ಮನೆ ಅಪರಾಧ ಆಸ್ತಿ ವಿವಾದ: 73 ಬಾರಿ ಇರಿದು ಉದ್ಯಮಿಯನ್ನು ಕೊಂದ ಮೊಮ್ಮಗ

ಆಸ್ತಿ ವಿವಾದ: 73 ಬಾರಿ ಇರಿದು ಉದ್ಯಮಿಯನ್ನು ಕೊಂದ ಮೊಮ್ಮಗ

0

ಆಸ್ತಿಗಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ, 28 ವರ್ಷದ ವ್ಯಕ್ತಿಯೊಬ್ಬ ತನ್ನ ಅಜ್ಜನಿಗೆ 73 ಬಾರಿ ಇರಿದು ಕೊಂದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

Join Our Whatsapp Group

ಅಷ್ಟೇ ಅಲ್ಲದೆ ಆತ ತಾಯಿಯ ಮೇಲೂ ಹಲ್ಲೆ ನಡೆಸಿದ್ದಾನೆ. ಮೃತ ಉದ್ಯಮಿ ವಿಸಿ ಜನಾರ್ದನ ರಾವ್ 460 ಕೋಟಿ ರೂ. ಮೌಲ್ಯದ ವೆಲ್ಜನ್ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಇದು ಹೈಡ್ರಾಲಿಕ್ಸ್ ಉಪಕರಣಗಳು, ಹಡಗು ನಿರ್ಮಾಣ, ಇಂಧನ ಇನ್ನೂ ಹಲವು ಉದ್ಯಮಗಳಿವೆ.

86 ವರ್ಷದ ಅಜ್ಜನನ್ನು ಕೊಲೆ ಮಾಡಿದ ಆರೋಪದ ಮೇಲೆ ಕೀರ್ತಿ ತೇಜ ಎಂಬುವವನನ್ನು ಬಂಧಿಸಲಾಗಿದೆ, ಆತ ಸ್ನಾತಕೋತ್ತರ ಕೋರ್ಸ್​ ಮುಗಿಸಿ ಅಮೆರಿಕದಿಂದ ಹಿಂದಿರುಗಿದ್ದ. ಗುರುವಾರ ರಾತ್ರಿ, ಅವರು ಮತ್ತು ಅವರ ತಾಯಿ ಸರೋಜಿನಿ ದೇವಿ ಹೈದರಾಬಾದ್‌ನಲ್ಲಿರುವ ತಮ್ಮ ಅಜ್ಜನ ಮನೆಗೆ ಭೇಟಿ ನೀಡಿದರು. ತೇಜ ಅವರ ಅಜ್ಜನೊಂದಿಗೆ ಮಾತನಾಡುತ್ತಿದ್ದಂತೆ, ಅವರ ತಾಯಿ ಚಹಾ ಮಾಡಲು ಅಡುಗೆಮನೆಗೆ ಹೋದರು.

ಇಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ರಾವ್ ಇತ್ತೀಚೆಗೆ ತಮ್ಮ ಹಿರಿಯ ಮಗಳ ಮಗ ಶ್ರೀಕೃಷ್ಣ ಅವರನ್ನು ವೆಲ್ಜನ್ ಗ್ರೂಪ್‌ನ ನಿರ್ದೇಶಕರನ್ನಾಗಿ ನೇಮಿಸಿದ್ದರು. ಅವರು ತಮ್ಮ ಎರಡನೇ ಮಗಳು ಸರೋಜಿನಿಯ ಮಗ ತೇಜ ಅವರಿಗೆ 4 ಕೋಟಿ ರೂ. ಮೌಲ್ಯದ ಷೇರುಗಳನ್ನು ವರ್ಗಾಯಿಸಿದ್ದರು.

ತನ್ನ ಅಜ್ಜ ಬಾಲ್ಯದಿಂದಲೂ ತನ್ನನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದ, ತೇಜ ತಾಳ್ಮೆ ಕಳೆದುಕೊಂಡು ತನ್ನ ಪಕ್ಕದಲ್ಲಿದ್ದ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಆತನ ತಾಯಿ ಮಧ್ಯ ಪ್ರವೇಶಿಸಲು ಬಂದಾಗ ಆಕೆಯ ಮೇಲೂ ತೇಜ ಹಲ್ಲೆ ನಡೆಸಿದ್ದಾನೆ.

ತೇಜ ಕೊಲೆ ಮಾಡಿದ್ದನ್ನು ಕಂಡಿದ್ದ ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಆತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.