ಮನೆ ಅಪರಾಧ ಪಿಎಸ್ಐ ಅಕ್ರಮ: ಕಾಂಗ್ರೆಸ್ ಉಚ್ಛಾಟಿತ ಶರತ್ ರಾಮಣ್ಣ ಬಂಧನ

ಪಿಎಸ್ಐ ಅಕ್ರಮ: ಕಾಂಗ್ರೆಸ್ ಉಚ್ಛಾಟಿತ ಶರತ್ ರಾಮಣ್ಣ ಬಂಧನ

0

ಮಂಡ್ಯ(Mandya): ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಮಂಗಲ ಪಟ್ಟಣದ ಎಂ.ಟೆಕ್‌ ಪದವೀಧರ, ಯುವ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿದ್ದ ಮುಖಂಡ ಶರತ್ ರಾಮಣ್ಣ ಅವರನ್ನು ಸಿಐಡಿ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.

ಉದ್ಯಮಿಯಾಗಿರುವ ಶರತ್‌ ರಾಮಣ್ಣ ಚಲನಚಿತ್ರ ನಿರ್ಮಾಣದಲ್ಲೂ ತೊಡಗಿದ್ದರು, ವಿವಿಧೆಡೆ ಹಣಕಾಸು ವಹಿವಾಟು ನಡೆಸುತ್ತಿದ್ದರು. ನಾಗಮಂಗಲ ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಕಳೆದ ಲೋಕಸಭಾ ಚುನಾವಣೆ ವೇಳೆ ಸುಮಲತಾ ಅವರ ಪರವಾಗಿ ಪ್ರಚಾರ ನಡೆಸಿದ ಕಾರಣಕ್ಕೆ ಕಾಂಗ್ರೆಸ್‌ನಿಂದ ಉಚ್ಛಾಟಿತಗೊಂಡಿದ್ದರು.

ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ಭಾಗಿಯಾಗಿ ಹಾಸನ ಜಿಲ್ಲೆ, ಶ್ರವಣಬೆಳಗೊಳ ಮೂಲದ ವ್ಯಕ್ತಿಯೊಬ್ಬರಿಂದ 40 ಲಕ್ಷ ಹಣ ಪಡೆದ ಆರೋಪವಿದ್ದು ಅದರ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಿಐಡಿ ಪೊಲೀಸರು ಆರೋಪಿಯನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ಹಿಂದಿನ ಲೇಖನಪಠ್ಯಪುಸ್ತಕ ಪೂರೈಕೆಯಲ್ಲಿ ವಿಳಂಬ: ಸರ್ಕಾರದ ವಿರುದ್ಧ ಕಾಂಗ್ರೆಸ್‌ ಆಕ್ರೋಶ
ಮುಂದಿನ ಲೇಖನನನ್ನ ಸರ್ಕಾರದಲ್ಲಿ ಹಗರಣ ನಡೆದಿದ್ದರೆ ದಾಖಲೆ ಬಿಡುಗಡೆ ಮಾಡಿ: ಎಚ್​ಡಿಕೆ