ಮನೆ ಅಪರಾಧ ನಡುರಸ್ತೆಯಲ್ಲಿ ಶಿಕ್ಷಕನನ್ನು ಎಳೆದೊಯ್ದು ದರ್ಪ ತೋರಿದ ಪಿಎಸ್ಐಗೆ ಸಾರ್ವಜನಿಕರಿಂದ ತರಾಟೆ

ನಡುರಸ್ತೆಯಲ್ಲಿ ಶಿಕ್ಷಕನನ್ನು ಎಳೆದೊಯ್ದು ದರ್ಪ ತೋರಿದ ಪಿಎಸ್ಐಗೆ ಸಾರ್ವಜನಿಕರಿಂದ ತರಾಟೆ

0

ಚಿಕ್ಕೋಡಿ(Chikkodi): ಶಿಕ್ಷಕರೊಬ್ಬರನ್ನು ಕೊರಳಪಟ್ಟಿ ಹಿಡಿದು ನಡುರಸ್ತೆಯಲ್ಲೇ ಸಾರ್ವಜನಿಕವಾಗಿ ಎಳೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಆಕ್ರೋಶ ಹೊರಹಾಕಿದ್ದಾರೆ‌.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಘಟನೆ ನಡೆದಿದ್ದು, ಮುಗಳಖೋಡ ಪಟ್ಟಣದ ನಿವಾಸಿ ಸರ್ಕಾರಿ ಶಾಲೆಯ ಶಿಕ್ಷಕ ಚಂದ್ರು ಲಮಾಣಿ ಎಂಬುವವರ ಮೇಲೆ ಹಾರೋಗೇರಿಯ ಸಬ್ ಇನ್​​ಸ್ಪೆಕ್ಟರ್​ ರಾಘವೇಂದ್ರ ಖೋತ ದರ್ಪತೋರಿಸಿದ್ದಾರೆ ಎನ್ನಲಾಗಿದೆ. ಶಿಕ್ಷಕನನ್ನು ಎಳೆದೊಯ್ಯುವಾಗ ಜನರು ಮತ್ತು ಮಹಿಳೆಯರು ಪೊಲೀಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಘಟನೆಗೆ ಕಾರಣ: ಮುಗಳಖೋಡ ಪಟ್ಟಣದಲ್ಲಿ ದೇವಸ್ಥಾನದ ಖಾಲಿ ಜಾಗದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ. ದೇವಸ್ಥಾನಕ್ಕೆ ಕಾಂಪೌಂಡ್ ಮಾಡುತ್ತಿರುವ ಜಾಗ ತಮಗೆ ಸೇರಿದ್ದು, ಸೂಕ್ತ ತನಿಖೆ ನಡೆಸಿ ಕಾಮಗಾರಿ ಆರಂಭಿಸುವಂತೆ ಚಂದ್ರು ಲಮಾನಿ ಈಗಾಗಲೇ ಪಿಡಬ್ಲೂಡಿ ಇಲಾಖೆ ಸಹಾಯಕ ಇಂಜಿನಿಯರ್​ಗೆ ಪತ್ರ ಬರೆದಿದ್ದಾರಂತೆ. ಆದಾಗ್ಯೂ ಪೊಲೀಸರ ಸಮ್ಮುಖದಲ್ಲಿ ಕಾಮಗಾರಿ ಪ್ರಾರಂಭ ಮಾಡಿದ್ದಕ್ಕೆ ಪೊಲೀಸರು ಹಾಗೂ ಚಂದ್ರು ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಪಿಎಸ್ಐ ಶಿಕ್ಷಕನ ಮೇಲೆ ದರ್ಪ ತೋರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.