ಮನೆ ಕ್ರೀಡೆ ಏಷ್ಯಾ ಕಪ್:  ಪಾಕಿಸ್ತಾನ ವಿರುದ್ಧ ಶ್ರೀಲಂಕಾ ಗೆ 2 ವಿಕೆಟ್ ಗಳ  ಗೆಲುವು- ಫೈನಲ್ ಗೆ...

ಏಷ್ಯಾ ಕಪ್:  ಪಾಕಿಸ್ತಾನ ವಿರುದ್ಧ ಶ್ರೀಲಂಕಾ ಗೆ 2 ವಿಕೆಟ್ ಗಳ  ಗೆಲುವು- ಫೈನಲ್ ಗೆ ಪ್ರವೇಶ

0

ಏಷ್ಯಾ ಕಪ್ ಟೂರ್ನಿಯ ಸೆಮಿಫೈನಲ್ ಎಂದೇ ಬಿಂಬಿತವಾಗಿದ್ದ ಐದನೇ ಸೂಪರ್ 4 ಪಂದ್ಯ ರೋಚಕ ಅಂತ್ಯ ಕಂಡಿದೆ. ಪಾಕಿಸ್ತಾನ ತಂಡದ ವಿರುದ್ಧ ಶ್ರೀಲಂಕಾ ತಂಡ 2 ವಿಕೆಟ್ ಗಳಿಂದ ಗೆಲುವು ದಾಖಲಿಸಿದೆ. ಫೈನಲ್ ಪಂದ್ಯದಲ್ಲಿ ಟ್ರೋಫಿಗಾಗಿ ಭಾರತದ ಎದುರು ಲಂಕಾ ಸೆಣಸಲಿದೆ.

ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಐದನೇ ಸೂಪರ್ 4 ಪಂದ್ಯಕ್ಕೆ ಆರಂಭದಲ್ಲೇ ಮಳೆ ಅಡ್ಡಿ ಪಡಿಸಿತ್ತು. ಮಳೆಯಿಂದಾಗಿ 42 ಓವರ್ ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 7 ವಿಕೆಟ್ ನಷ್ಟಕ್ಕೆ 252 ರನ್ ಕಲೆಹಾಕಿತು.

ಲಂಕಾ ಪತುಮ್ ನಿಸ್ಸಂಕಾ ಮತ್ತು ಕುಸಲ್ ಪೆರೇರಾ ತಂಡಕ್ಕೆ ಅಷ್ಟೇನು ಉತ್ತಮ ಆರಂಭ ಒದಗಿಸಲಿಲ್ಲ. ಇಬ್ಬರೂ ಆರಂಭಿಕರು ಬಹಳ ಬೇಗನೆ ಔಟಾದರು. ಬಿರುಸಿನ ಬ್ಯಾಟ್ ಬೀಸಿದ ಪೆರೇರಾ 8 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 17 ಗಳಿಸಿ ಶಾದಾಬ್ ಖಾನ್ ರನೌಟ್ ಬಲೆಗೆ ಸಿಲುಕಿದರು. ನಿಸ್ಸಂಕಾ 44 ಬಾಲ್ ಗಳಲ್ಲಿ 29 ರನ್ ಗೆ ಶಾದಾಬ್ ಖಾನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.

ಸದೀರ ಸಮರವಿಕ್ರಮ ಹಾಗೂ ಕುಸಾಲ್ ಮೆಂಡಿಸ್ ಉತ್ತಮವಾಗಿ ಮುನ್ನಡೆಸಿದರು. ಇವರಿಬ್ಬರು ಮೂರನೇ ವಿಕೆಟ್ ಗೆ 100 ರನ್ ಗಳ ಜೊತೆಯಾಟ ನೀಡಿದರು. ಆದರೆ, ಇಫ್ತಿಕರ್ ಅಹ್ಮದ್ ಅವರು 48 ರನ್ ಗಳಲ್ಲಿ ಆಡುತ್ತಿದ್ದ ಸಮರವಿಕ್ರಮ ವಿಕೆಟ್ ಪಡೆದರು.

ಮತ್ತೊಂದೆಡೆ, ತಮ್ಮ ಬ್ಯಾಟ್ ಮುಂದುವರೆಸಿದ ಕುಸಾಲ್ ಮೆಂಡಿಸ್ ಅವರೊಂದಿಗೆ ಚರಿತ ಅಸಲಂಕಾ ಬ್ಯಾಟಿಂಗ್ ಗೆ ಸೇರಿಕೊಂಡರು. ಆದರೆ, 91 ರನ್ ಗಳಿಸಿದ್ದ ಮೆಂಡಿಸ್ ಅವರನ್ನೂ ಇಫ್ತಿಕರ್ ಅಹ್ಮದ್ ಅವರ ವಿಕೆಟ್ ಪಡೆದರು . ದಸುಕ ಶನಕಾ (2) ಅವರನ್ನೂ ಇಫ್ತಿಕರ್ ಔಟ್ ಮಾಡಿದರು.

ತಮ್ಮ ತಂಡದ ವಿಕೆಟ್ ಬೀಳುತ್ತಿದ್ದರೂ ಚರಿತ ಅಸಲಂಕಾ ಧೃತಿಗೇಡದ ತಂಡವನ್ನು ಕೊನೆಯವರೆಗೂ ಮುನ್ನಡೆಸಿದರು. ಅಂತಿಮ ಎರಡು ಎಸತೆಗಳಲ್ಲಿ ಗೆಲುವಿಗೆ ಆರು ರನ್ ಗಳ ಅಗತ್ಯವಿತ್ತು. ಆಗ ಅಸಲಂಕಾ ಬೌಂಡರಿ ಹಾಗೂ ಎರಡು ರನ್ ಸಿಡಿಸಿ ಅವರು 49 ರನ್ ಬಾರಿಸಿ ಮಿಂಚಿದರು ತಂಡವನ್ನು ಗೆಲ್ಲಿಸಿದರು.  ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡವು ಏಷ್ಯಾಕಪ್ ಫೈನಲ್ ಗೆ ಪ್ರವೇಶಿಸಿದೆ.

ಹಿಂದಿನ ಲೇಖನಭಿಕ್ಷಾಟನೆ ನಿರ್ಮೂಲನೆ ವಿಶೇಷ ಕಾರ್ಯಾಚರಣೆಯಿಂದ ಮಕ್ಕಳ ರಕ್ಷಣೆ
ಮುಂದಿನ ಲೇಖನನಡೆದಾಡುವ ದಾರಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಡೆದ ಓರ್ವನ ಕೊಲೆಯಲ್ಲಿ ಅಂತ್ಯ