ಮನೆ ರಾಜ್ಯ ವಿದ್ಯಾರ್ಥಿ ನಿಲಯಗಳಿಗೆ ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

ವಿದ್ಯಾರ್ಥಿ ನಿಲಯಗಳಿಗೆ ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

0
Hands holding protest signs. Workers going on Strike

ಮೈಸೂರು(Mysuru): ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಲಯಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘದ ನೇತೃತ್ವದಲ್ಲಿ ಮಾನಸಗಂಗೋತ್ರಿಯಲ್ಲಿ ಸೇರಿದ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿದರು.

ಈಚೆಗೆ ಸುರಿದ ಭಾರಿ ಮಳೆಯಿಂದ ಬಹುತೇಕ ವಿದ್ಯಾರ್ಥಿನಿಲಯಗಳು ಸೋರುತ್ತಿವೆ. ಶುದ್ಧ ಕುಡಿಯುವ ನೀರಿನ ಸೌಲಭ್ಯದ ಕೊರತೆಯಿಂದ ವಿದ್ಯಾರ್ಥಿಗಳು ಬಳಲುವಂತಾಗಿದೆ ಎಂದು ದೂರಿದರು.

ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆಯೂ ಇಲ್ಲದಂತಾಗಿದೆ. ಕಟ್ಟಡಗಳ ದುರಸ್ತಿ ಕಾರ್ಯ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಅಧ್ಯಕ್ಷ ನಟರಾಜ್ ಶಿವಣ್ಣ, ಗೌರವಾಧ್ಯಕ್ಷ ಸೋಸಲೆ ಮಹೇಶ್, ಕಾರ್ಯದರ್ಶಿ ಜೆ.ಶಿವಮೂರ್ತಿ ಇದ್ದರು.

ಹಿಂದಿನ ಲೇಖನವಿಸ್ಮಯಾ ಕೊಲೆ ಕೇಸ್​: ಅಪರಾಧಿ ಗಂಡನಿಗೆ 10 ವರ್ಷ ಜೈಲು ಶಿಕ್ಷೆ, 12 ಲಕ್ಷ ದಂಡ
ಮುಂದಿನ ಲೇಖನನಾಡಗೀತೆ ಮತ್ತು ಕುವೆಂಪು ಅವರಿಗೆ ಅಪಮಾನ: ತಪ್ಪನ್ನು ಸರಿಪಡಿಸಿ ಇಲ್ಲವಾದರೆ ಕನ್ನಡಿಗರ ಶಕ್ತಿ ನೋಡಬೇಕಾಗುತ್ತದೆ; ಎಚ್ಡಿಕೆ ಎಚ್ಚರಿಕೆ