ಮನೆ ಅಪರಾಧ ಪರೀಕ್ಷೆ ತಪ್ಪಿಸಿಕೊಳ್ಳಲು ಗೆಳೆಯನ ಜೊತೆ ಪರಾರಿಯಾಗಿದ್ದ ಬಾಲಕಿ ರಕ್ಷಣೆ

ಪರೀಕ್ಷೆ ತಪ್ಪಿಸಿಕೊಳ್ಳಲು ಗೆಳೆಯನ ಜೊತೆ ಪರಾರಿಯಾಗಿದ್ದ ಬಾಲಕಿ ರಕ್ಷಣೆ

0

ಬೆಂಗಳೂರು(Bengaluru): ಸಮಾಜ ವಿಜ್ಞಾನ ಪರೀಕ್ಷೆ ತಪ್ಪಿಸಿಕೊಳ್ಳಲು ಗೆಳೆಯನ ಜೊತೆ ಓಡಿ ಹೋಗಿದ್ದ 10ನೇ ತರಗತಿ ವಿದ್ಯಾರ್ಥಿನಿಯನ್ನು ಬೆಂಗಳೂರಿನಲ್ಲಿ ಪೊಲೀಸರು ರಕ್ಷಿಸಿ, ಸುರಕ್ಷಿತವಾಗಿ ಮನೆ ತಲುಪಿಸಿದ್ದಾರೆ.

ಬೆಂಗಳೂರಿನ ಕೆಎಸ್ ಆರ್ ರೈಲ್ವೆ ನಿಲ್ದಾಣದಲ್ಲಿ ಚೆನ್ನೈಗೆ  ತೆರಲುತ್ತಿದ್ದ ರೈಲಿನಲ್ಲಿಇಬ್ಬರನ್ನು ತಡೆಯಲಾಯಿತು.  ಆಕೆ ರೈಲ್ವೆ ರಕ್ಷಣಾ ಪಡೆಯ ಸಹಾಯ ಕೋರಿದ್ದಳು. ಆಕೆಯನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಲು ಆತ ಯತ್ನಿಸುತ್ತಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ.

ರೈಲ್ವೇ ಮೂಲಗಳ ಪ್ರಕಾರ, 11 ನೇ ತರಗತಿಯ, 17 ವರ್ಷದ ಬಾಲಕ ಅದೇ ಖಾಸಗಿ ಶಾಲೆಯ  ವಿದ್ಯಾರ್ಥಿನಿ ಜೊತೆ ಓಡಿ ಹೋಗಿದ್ದ,  ಬಾಲಕಿಗೆ ಪರೀಕ್ಷೆಯ ಬಗ್ಗೆ ಆತಂಕಗೊಂಡಿದ್ದಳು, ಹೀಗಾಗಿ ಇಬ್ಬರು ಓಡಿಹೋಗುವ ಪ್ಲಾನ್ ಮಾಡಿದ್ದರು, ಹೀಗಾಗಿ ಬೆಂಗಳೂರಿಗೆ ಹೋಗುವ ನಿರ್ಧಾರ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

ಮೈಸೂರಿನಿಂದ ಬೆಂಗಳೂರಿನೆ ರೈಲಿನಲ್ಲಿ ಇಬ್ಬರು ಬಂದರು. ಯಾರೋ ಒಬ್ಬರು ಆತನಿಗೆ ಚೆನ್ನೈ ನಲ್ಲಿಕೆಲಸ ಕೊಡಿಸುವುದಾಗಿ ಭರವಸೆ  ನೀಡಿದ್ದರಂತೆ, ಆದರೆ ಪ್ಲಾನ್ ಬದಲಾವಣೆಯಿಂದ ಆತಂಕಗೊಂಡಿದ್ದಳು. ರೈಲಿನಲ್ಲಿ ಆರ್‌ಪಿಎಫ್‌ನ ಬೆಂಗಾವಲು ತಂಡವು ರೈಲಿನಲ್ಲಿ ವಾಡಿಕೆಯ ತಪಾಸಣೆ ನಡೆಸುತ್ತಿದ್ದಾಗ ಬುರ್ಖಾ ಧರಿಸಿದ್ದ ಹುಡುಗಿ ಕಾಣಿಸಿಕೊಂಡಳು.

ಕೂಡಲೇ ಪೊಲೀಸರನ್ನು ತನ್ನ ಸಂಜ್ಞೆಯ ಮೂಲಕ ಎಚ್ಚರಿಸಿದ್ದಳು.  ಪೊಲೀಸರಲ್ಲಿ ಒಬ್ಬರು ಚೆನ್ನೈ ವ್ಯಕ್ತಿಯ ಸಂಖ್ಯೆಗೆ ಕರೆ ಮಾಡಿದರು.  ಅದು ಪೊಲೀಸರಿಂದ ಎಂದು ತಿಳಿದ ಕ್ಷಣದಲ್ಲಿ ಅವರು ಕರೆಯನ್ನು ಕಟ್ ಮಾಡಿದರು. ಇಬ್ಬರು ಅಪ್ರಾಪ್ತರೆಂದು ತಿಳಿದ ಪೊಲೀಸರು ಅವರನ್ನು ರೈಲಿನಿಂದ ಕೆಳಗಿಳಿಸಿದರು.ಬಾಲಕಿಯನ್ನು ಸುರಕ್ಷಿತವಾಗಿ ಪೋಷಕರು ಮನೆಗೆ ಕರೆದುಕೊಂಡು ಹೋದರು ಎಂದು ಪೊಲೀಸರು ತಿಳಿಸಿದ್ದಾರೆ.