ಮನೆ ಸುದ್ದಿ ಜಾಲ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಾಲಿಕೆ ಪೌರಕಾರ್ಮಿಕರ ಒಕ್ಕೂಟದ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಾಲಿಕೆ ಪೌರಕಾರ್ಮಿಕರ ಒಕ್ಕೂಟದ ಪ್ರತಿಭಟನೆ

0

ಮೈಸೂರು(Mysuru): ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮೈಸೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕರ ಒಕ್ಕೂಟದ ವತಿಯಿಂದ ಇಂದು ಪಾಲಿಕೆ ಮುಂಭಾಗ ಸಾಂಕೇತಿಕವಾಗಿ ಪ್ರತಿಭಟಿಸಲಾಯಿತು.

ನಂತರ ಮಾತನಾಡಿದ ಪ್ರತಿಭಟನಕಾರರು,  ಖಾಯಂ ಪೌರಕಾರ್ಮಿಕರು, ನೇರ ಪಾವತಿ ಪೌರಕಾರ್ಮಿಕರು ಮತ್ತು ಒಳಚರಂಡಿ ಸಹಾಯಕ ಪೌರ ಕಾರ್ಮಿಕರು, ಸ್ವಚ್ಛತಾ ವಾಹನ ಚಾಲಕರು ನ್ಯಾಯಯುತವಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಕೈಬಿಟ್ಟಿರುವ ಸುಮಾರು 48ಹೆಚ್ಚುವರಿ ಪೌರಕಾರ್ಮಿಕರನ್ನು ತಕ್ಷಣ ಮರುನೇಮಕ ಮಾಡಿಕೊಳ್ಳಬೇಕು. ಪಾಲಿಕೆಯಲ್ಲಿ ಕೇವಲ ಪೌರಕಾರ್ಮಿಕರಿಗೆ ಮಾತ್ರ ನಿಗದಿ ಮಾಡಿರುವ ಫೇಸ್ ರೆಕಾಗ್ನೈಸೇಷನ್ ಹಾಜರಾತಿಯನ್ನು ಕೂಡಲೇ ರದ್ದುಪಡಿಸಬೇಕು. ನೇರ ಪಾವತಿ ಪೌರಕಾರ್ಮಿಕರಿಗೆ, ಒಳಚರಂಡಿ ಸಹಾಯಕ ಕಾರ್ಮಿಕರಿಗೆ ಹಾಗೂ ಸ್ವಚ್ಛತಾ ವಾಹನ ಚಾಲಕರಿಗೆ ಮಹಾನಗರ ಪಾಲಿಕೆಯ ಪರಿಶಿಷ್ಟ ಜಾತಿ ಶೇ.24.10ರ ಅನುದಾನದಲ್ಲಿ ಮನೆಗಳನ್ನು ನಿರ್ಮಿಸಿಕೊಡುವುದು ಸೇರಿದಂತೆ ಹಲವು ಬೇಡಿಕೆ ಗಳ ಈಡೇರಿಕೆಗೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಧ್ಯಕ್ಷ ಎನ್.ರಾಜ ,ಗೌರವ ಅಧ್ಯಕ್ಷ ಸಿ.ಎಂ.ರಾಮಯ್ಯ, ರಾಮು, ಸಲಹೆಗಾರ ಸಣ್ಣ ಬೋರ, ನರಸಿಂಹ, ಕಾರ್ಯಾಧ್ಯಕ್ಷ ಎಂ.ವಿ.ವೆಂಕಟೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.