ಮೈಸೂರು(Mysuru): ವಿವೇಕ ಸ್ಮಾರಕ ನಿರ್ಮಿಸುವ ಜಾಗದಲ್ಲಿ ಎನ್.ಟಿ.ಎಂ.ಎಸ್ ಶಾಲೆ ನಿರ್ಮಿಸುವಂತೆ ಎನ್ ಟಿ ಎಂ ಶಾಲೆ ಉಳಿಸಿ ಹೋರಾಟ ಸಮಿತಿ ಪ್ರತಿಭಟನೆ ನಡೆಸುತ್ತಿದೆ.
ಇಂದು ನಗರದ ಗನ್ ಹೌಸ್ ಬಳಿಯ ಕುವೆಂಪು ವೃತ್ತದ ಬಳಿ , ಮಾಜಿ ಮೇಯರ್ ಪುರುಷೋತ್ತಮ್ ಸೇರಿದಂತೆ ಹಲವರು ಪ್ರತಿಭಟನೆ ನಡೆಸಿ ಎನ್ ಟಿ ಎಂ ಶಾಲೆ ನಿರ್ಮಾಣಕ್ಕೆ ಒತ್ತಾಯಿಸಿದರು.
ರಾಮಕೃಷ್ಣ ಆಶ್ರಮದವರು ಮಾತಿಗೆ ತಪ್ಪದೆ ಶಾಲೆ ನಿರ್ಮಾಣ ಮಾಡಿಕೊಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಈಗ ನಿರ್ಮಾಣವಾಗುತ್ತಿರುವುದು ವಿವೇಕ ಸ್ಮಾರಕವಲ್ಲ ಕನ್ನಡ ಶಾಲೆಯ ಸಮಾಧಿ. ಹಿಂದಿನ ಮೌಖಿಕ ಒಪ್ಪಂದದಂತೆ ಸ್ಮಾರಕ ಜಾಗದಲ್ಲಿ ಶಾಲೆಯನ್ನು ನಿರ್ಮಿಸಬೇಕು. ಸಂಸದ ವಿ ಶ್ರೀನಿವಾಸ್ ಪ್ರಸಾದ್ ಅವರ ನಿವಾಸದಲ್ಲಿ ನಡೆದ ಮಾತುಕತೆಯಂತೆ ಕನ್ನಡ ಶಾಲೆಯನ್ನ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ರಾಮಕೃಷ್ಣ ಆಶ್ರಮದವರು ಮಾತಿಗೆ ತಪ್ಪದಂತೆ ಶಾಲೆ ನಿರ್ಮಿಸಿ ಕೊಡುವ ಬಗ್ಗೆ ಪ್ರಕಟಿಸಲಿ ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದ್ದಾರೆ.