ಮನೆ ರಾಜ್ಯ ಪಿಟಿಸಿಎಲ್ ಪ್ರಕರಣ; 28 ವರ್ಷಗಳ ನಂತರದ ಅರ್ಜಿ ಅಮಾನ್ಯ – ಹೈಕೋರ್ಟ್ ಸ್ಪಷ್ಟನೆ..!

ಪಿಟಿಸಿಎಲ್ ಪ್ರಕರಣ; 28 ವರ್ಷಗಳ ನಂತರದ ಅರ್ಜಿ ಅಮಾನ್ಯ – ಹೈಕೋರ್ಟ್ ಸ್ಪಷ್ಟನೆ..!

0

ಬೆಂಗಳೂರು : ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯದವರಿಗೆ ಸರ್ಕಾರದಿಂದ ಮಂಜೂರಾದ ಜಮೀನನ್ನು ಮಾರಾಟ ಮಾಡಿದ ಬಳಿಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯ್ದೆಯಡಿ ಮರು ಸ್ಥಾಪನೆ ಕೋರಿ 28 ವರ್ಷಗಳ ಬಳಿಕ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

‘ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಈ ಅವಧಿಯನ್ನು ಸಮಂಜಸ ಅವಧಿ ಎಂದು ಪರಿಗಣಿಸಲು ಆಗದು’ ಎಂದು ನ್ಯಾಯಮೂರ್ತಿ ಅನು ಶಿವರಾಮನ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ವಿನೋಬಾ ನಗರದ ನಿವಾಸಿಗಳಾದ ಪೂಜಾರಿ ನಾರಾಯಣಪ್ಪ ಮತ್ತು ಅವರ ವಾರಸುದಾರರು ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಈ ಕುರಿತಂತೆ ಆದೇಶ ಹೊರಡಿಸಲಾಗಿದೆ.

ಸರ್ಕಾರದಿಂದ ಮಂಜೂರಾಗಿದ್ದ, ಜಮೀನನ್ನು ಮಾರಾಟ ಮಾಡಿದ ಬಳಿಕ ಮತ್ತೆ ಜಮೀನಿನ ಮೇಲೆ ತಮ್ಮ ಹಕ್ಕುಗಳನ್ನು ಪುನರ್‌ಸ್ಥಾಪಿಸಿ ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಲಾದ ಮೇಲ್ಮನವಿಯಲ್ಲಿ ಈ ಕುರಿತಂತೆ ಆದೇಶಿಸಲಾಗಿದೆ.