ಮನೆ ಅಪರಾಧ ಚಾಮರಾಜನಗರ: ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ಸೇರಿದಂತೆ 7 ಮಂದಿಗೆ 10 ವರ್ಷ ಜೈಲು

ಚಾಮರಾಜನಗರ: ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ಸೇರಿದಂತೆ 7 ಮಂದಿಗೆ 10 ವರ್ಷ ಜೈಲು

0

ಚಾಮರಾಜನಗರ : ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಸೇರಿದಂತೆ 7 ಮಂದಿಗೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿ ಚಾಮರಾಜನಗರ ನ್ಯಾಯಾಲಯವು ಆದೇಶ ಹೊರಡಿಸಿದೆ.

ಚಾಮರಾಜನಗರದ ಮೀನಜ್ ಖಾನ್, ಸಲ್ಮಾನ್ ಖಾನ್, ಶಾರುಕ್ ಖಾನ್, ವಹಿದ್, ಅಮೀರ್, ಮುಸ್ಕಾಕಿಂ, ಸೈಯದ್ ಉಮರ್ ಶಿಕ್ಷೆಗೊಳಗಾದ ಅಪರಾಧಿಗಳು.

16 ವರ್ಷದ ಬಾಲಕಿಗೆ ಬ್ಲಾಕ್ ಮೇಲ್ ಮಾಡಿ ಕರೆದೊಯ್ದು ಅತ್ಯಾಚಾರ ಎಸಗಿದ್ದ ಮೀನಜ್ ಖಾನ್ ಹಾಗೂ ಈತನಿಗೆ ಸಹಕರಿಸಿದ ಈತನ ಅಣ್ಣ ಸೇರಿ ಇತರೆ ಅಪರಾಧಿಗಳ ಕೃತ್ಯ ಸಾಬೀತಾಗಿದೆ.

ಈ ಹಿನ್ನೆಲೆಯಲ್ಲಿ ಚಾಮರಾಜನಗರದ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನಿಶಾರಣಿ 10 ವರ್ಷ ಕಠಿಣ ಶಿಕ್ಷೆ ನೀಡಿದ್ದಾರೆ. ಜೊತೆಗೆ, ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾದಿಕಾರವು 2 ಲಕ್ಷ ಪರಿಹಾರ ಕೊಡುವಂತೆ ಸೂಚಿಸಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದ ಮಂಡಿಸಿದ್ದರು.

ಹಿಂದಿನ ಲೇಖನಕೇಂದ್ರ ಬಜೆಟ್: ಭಾರತವನ್ನು ಸಿರಿಧಾನ್ಯಗಳ ತವರನ್ನಾಗಿಸಲು ಕ್ರಮ
ಮುಂದಿನ ಲೇಖನಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ: ಸಿಎಂ ಬೊಮ್ಮಾಯಿ, ಗೋವಿಂದ ಕಾರಜೋಳ ಧನ್ಯವಾದ ಸಲ್ಲಿಕೆ