ಮನೆ ಕ್ರೀಡೆ ಐಪಿಎಲ್-2023: ವೀಕ್ಷಕ ವಿವರಣೆಗಾರರ ಹೆಸರು ಅಂತಿಮ

ಐಪಿಎಲ್-2023: ವೀಕ್ಷಕ ವಿವರಣೆಗಾರರ ಹೆಸರು ಅಂತಿಮ

0

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ನ 2023ರ ಆವೃತ್ತಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಎಲ್ಲಾ ತಂಡಗಳು ಸಿದ್ದತೆ ಆರಂಭಿಸಿದ್ದು, ವರ್ಣರಂಜಿತ ಹೈವೋಲ್ಟೇಜ್ ಕೂಟಕ್ಕೆ ತಯಾರಾಗುತ್ತಿವೆ.

ಎಂ.ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶುಕ್ರವಾರ, ಮಾರ್ಚ್ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ಹೋರಾಡಲಿದೆ.

ಇದೀಗ ಐಪಿಎಲ್ ನ ವೀಕ್ಷಕ ವಿವರಣೆಗಾರರ ಹೆಸರು ಅಂತಿಮವಾಗಿದ್ದು, ಇಂಗ್ಲೀಷ್, ಹಿಂದಿ ಮತ್ತು ಕನ್ನಡ ವೀಕ್ಷಕ ವಿವರಣೆಗಾರರ ಹೆಸರು ಅಂತಿಮವಾಗಿದೆ.

ಇಂಗ್ಲೀಷ್: ಸುನಿಲ್ ಗವಾಸ್ಕರ್, ಜಾಕ್ ಕ್ಯಾಲಿಸ್, ಮ್ಯಾಥ್ಯೂ ಹೇಡನ್, ಕೆವಿನ್ ಪೀಟರ್ಸನ್, ಆರನ್ ಫಿಂಚ್, ಟಾಮ್ ಮೂಡಿ, ಪಾಲ್ ಕಾಲಿಂಗ್ ವುಡ್, ಡೇನಿಯಲ್ ವೆಟ್ಟೋರಿ, ಡೇನಿಯಲ್ ಮಾರಿಸನ್, ಡೇವಿಡ್ ಹಸ್ಸಿ.

ಹಿಂದಿ: ವೀರೇಂದ್ರ ಸೆಹವಾಗ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಮಿಥಾಲಿ ರಾಜ್, ಮೊಹಮ್ಮದ್ ಕೈಫ್, ಸಂಜಯ್ ಮಾಂಜ್ರೇಕರ್, ಇಮ್ರಾನ್ ತಾಹಿರ್, ದೀಪ್ ದಾಸ್‌ ಗುಪ್ತಾ, ಅಜಯ್ ಮೆಹ್ರಾ, ಪದಮ್‌ಜೀತ್ ಸೆಹ್ರಾವತ್, ಜತಿನ್ ಸಪ್ರು.

ಕನ್ನಡ: ವಿಜಯ್ ಭಾರದ್ವಾಜ್, ಶ್ರೀನಿವಾಸ ಮೂರ್ತಿ ಪಿ, ಭರತ್ ಚಿಪ್ಲಿ, ಪವನ್ ದೇಶಪಾಂಡೆ, ಅಖಿಲ್ ಬಾಲಚಂದ್ರ, ಜಿಕೆ ಅನಿಲ್ ಕುಮಾರ್, ಸುಮೇಶ್ ಗೋಣಿ, ಗುಂಡಪ್ಪ ವಿಶ್ವನಾಥ್, ರೂಪೇಶ್ ಶೆಟ್ಟಿ.

ಹಿಂದಿನ ಲೇಖನಪ್ರತಿಯೊಬ್ಬ ತೃತೀಯ ಲಿಂಗಿಗಳು ಮತದಾರರ ಚೀಟಿ ಹೊಂದಿರಬೇಕು: ಡಾ. ಕೆ ವಿ ರಾಜೇಂದ್ರ
ಮುಂದಿನ ಲೇಖನಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಗ್ರಾಮಸ್ಥರಿಂದ ಶಿಕ್ಷಕನಿಗೆ ಧರ್ಮದೇಟು