ಮೈಸೂರು(Mysuru): ಅನ್ನದಾತನ ಆರೋಗ್ಯ ಕಾಪಾಡುವ ಗುರುತರ ಹೊಣೆ ಪ್ರತಿಯೊಬ್ಬರ ಕರ್ತವ್ಯವಾಗಿರಬೇಕು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅಭಿಪ್ರಾಯಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಗ್ರಾಮೀಣ ಜನರ ಆರೋಗ್ಯ ಸೇವಾ ಪಡೆ ವತಿಯಿಂದ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ವೈದ್ಯಕೀಯ ಕ್ಷೇತ್ರ ಬಂಡವಾಳಶಾಹಿಗಳ ತೆಕ್ಕೆಗೆ ಸಿಲುಕಿದೆ, ಇದರಿಂದ ಸೇವಾ ಮನೋಭಾವನೆ ದೂರವಾಗಿ ಹಣ ಮಾಡುವ ದಂಧೆ ನಡೆಯುತ್ತಿದೆ ಬಹುತೇಕ ವೈದ್ಯರಲ್ಲಿ ಸೇವೆ ಎನ್ನುವ ಕರ್ತವ್ಯ ಮಾಯವಾಗುತ್ತಿದೆ ಇದು ದುರ್ದೈವದ ಸಂಗತಿ, ಇಂದಿನ ಆಸ್ಪತ್ರೆಗಳು ಸೇವೆಗಿಂತ ಹೆಚ್ಚು ಹಣ ಮಾಡುವ ಕಾಯಕ ದಂದೆಯ ಕೇಂದ್ರಗಳಾಗಿವೆ, ಸರ್ಕಾರಿ ಆಸ್ಪತ್ರೆಯ ಸೇವೆಗಳು ಬಡವರಿಗೆ ಸಮರ್ಪಕವಾಗಿ ಸಕಾಲಕ್ಕೆ ಸಿಗದೇ ಇರುವ ಕಾರಣ, ಸರ್ಕಾರಿ ಆಸ್ಪತ್ರೆಗಳು ಬಡವರ ಪಾಲಿಗೆ ಬಲಿಕೊಡುವ ಕೇಂದ್ರಗಳಾಗಿವೆ ಎಂದು ತಿಳಿಸಿದರು.
ಜೆಎಸ್ಎಸ್ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರತಿಭಾ ಫೆರಾರ ಮಾತನಾಡಿ, ವೈದ್ಯರೇ ಹಳ್ಳಿಗಳಿಗೆ ತೆರಳಿ ಹಳ್ಳಿಯ ಜನರ ಆರೋಗ್ಯ ತಪಾಸಣೆ ನಡೆಸಿ ಉಚಿತ ಚಿಕಿತ್ಸೆ ನೀಡಲು ಪ್ರತಿ ತಿಂಗಳು ನಮ್ಮ ತಂಡ ಸೇವೆಗೆ ಬರಲು ಸಿದ್ಧವಿದೆ. ಹಳ್ಳಿಯ ಜನರಿಗೆ ಆರೋಗ್ಯ ಕಾಪಾಡಿಕೊಳ್ಳಲುಬೇಕಾದ ಮುಂಜಾಗ್ರತ ಸೌಲಭ್ಯ ದೊರಕಿಸಲು ನಾವು ಸಿದ್ದರಿದ್ದೇವೆ ಎಂದರು.
ಇಂದು ಪುಟ್ಟೇಗೌಡನ ಹುಂಡಿ ಸರ್ಕಾರಿ ಶಾಲೆಯ ಆವರಣದಲ್ಲಿ ಬೆಳಗ್ಗೆ 11ರಿಂದ ಮೂರು ಗಂಟೆ ತನಕ ಮುನ್ನೂರಕ್ಕೂ ಹೆಚ್ಚು ರೋಗಿಗಳಿಗೆ, ಶಾಲಾ ಮಕ್ಕಳಿಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು,
ಕಾರ್ಯಕ್ರಮದಲ್ಲಿ ಡಾ.ಮೇಜರ್ ಆರಾಧ್ಯ, ಡಾ. ಅಶ್ವಿನಿ, ಡಾ. ಸೌಮ್ಯ, ನಿವೃತ್ತ ಪ್ರಾಂಶುಪಾಲ ಮಹಾದೇವಯ್ಯ, ಸಂಘಟನೆಯ ಪ್ರಮುಖರಾದ ಅತ್ತಳ್ಳಿ ದೇವರಾಜ್, ಪಿ ಸೋಮಶೇಖರ್, ವೆಂಕಟೇಶ್, ಪುಟ್ಟಗೌಡನಹುಂಡಿ ರಾಜು, ಮಹೇಶ್, ಪಾಳ್ಯ ಚಂದ್ರು, ಬರಡನಪುರ ನಾಗರಾಜು, ಕಿರಗಸುರು ಶಂಕರ್, ಸಿದ್ದೇಶ್, ಮುಂತಾದವರಿದ್ದರು.