ಮನೆ ಸ್ಥಳೀಯ ಭಿಕ್ಷಾಟನೆ ನಿರ್ಮೂಲನೆ ವಿಶೇಷ ಕಾರ್ಯಾಚರಣೆಯಿಂದ ಮಕ್ಕಳ ರಕ್ಷಣೆ

ಭಿಕ್ಷಾಟನೆ ನಿರ್ಮೂಲನೆ ವಿಶೇಷ ಕಾರ್ಯಾಚರಣೆಯಿಂದ ಮಕ್ಕಳ ರಕ್ಷಣೆ

0

ಮೈಸೂರು: ಮೈಸೂರು ಜಿಲ್ಲಾ ಮಹಿಳಾ ಪೊಲೀಸ್ ಠಾಣೆ ಎ.ಹೆಚ್.ಟಿ.ಯು ಘಟಕ, ಮಕ್ಕಳ ವಿಶೇಷ ಪೊಲೀಸ್ ಘಟಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಡಾನ್ ಬಾಸ್ಕೋ ಸಂಸ್ಥೆ, ನಿರಾಶ್ರಿತ ಪರಿಹಾರ ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸೆ.13 ರಂದು ಭಿಕ್ಷಾಟನೆ ನಿರ್ಮೂಲನೆ ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಯಿತು.

ಕಾರ್ಯಾಚರಣೆ ವೇಳೆ ಮೈಸೂರಿನ ಬಂಡಿಪಾಳ್ಯ ಗೇಟ್ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಬಳಿ ಭಿಕ್ಷಾಟನೆ ಮಾಡುತ್ತಿದ ಜಾನಕಿ ಎಂಬಾಕೆಯನ್ನು ವಶಕ್ಕೆ ಪಡೆದು ಮಹಿಳಾ ಪೊಲೀಸ್ ಠಾಣಾ ಮೊ.ನಂ 37/2023 ಕಲಂ 11, 18 ಪ್ರಕಾರ ಕರ್ನಾಟಕ ಭಿಕ್ಷಾಟನಾ ನಿಯಮ 1975ರ ರೀತಿಯ ಪ್ರಕರಣ ದಾಖಲಿಸಿ ಮಹಿಳೆ ಮತ್ತು ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ನಂತರ ಸ್ಟೇಟ್ ಹೋಮ್ ಗೆ ಬಿಡಲಾಗಿದೆ.

ಮೈಸೂರಿನ ಬಂಡಿಪಾಳ್ಯ ಗೇಟ್ ಬಳಿ ಭಿಕ್ಷಾಟನೆ ನಡೆಸುತ್ತಿದ್ದ ವಿಜಿಯ ಬಿನ್ ಕೃಷ್ಣಪ್ಪ, ಜ್ಯೋತಿ ಬಿನ್ ಕೃಷ್ಣಪ್ಪ, ಗೌತಮಿ ಬಿನ್ ಕೃಷ್ಣಪ್ಪ, ವಿಷ್ಣು ಬಿನ್ ವಿಜಯ್ ಕುಮಾರ್ ಎಂಬ ಅಪ್ರಾಪ್ತ ಮಕ್ಕಳನ್ನು ಭಿಕ್ಷಾಟನೆಯಿಂದ ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಿ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ದಾಖಲಿಸಲಾಗಿದೆ.

ಹುಣಸೂರು ಟೌನ್ ಬಜಾರ್ ರಸ್ತೆಯ ಬಳಿ ಸಾರ್ವಜನಿಕರ ಬಳಿ ಭಿಕ್ಷಾಟನೆ ಮಾಡುತ್ತಿದ್ದ 12 ವರ್ಷದ ಗೌರಿ ಎಂಬ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿ. ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ನಂತರ ಸರ್ಕಾರಿ ಬಾಲಕಿಯರ ಬಾಲ ಮಂದಿರಕ್ಕೆ ದಾಖಲು ಮಾಡಲಾಗಿರುತ್ತದೆ. ಕಾರ್ಯಾಚರಣೆಯಲ್ಲಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ .ವಿ.ಡಿ. ಮಮತಾ, ಪಿ.ಎಸ್.ಐ ಮಲ್ಲೇಶ್, ಅಮ್ಮಾಜಾನ್ ಸಿಬ್ಬಂದಿಗಳಾದ ಸರ್ವತ್ ಅಫ್ಜ, ಸುನೀಲ್, ಹರೀಶ್, ದಾಕ್ಷಾಯಿಣಿ, ರಾಮ್ ಪ್ರಸಾದ್, ಡಾನ್ ಬಾಸ್ಕೋ ಸಂಸ್ಥೆಯ ಇಮ್ಯಾನುವಲ್, ಭಾರತಿ, ನಿರಾಶ್ರಿತರ ಪರಿಹಾರ ಕೇಂದ್ರದ ಸಿಬ್ಬಂದಿಗಳಾದ ಶಿವಕುಮಾರ್ ಹಾಗೂ ಡಿಸಿಪಿಯು ಕಚೇರಿ ಸಿಬ್ಬಂದಿಗಳಾದ ಪದ್ಮಶ್ರೀ, ದೇವಕಿ ಮುಂತಾದವರು ಪಾಲ್ಗೊಂಡಿದ್ದರು.
ಕಾರ್ಯಾಚರಣೆಯನ್ನು ಮೈಸೂರು ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಸೀಮಾ ಲಾಟ್ಕರ್ ಮತ್ತು ಅಪರ ಪೊಲೀಸ್ ಅಧೀಕ್ಷಕರಾದ ನಂದಿನಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಜಿಲ್ಲಾ ಮಹಿಳಾ ಪೋಲಿಸ್ ಠಾಣೆ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.