಾಡಿ ಜನರ ಮತ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಭಾರತದಲ್ಲಿ ಪ್ರತಿ ಬಾರಿ ಜನರನ್ನು ಪೆದ್ದರನ್ನಾಗಿಸಲು ಸಾಧ್ಯವಿಲ್ಲ. ಜನರು ಎಚ್ಚೆತ್ತುಕೊಂಡಿದ್ದಾರೆ ಯಾರು ನಿಜ ವಿಚಾರಗಳ ಬಗ್ಗೆ ಮಾತನಾಡುತ್ತಾರೆ ಅವರಿಗೆ ಮತ ಹಾಕುತ್ತಾರೆ ಎಂದು ಹೇಳಿದರು.

ವಿರೋಧ ಪಕ್ಷದವರಿಗೆ ಬೇರೆ ಯಾವುದೇ ವಿಷಯಗಳು ಇಲ್ಲದಿರುವುದರಿಂದ ಇಂತಹ ಚುನಾವಣಾ ಸಂದರ್ಭದಲ್ಲಿ ಜನರಲ್ಲಿ ಕೋಮು ಬಾವನೆ ಹುಟ್ಟು ಹಾಕುತ್ತಿದ್ದಾರೆ. ರಾಜಕೀಯ ಲಾಭ ಪಡೆದುಕೊಳ್ಳಲು ನೋಡುತ್ತಿದ್ದಾರೆ ಎಂದು ಹೇಳಿದರು.

ಹಿಂದಿನ ಲೇಖನಬಾಡಿಗೆ ಮನೆಯಲ್ಲಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ
ಮುಂದಿನ ಲೇಖನಜಿಲ್ಲಾಧಿಕಾರಿಗಳ ಜತೆ ಸಿಎಂ ವಿಡಿಯೋ ಸಂವಾದ: ಬರನಿರ್ವಹಣೆ ಸೂಕ್ತ ಮುಂಜಾಗ್ರತಾ ಕ್ರಮ ವಹಿಸಲು ಕಟ್ಟುನಿಟ್ಟಿನ ಸೂಚನೆ