ಮನೆ ರಾಜ್ಯ ಪಿಎಸ್‌ಐ ನೇಮಕಾತಿ ಅಕ್ರಮ: ವಿಚಾರಣೆಗೆ ಅಮ್ರಿತ್‌ ಪೌಲ್‌ ಅಸಹಕಾರ

ಪಿಎಸ್‌ಐ ನೇಮಕಾತಿ ಅಕ್ರಮ: ವಿಚಾರಣೆಗೆ ಅಮ್ರಿತ್‌ ಪೌಲ್‌ ಅಸಹಕಾರ

0

ಬೆಂಗಳೂರು (Bengaluru): ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾದ ಆರೋಪದ ಮೇರೆಗೆ ಬಂಧನಕ್ಕೆ ಒಳಗಾಗಿರುವ ಪೊಲೀಸ್‌ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮ್ರಿತ್‌ ಪೌಲ್‌ ಸಿಐಡಿ ತನಿಖೆಗೆ ಅಸಹಕಾರ ತೋರುತ್ತಿದ್ದಾರೆ.

ನಾಲ್ಕು ದಿನಗಳಿಂದ ಸಿಐಡಿ ವಶದಲ್ಲಿರುವ ಪೌಲ್‌, ತನಿಖಾಧಿಕಾರಿಗಳು ಕೇಳುವ ಪ್ರಶ್ನೆಗೆ ನಿರಾಕರಣೆಯೇ ಅಮ್ರಿತ್‌ ಪೌಲ್‌ ಅವರ ಉತ್ತರವಾಗಿದೆ.

ಜೊತೆಗೆ ತನಿಖಾಧಿಕಾರಿಗಳು ಕೇಳಿದ ಪ್ರಶ್ನೆಗೆ ಸಮಯ ಕೇಳುತ್ತಿದ್ದಾರೆ. ‘ತನಗೆ ಆರೋಗ್ಯ ಸರಿಯಿಲ್ಲ’ ಎಂದು ಹೇಳುತ್ತಿದ್ಧಾರೆ ಎಂದು ಮೂಲಗಳು ಹೇಳಿವೆ. ಬಂಧಿತ ಶಾಂತಕುಮಾರ್‌ ಹೇಳಿಕೆ, ತನಿಖೆಯಲ್ಲಿ ಸಂಗ್ರಹಿಸಿರುವ ದಾಖಲೆ ಆಧಾರದಲ್ಲಿ ಪೌಲ್‌ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಬಂಧಿಸಲಾಗಿರುವ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮ್ರಿತ್ ಪೌಲ್ ಅವರಿಗೆ ತಾಲ್ಲೂಕಿನ ಹೊಸಹುಡ್ಯ ಗ್ರಾಮದ ಬಳಿ ಜಮೀನು ಕೊಡಿಸಿದ್ದ ಜಾತವಾರ ಗ್ರಾಮದ ಜಗದೀಶ್ ಅವರನ್ನು ಸಿಐಡಿ ಅಧಿಕಾರಿಗಳ ತಂಡ ಗುರುವಾರ ವಿಚಾರಣೆಗೆ ಒಳಪಡಿಸಿದೆ.