ಪ್ರತಿಯೊಬ್ಬ ತಾಯಿ ತನ್ನ ಮಗು ಬೆಳೆಯಬೇಕಾದ ರೀತಿಯಲ್ಲಿ ಬೆಳೆಯುತ್ತಿದೆಯೋ ಇಲ್ಲವೋ, ಇರಬೇಕಾದಂತೆ ಇದೆಯೋ ಇಲ್ಲವೋ ಎಂದು ಯೋಚಿಸುತ್ತಿರುತ್ತಾಳೆ. ಇತರ ಮಕ್ಕಳೊಂದಿಗೆ ಹೋಲಿಸಿಕೊಂಡು ತರ್ಕ ಮಾಡುತ್ತಿರುತ್ತಾಳೆ.
ತಾಯಿಯಾದವಳಿಗೆ ತನ್ನ ಮಗು ಎಷ್ಟನೇ ವಯಸ್ಸಿಗೆ, ಎಷ್ಟು ತೂಕ ಇರಬೇಕು, ಪ್ರತಿ ತಿಂಗಳು ಎಷ್ಟು ಬೆಳವಣಿಗೆ ಆಗಬೇಕು ಎಂಬ ತಿಳುವಳಿಕೆ ಇದ್ದರೆ, ಅನಗತ್ಯವಾದ ಚಿಂತೆ ಇರೋದಿಲ್ಲ. ಮಗುವಿನ ಬೆಳವಣಿಗೆಯ ಬಗ್ಗೆ ಅರಿವು ಪ್ರತಿ ತಾಯಿಯೂ ಇರಬೇಕಾದದ್ದು ಬಹು ಅಗತ್ಯ. ಮಗು ವಿಪರೀತ ತೂಕವಿದ್ದರೂ ಒಳ್ಳೆಯದಲ್ಲ ಇರಬೇಕಾದ ತೂಕಕ್ಕಿಂತ ಕಡಿಮೆ ತೂಕವಿದ್ದರೆ ಒಳ್ಳೆಯದಲ್ಲ. ಮಗು ವಿಪರೀತ ತೂಕವಿದ್ದರೂ ಅನಾರೋಗ್ಯವೇ ಇರಬೇಕಾದಕ್ಕಿಂತ ಕಡಿಮೆ ಇದ್ದರೂ ಅನಾರೋಗ್ಯವೇ.
ತೂಕವೊಂದೇ ಮಾನದಂಡವಲ್ಲ:- ಹುಟ್ಟಿದ ಮಗುವಿನ ಒಟ್ಟು ಬೆಳವಣಿಗೆ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ದಿನೇ ದಿನೇ ತೂಕದ ಹೆಚ್ಚಳವೊಂದೇ ಮಾನದಂಡವಲ್ಲ ತೂಕದೊಂದಿಗೆ ಶರೀರದ ಎತ್ತರ ತಲೆಯ ಸುತ್ತಳತೆ ಮತ್ತು ಎದೆಯ ಸುತ್ತಳತೆ ಕೂಡ ಮುಖ್ಯ ಆರೋಗ್ಯಕರವಾಗಿರುವ ಮಗುವಿನ ತೂಕ ಎತ್ತರ ಮತ್ತು ಬೆಳವಣಿಗೆ ತಿಳಿದುಕೊಳ್ಳುವ ಮೇಲಿನ ಅಂಶಗಳು ಗಮನದಲ್ಲಿಟ್ಟುಕೊಳ್ಳಬೇಕು
ಮಗುವಿನ ತೂಕದಲ್ಲಿ ಏರಿಕೆ :- ಸಾಮಾನ್ಯವಾಗಿ ಭಾರತದಲ್ಲಿ ಹುಟ್ಟುವ ಮಕ್ಕಳು ಎರಡು ಕೆಜಿಯಿಂದ 3.4 ಕೆಜಿಗಳ ನಡುವೆ ಇರುತ್ತಾರೆ ಮಗು ಹುಟ್ಟಿದ ಮೊದಲ ವಾರದಲ್ಲಿ ಸ್ವಲ್ಪ ಮಟ್ಟಿಗೆ ತೂಕ ಕಡಿಮೆ ಆದರೆ, ಎಂಟರಿಂದ 10 ದಿನದ ನಂತರ ತೂಕದಲ್ಲಿ ಹೆಚ್ಚಳವಾಗುತ್ತದೆ. ಹತ್ತು ದಿನ ಕಳೆದ ನಂತರ ದಿನಕ್ಕೆ 25 ರಿಂದ 30 ಗ್ರಾಂ ತೂಕ ಹೆಚ್ಚುತ್ತದೆ ಈ ರೀತಿಯಾಗಿ ಮೂರು ತಿಂಗಳವರೆಗೆ ವಾರಕ್ಕೆ 200 ಗ್ರಾಂನಂತೆ ಕ್ರಮವಾಗಿ ತೂಕ ಹೆಚ್ಚಾಗುತ್ತಿರುತ್ತದೆ. 4 ರಿಂದ 6 ತಿಂಗಳ ನಡುವೆ ವಾರಕ್ಕೆ 150 ಗ್ರಾಂ ತೂಕ ಏರಿಕೆಯಾಗುತ್ತದೆ. 7-9 ತಿಂಗಳ ನಡುವೆ ವಾರಕ್ಕೆ 100 ಗ್ರಾಂನಂತೆ ತೂಕ ಹೆಚ್ಚಾಗುತ್ತದೆ. ಹತ್ತು ಹನ್ನೆರಡು ತಿಂಗಳ ನಡುವೆ ವಾರಕ್ಕೆ 50 ರಿಂದ 75 ಗ್ರಾಂ ತೂಕದಲ್ಲಿ ಹೆಚ್ಚಳವಾಗುತ್ತದೆ. ಒಂದು ವರ್ಷದಿಂದ 5ನೇ ವರ್ಷದವರೆಗೆ ವರ್ಷಕ್ಕೆ 2 ಕೆಜಿ ಯಂತೆ ತೂಕದಲ್ಲಿ ಹೆಚ್ಚಳವಾಗುತ್ತದೆ.
ಗಂಡು ಮಗುವಿನ ತೂಕದ ಹೆಚ್ಚಳ :- ಗಂಡು ಮಗು ಹುಟ್ಟಿದಾಗ ಸಾಮಾನ್ಯವಾಗಿ 3.ಕೆಜಿ ತೂಕವಿರುತ್ತದೆ. 6 ತಿಂಗಳು ತುಂಬುಚಷ್ಟರಲ್ಲಿ 7.5 ಕೆಜಿ ಇರುತ್ತದೆ. ಒಂದು ವರ್ಷದ ನಂತರ 9.5 ಕೆಜಿ ತೂಕವಿರುತ್ತದೆ. ಎರಡು ವರ್ಷ ತುಂಬಿದ ನಂತರ 11.5 ಕೆ.ಜಿ 3 ವರ್ಷ ತುಂಬಿದ ನಂತರ 13.5 ಕೆ.ಜಿ 4ವರ್ಷ ತುಂಬುವಷ್ಟರಲ್ಲಿ 5.5 ಕೆಜಿ 5 ವರ್ಷದಲ್ಲಿ 17.5 ಕೆಜಿ ಇರುತ್ತದೆ.
ಹೆಣ್ಣು ಮಗುವಿನ ತೂಕ :- ಸಾಮನ್ಯವಾಗೆ ಹೆಣ್ಣು ಮಗು ಹುಟ್ಟಿದಾಗ 2.9 ಕೆಜಿ ತೂಕವಿರುತ್ತದೆ. ಆರು ತಿಂಗಳ ತುಂಬಿದಾಗ 7.5 ಕೆಜಿ ಇರುತ್ತದೆ. ವರ್ಷದೊಳಗೆ 9 ಕೆ.ಜಿ. ಎರಡು ವರ್ಷ ತುಂಬಿದ ನಂತರ 11 ಕೆ.ಜಿ , 3 ವರ್ಷದಲ್ಲಿ 13.5 ಕೆಜಿ, 4 ವರ್ಷಕ್ಕೆ 14.5 ಕೆಜಿ, 5 ವರ್ಷ ತುಂಬುವಾಗ 16.5 ಕೆಜಿ ತೂಕ ಇರುತ್ತದೆ.
ಮಗುವಿನ ತೂಕದ ಅವಶ್ಯಕತೆ :- ಮಗು ಆರೋಗ್ಯವಾಗಿ ಬೆಳೆಯುತ್ತಿದ್ದಾಗ ಆರು ತಿಂಗಳವರೆಗೆ ಪ್ರತಿ ತಿಂಗಳು ತೂಕ ನೋಡಬೇಕು. ಆ ನಂತರ 9ನೇ ತಿಂಗಳಲ್ಲಿ ಒಂದು ಸಾರಿ, 12 ತಿಂಗಳಿನಲ್ಲಿ ಒಂದು ಸಾರಿ ತೂಕ ನೋಡಬೇಕು. ಹಾಗೆ ಮಗುವಿನ ಬೆಳೆಯವಣಿಗೆಯಲ್ಲಿ ಏರುಪೇರು ಆದರೆ ಸದಾ ಅನಾರೋಗ್ಯ ಕಾಡುತ್ತಿರುತ್ತದೆ ಆಗಾಗ ತೂಕ ನೋಡುತ್ತಿರಬೇಕು. ಆರೋಗ್ಯವಂತ ಮಗುವಿನಲ್ಲಿ ಕೂಡ ತೂಕದ ಏರಿಕೆಯಲ್ಲಿ ಏರುಪೇರಾಗಿರುತ್ತದೆ ಅದನ್ನು ನೋಡಿ ಮಗುವಿನ ಬೆಳವಣಿಗೆಯಲ್ಲಿ ಏನು ದೋಷವಿದೆ ಎಂದು ಆತಂಕ ಪಡುವ ಅಗತ್ಯವಿಲ್ಲ. ತೂಕ ಹೆಚ್ಚಳಕ್ಕಿಂತಲೂ ಮಗು ಆರೋಗ್ಯವಾಗಿ ಚಟುವಟಿಕೆಯುವುದೇ ಮುಖ್ಯ.
ಮಗುವಿನ ದಪ್ಪ,ಎತ್ತರ :- ಮಗುವಿನ ತೂಕವನ್ನು ನೋಡುವಷ್ಟು ಮುಖ್ಯವಾಗಿ ಮಗುವಿನ ಎತ್ತರ ದಪ್ಪವನ್ನು ನೋಡುವಾಗ ಅಗತ್ಯವೇನಿಲ್ಲ. ಮಗುವಿನ ಎತ್ತರ ದಪ್ಪವನ್ನು ವರ್ಷಕ್ಕೆರಡು ಬಾರಿ ನೋಡಿದರೆ ಸಾಕು, ಎರಡು ವರ್ಷ ತುಂಬಿದ ನಂತರ ವರ್ಷಕ್ಕೊಮ್ಮೆ ನೋಡಿದರೆ ಸಾಕು. ಒಂದು ವೇಳೆ ಮಗು ಹುಟ್ಟಿದಾಗಿನಿಂದ ಬಹಳ ದಪ್ಪವಾಗಿ ಬೆಳೆಯುತ್ತಿದ್ದರೆ ಬೆಳೆಯುತ್ತಿರುವ ಎತ್ತರವನ್ನು ಆಗಾಗ ನೋಡಬೇಕು
ಸಾಮಾನ್ಯವಾಗಿ ಮಗು ಹುಟ್ಟಿದ 50cm ಎತ್ತರ ಇರುತ್ತದೆ. ಆರು ತಿಂಗಳಲ್ಲಿ 65 cm ಎತ್ತರ ಇರುತ್ತದೆ. ವರ್ಷತುಂಬುವಷ್ಟರಲ್ಲಿ 75 cm, 4ವರ್ಷಕ್ಕೆ 100 ಸೆಂಟಿಮೀಟರ್, 8 ವರ್ಷಕ್ಕೆ 125cm ಎತ್ತರ ಬೆಳೆದಿರುತ್ತದೆ. ಮೊದಲ ವರ್ಷದಲ್ಲಿ ಮೇಲೆ ದಾಖಲಿಸಿದ ಅಳತೆಗೆ 5cm ಆಚೀಚೆ ಇರಬಹುದು. ಆನಂತರ 10 ಸೆಂಟಿ ಮೀಟರ್ ಹೆಚ್ಚು ಕಡಿಮೆ ಇರಬಹುದು.
ತಲೆಯ ಸುತ್ತಳತೆ :- ಆರೋಗ್ಯಕರವಾದ ಮಗುವನ್ನು ಅಂದಾಜು ಮಾಡುವಾಗ ತಲೆ ಸುತ್ತಳತೆ ಕೂಡ ಬಹಳ ಮುಖ್ಯವಾದದ್ದು. ಮಗು ಹುಟ್ಟಿದ ಮೊದಲ ತಿಂಗಳಲ್ಲಿ ತಲೆಯ ಸುತ್ತಳತೆ ಬಗ್ಗೆ ಗಮನ ಹರಿಸಬೇಕು. ಕೆಲವು ಮಕ್ಕಳಿಗೆ ಹೈಡ್ರೋಕೆಪಲನ್ ಎಂಬ ಸಮಸ್ಯೆ ಇರುತ್ತದೆ. ಈ ಸಮಸ್ಯೆ ಇರುವವರಿಗೆ ತಲೆಯಲ್ಲಿ ವಿಪರೀತ ನಿರೀಕ್ಷಕರವಾಗಿ ದಪ್ಪಗೆ ಕಾಣುತ್ತದೆ. ಮತ್ತೆ ಕೆಲವು ಮಕ್ಕಳಿಗೆ ಮೈಕ್ರೋಕೆಪಾಲನ್ ಎಂಬ ಸಮಸ್ಯೆ ಇರುತ್ತದೆ. ಇಂಥವರಿಗೆ ತಲೆ ಬಹಳ ಸಣ್ಣದಾಗಿರುತ್ತದೆ ಆರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆಮಾಡಿದರೆ ಮಗುವಿನ ಮಾನಸಿಕ ಮತ್ತು ಶಾರೀರಿಕ ಬೆಳವಣಿಗೆ ಯಾವುದೇ ತೊಂದರೆ ಆಗೋದಿಲ್ಲ. ಈ ಸಮಸ್ಯೆಯನ್ನು ಗುರುತಿಸುವುದು ತಡವಾದರೆ ದುಷ್ಪರಿಣಾಮಗಳು ಉಂಟಾಗುತ್ತದೆ.
ಮಗು ಹುಟ್ಟಿದಾಗ ತಲೆಯ ಸುತ್ತಳತೆ 35 cm ಇರುತ್ತದೆ. 3:30 ತಿಂಗಳಲ್ಲಿ 40 ಸೆಂಟಿಮೀಟರ್, 12 ತಿಂಗಳಲ್ಲಿ 45cm, 2 ವರ್ಷಕ್ಕೆ 48 ಸೆಂಟಿಮೀಟರ್, 7 ವರ್ಷಕ್ಕೆ 50cm, 12 ವರ್ಷ ಪೂರ್ಣವಾಗುತ್ತದೆ. 52 ಸೆಂಟಿಮೀಟರ್ ಸುತ್ತಳತೆ ಇರುತ್ತದೆ.
ಎದೆ ಸುತ್ತಳತೆ :- ಮಗು ಹುಟ್ಟಿದಾಗ ಇದೇ ಸುತ್ತಳತೆ ಸರಿ ಸುಮಾರು ತಲೆಯ ಸುತ್ತಳತೆಗೆ ಸಮಾನವಾಗಿರುತ್ತದೆ. ಕೆಲವರಿಗೆ ತಲೆಯ ಸುತ್ತಳೆಗಿತಂಲೂ, 3 ಸೆಂ.ಮೀ. ಕಡಿಮೆಯಿರುತ್ತದೆ. ಒಂದು ವರ್ಷ ತುಂಬಿದಾಗ ತಲೆಯ ಸುತ್ತಳತೆ ಮತ್ತು ಎದೆ ಸುತ್ತಳತೆ ಸಮಾನವಾಗಿರುತ್ತದೆ. ಆ ನಂತರ ಎದೆ ಸುತ್ತಳತೆಯಲ್ಲಿ ಏರಿಕೆ ಕಾಣಬಹುದು.
ಮಗುವಿನ ಬೆಳವಣಿಗೆ ಹೆಗ್ಗುರುತು :- ಪ್ರತಿಯೊಂದು ತಾಯಿಯೂ ಕೂಡ ಮಗು ಹುಟ್ಟಿದಾಗಿನಿಂದ ಅದರ ಚಟುವಟಿಕೆಗಳನ್ನು ಗಮನಿಸುತ್ತಿರುತ್ತಾಳೆ. ಹೇಗೆ ಹಾಲು ಕುಡಿಯುತ್ತದೆ, ಹೇಗೆ ಚಪ್ಪಲಿಸುತ್ತಿದೆ, ಹೇಗೆ ನಗುತ್ತಿದೆ, ಹೇಗೆ ನೋಡುತ್ತಿದೆ ಇತ್ಯಾದಿ. ಕೆಲವು ದಿನಗಳ ಮೇಲೆ ಪಕ್ಕಕ್ಕೆ ತಿರುಗುವುದು ಬೋರಲಾಗುವುದನ್ನು ಮನುಷ್ಯರ ಚಲನೆ ವಿರೋಧಿಸುವುದನ್ನು ನೋಡಿ ಆನಂದಿಸುತ್ತಾಳೆ. ಮಗುನಲ್ಲಿಉಂಟಾಗುತ್ತಿರುವ ಪ್ರತಿ ಬೆಳವಣಿಗೆಯನ್ನು ಕುತೂಹಲದಿಂದ ಗಮನಿಸುತ್ತಾಳೆ. ಇದ್ದರೆ ಮಕ್ಕಳೊಂದಿಗೆ ತನ್ನ ಮಗುವನ್ನು ಹೋಲಿಸಿಕೊಂಡು ತನ್ನ ಮಗುವಿನ ಬೆಳವಣಿಗೆ ಚಟುವಟಿಕೆಗಳನ್ನು ನೋಡಿ ಆನಂದಿಸುತ್ತಾಳೆ. ಅದೇ ವಯಸ್ಸಿನ ಇತರ ಮಕ್ಕಳಿಗಿಂತ ತನ್ನ ಮಗು ಯಾವುದರಲ್ಲೂ ಕಡಿಮೆ ಇಲ್ಲವೆಂದು. ಅವುಗಳಿಗಿಂತ ಶ್ರೇಷ್ಠವೆಂದು ನಂಬುತ್ತಾರೆ.
ಮೊದಲ ತಿಂಗಳಲ್ಲಿ : ನಾಲ್ಕು ವಾರ ತುಂಬುವರೆಗೆ ಕೈಕಾಲುಗಳು ಮಡಚಿಕೊಂಡು, ಅಂಗಾತ ಮಲಗಿರುತ್ತದೆ. ತಲೆಯನ್ನು ಅತ್ತಿತ್ತ ತಿರುಗಿಸುತ್ತದೆ ತೊಟ್ಟಿಲನ್ನು ಸ್ವಲ್ಪ ಅಲ್ಲಾಡಿಸಿದರೂ ಹೊದಿಕೆಯನ್ನು ಒಂದಷ್ಟು ತೆಗೆದರು ಬಿಚ್ಚಿ ಬೀಳುವಂತೆ ಕೈ ಕಾಲುಗಳು ಮಡಚಿಕೊಳ್ಳುತ್ತದೆ. ಕಣ್ಣುಗಳು ಸಂಪೂರ್ಣ ತೆರೆದು ಏನನ್ನು ನೋಡುತ್ತಿರುತ್ತದೆ ಆ ನೋಟ ತಾಯಿಯನ್ನಾಗಲಿ ನೋಡುವಂತಿರುವುದಿಲ್ಲ, ಅಪ್ಪಟ ಬೊಂಬೆ ಕಣ್ಣುಗಳಂತೆ ಇರುತ್ತದೆ ಆ ಸ್ಥಿತಿಯನ್ನು ʼಡಾಲ್ಸ್ ಐಸ್ʼ ಎನ್ನುತ್ತಾರೆ
ಎರಡನೇ ತಿಂಗಳಲ್ಲಿ : ಅದುವರೆಗೂ ಮಡಚಿಕೊಂಡಿದ್ದ ಕಾಲುಗಳನ್ನು ನೇರವಾಗಿ ಚಾಚಿ ಮಲಗುತ್ತದೆ ತಲೆಯನ್ನು ಹಿಂದಕ್ಕೆ ಮತ್ತು ಅಕ್ಕಪಕ್ಕ ತಿರುಗಿಸುತ್ತದೆ ಚಲಿಸುತ್ತಾ ಜನರನ್ನು ವಸ್ತುಗಳನ್ನು ಗಮನ ಆರಂಭಿಸಲಾಗುತ್ತದೆ. ತಾಯಿಯ ಕರೆಗೆ ಸ್ಪಂದಿಸುತ್ತದೆ. ಸ್ವಲ್ಪ ಸ್ವಲ್ಪ ನಗು ಆರಂಭವಾಗುತ್ತದೆ
ಮೂರನೇ ತಿಂಗಳಿನಲ್ಲಿ: ತಲೆಯನ್ನು ಸ್ವಲ್ಪ ಮೇಲೆ ಕತ್ತುಎತ್ತುತ್ತದೆ. ಚಲಿಸುವ ವಸ್ತುಗಳನ್ನು ಸ್ಪಷ್ಟವಾಗಿ ಗಮನಿಸುತ್ತದೆ, ನಗಿಸಿದರೆ ನಗುತ್ತದೆ. ಮಾತು ಕೇಳಿದರೆ ಶಬ್ದದ ಕಡೆ ದೃಷ್ಟಿ ಹರಿಸುತ್ತದೆ.
ನಾಲ್ಕನೇ ತಿಂಗಳಿನಲ್ಲಿ : ತಲೆ ಮತ್ತು ಎದೆಯನ್ನು ಮೇಲಕ್ಕೆ ಎತ್ತುತ್ತದೆ. ಸಂಗೀತವನ್ನು ಆಲಿಸುತ್ತದೆ, ಆಲಿಸುತ್ತಾ ಹೂ..ಆ.. ಎನ್ನುತ್ತದೆ
ಐದನೇ ತಿಂಗಳಲ್ಲಿ: ತಲೆ ಮತ್ತು ಎಣ್ಣೆ ಸ್ಪಷ್ಟವಾಗಿ ಮೇಲಕ್ಕೆ ಎತ್ತಬಲ್ಲದು. ಕೈಗೆ ಕೊಟ್ಟ ವಸ್ತುಗಳನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತದೆ. ನಂತರ ಆ ವಸ್ತುವನ್ನು ಬಾಯಿಗೆ ಇಟ್ಟುಕೊಳ್ಳಲು ಪ್ರಯತ್ನಿಸುತ್ತದೆ. ತಲೆ ನಿಲ್ಲುತ್ತದೆ ಹಿಡಿದುಕೊಂಡು ನಿಲ್ಲಿಸಿದರೆ ಕಾಲುಗಳು ಹಿಂದಕ್ಕೆ ಮಡಚುತ್ತದೆ. ಜೋರಾಗಿ ನಗುತ್ತದೆ ಹೊಸಬರನ್ನು ನೋಡಿದರೆ ಅಳುತ್ತದೆ. ಆಹಾರ ಸೇವಿಸಲು ಆಸಕ್ತಿ ತೋರಿಸುತ್ತದೆ.
6-7 ನೇತಿಂಗಳಿನಲ್ಲಿ: ಬೋರಲಾಗುತ್ತದೆ. ಮುಂದಕ್ಕೆ ಚಲಿಸಲು ಕುಳಿತುಕೊಳ್ಳಲು ಪ್ರಯತ್ನಿಸುತ್ತದೆ. ವಸ್ತುಗಳನ್ನು ಒಂದು ಕೈಯಿಂದ ಮತ್ತೊಂದು ಕೈಗೆ ಬದಲಾಯಿಸಿಕೊಳ್ಳುತ್ತದೆ ಮಾತನಾಡಲು ಪ್ರಯತ್ನಿಸಿದರೆ ಅಮ್ಮ ಬೇಕೆಂದು ಹಠ ಹಿಡಿಯುತ್ತದೆ. ಕನ್ನಡಿಯಲ್ಲಿ ಮುಖ ನೋಡಿಕೊಂಡು ಕೆಕೆ ಹಾಕುತ್ತದೆ. ಮುಖದಲ್ಲಿ ಹಲವಾರು ಭಾವನೆಗಳು ಕಂಡುಬರುತ್ತದೆ
ಹತ್ತನೇ ತಿಂಗಳಿನಲ್ಲಿ : ಯಾರ ಸಹಾಯವೂ ಇಲ್ಲದೆ ಎದ್ದು ಕುಳಿತುಕೊಳ್ಳುತ್ತದೆ. ಮಂಚ ಕುರ್ಚಿ ಹಿಡಿದುಕೊಂಡು ನಿಂತುಕೊಳ್ಳುತ್ತದೆ. ನಡೆಯಲು ಪ್ರಯತ್ನಿಸುತ್ತದೆ ಎತ್ತರವಾದ ಜಾಗಕ್ಕೆ ಹತ್ತಲು ಪ್ರಯತ್ನಿಸುತ್ತದೆ ಅಮ್ಮ, ತಾತ, ಅತ್ತೆ ಪದಗಳನ್ನು ಇರುತ್ತದೆ
ಒಂದು ವರ್ಷಕ್ಕೆ : ಯಾವ ಸಹಾಯವಿಲ್ಲದೆ ಎದ್ದು ನಿಲ್ಲುತ್ತದೆ. ಹೊಸ ಹೊಸ ಮಾತುಗಳನ್ನು ಕಲಿಯುತ್ತದೆ ಆಟದ ವಸ್ತುಗಳ ಜೊತೆ ಆಡುತ್ತದೆ
15ನೇ ತಿಂಗಳಿನಲ್ಲಿ : ಚೆನ್ನಾಗಿ ನಡೆಯುತ್ತದೆ ಮನೆಯ ಮೆಟ್ಟಿಲುಗಳನ್ನು ಹತ್ತುತ್ತದೆ. ವಸ್ತುಗಳ ಹೆಸರನ್ನು ಹೇಳುತ್ತದೆ
18ನೇ ತಿಂಗಳಿನಲ್ಲಿ: ಕುರ್ಚಿ ಹತ್ತಿಕೂರುತ್ತದೆ. ಡ್ರಾಯರುಗಳನ್ನು ಹೊರಗೆಳೆಯುತ್ತದೆ. ಬೊಂಬೆ ತೋರಿಸಿ ಹೇಳಿದರೆ ಅವುಗಳನ್ನು ಹೆಸರನ್ನು ಹೇಳುತ್ತದೆ.
ಎರಡನೇ ವರ್ಷದಲ್ಲಿ : ಚುರುಕಾಗಿ ಓಡಾಡುತ್ತದೆ. ಕೊಠಡಿಯ ಬಾಗಿಲು ತೆಗೆಯುತ್ತದೆ ಒಂದು ಮಂಚದಿಂದ ಮತ್ತೊಂದು ಮಂಚಕ್ಕೆ ನಿಲ್ಲುತ್ತದೆ 3-4 ಪದಗಳನ್ನು ಬಳಸಿ ಒಂದು ವಾಕ್ಯ ಮಾಡಿ ಮಾತನಾಡುತ್ತದೆ. ಚಮಚ ಹಿಡಿದು ಆಹಾರವನ್ನು ಬಾಯಿ ಇಟ್ಟುಕೊಳ್ಳುತ್ತದೆ
ಮೂರನೇ ವರ್ಷಕ್ಕೆ : ಹೆಸರು ಹೇಳಿದರೆ ಪೂರ್ಣ ಹೆಸರು ಹೇಳುತ್ತದೆ. ಸೈಕಲ್ ತುಳಿಯುತ್ತದೆ ತನ್ನ ವಯಸ್ಸನ್ನು ತಾನು ಹುಡುಗ ಮತ್ತು ಹುಡುಗಿಯೊ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ. ತಾಯಿ ಬಟ್ಟೆ ತೊಡೆಸುತ್ತಿದ್ದರೆ ಶಿಸ್ತಿನಿಂದ ಹಾಕಿಸಿಕೊಳ್ಳುತ್ತದೆ.
ಮಗುವಿನ ಬೆಳವಣಿಗೆ ಕುಂಠಿತವಾಗಲು ಕಾರಣಗಳು :- 1.ಪೌಷ್ಟಿಕಾಂಶಗಳ ಕೊರತೆ 2.ಆಹಾರದ ಕೊರತೆ 3.ಕ್ರಾನಿಕ್ ರೋಗಗಳಿಂದ ಆಹಾರ ತೆಗೆದುಕೊಳ್ಳಲಾಗದಿರುವುದು. 4. ಡೈಯೇರಿಯಾ, ಜಿಯಾರ್ಡಿಸಿಸ್, ಮಾಲ್ ಅಬ್ಸರ್ವೇಷನ್ ಸಿಂಡ್ರೋಮ್ನಿಂದಾಗಿ ಜೀರ್ಣ ಕ್ರಿಯೆಯಲ್ಲಿ ದೋಷ ಉಂಟಾಗುವುದು. 5. ಹುಟ್ಟಿನಿಂದಲೇ ಹೃದ್ರೋಗವಿರುವುದು. 6. ಸದಾ ಮುತ್ರಕೋಶ ರೋಗಗಳು ಉಂಟಾಗುವುದು 7.ಕಿಡ್ನಿ ವೈಫಲ್ಯ 8. ಹುಟ್ಟಿನಿಂದಲೇ ಮಧುಮೇಹ ರೋಗ ಇತ್ಯಾದಿ.