ಮನೆ ರಾಜ್ಯ ಪಿಎಸ್‌ಐ ಹಗರಣ: ಚನ್ನರಾಯಪಟ್ಟಣದ ನಾಲ್ವರ ಬಂಧನ

ಪಿಎಸ್‌ಐ ಹಗರಣ: ಚನ್ನರಾಯಪಟ್ಟಣದ ನಾಲ್ವರ ಬಂಧನ

0

ಚನ್ನರಾಯಪಟ್ಟಣ (Channarayapatna)- ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ತಾಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷ, ಮಾಜಿ ಅಧ್ಯಕ್ಷ ಸೇರಿ ನಾಲ್ವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಐವರು ಸದಸ್ಯರ ಸಿಐಡಿ ತಂಡವು ಪಿಎಸ್ ಐ ಅಭ್ಯರ್ಥಿಗಳಾದ ಚಂದ್ರಶೇಖರ್ ಅವರ ಪುತ್ರ ವೆಂಕಟೇಶ್ ಮತ್ತು ಕೇಶವಮೂರ್ತಿ ಅವರ ಪುತ್ರ ವೇಣುಗೋಪಾಲ್ ರನ್ನು ಅರ್ಧ ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಬಂಧಿಸಿದ್ದಾರೆ. ವೆಂಕಟೇಶ್ ಮತ್ತು ವೇಣುಗೋಪಾಲ್ ಅವರಿಂದ ಮಹತ್ವದ ಸುಳಿವು ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ್ ಮತ್ತು ಕೇಶವಮೂರ್ತಿ ಹಾಲಿ ಅಧ್ಯಕ್ಷರಾಗಿದ್ದಾರೆ. ಇದೇ ವೇಳೆ ಚನ್ನರಾಯಪಟ್ಟಣ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಶಶಿಧರ್ ಎಂಬಾತನನ್ನೂ ಸಿಐಡಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.  ಮಧ್ಯವರ್ತಿಗಳಾಗಿದ್ದ ಚನ್ನರಾಯಪಟ್ಟಣದ ನಾರಾಯಣಪ್ಪ ಸೇರಿದಂತೆ ಮತ್ತಿಬ್ಬರಿಗೆ ಸಿಐಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. 

ಹಿಂದಿನ ಲೇಖನಸಿಪಿಎಂ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್‌
ಮುಂದಿನ ಲೇಖನಜೆಡಿಎಸ್‌ ಅನ್ನು ಅಧಿಕಾರಕ್ಕೆ ತಂದು ಕೊನೆ ಉಸಿರು ಬಿಡಬೇಕೆಂಬುದೇ ನನ್ನ ರಾಜಕೀಯ ಹಠ: ಹೆಚ್‌.ಡಿ.ದೇವೇಗೌಡ