ಮನೆ ಸುದ್ದಿ ಜಾಲ ಸಾರ್ವಜನಿಕರಲ್ಲಿ ಮಲೇರಿಯಾ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಬೇಕು : ಕಾಂತರಾಜು

ಸಾರ್ವಜನಿಕರಲ್ಲಿ ಮಲೇರಿಯಾ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಬೇಕು : ಕಾಂತರಾಜು

0

ಮಂಡ್ಯ: ಸಾರ್ವಜನಿಕರಲ್ಲಿ ಮಲೇರಿಯಾ ಕಾಯಿಲೆ ಕುರಿತುಅರಿವು ಮೂಡಿಸಬೇಕೆಂಬುವುದುಜಾಥದ ಪ್ರಮುಖಉದ್ದೇಶವಾಗಿದೆ. ಪ್ರತಿಯೊಬ್ಬರೂತಮ್ಮ ಸುತ್ತಮುತ್ತಲಿನ ನಿವಾಸಿಗಳಲ್ಲಿ ಹಾಗೂ ಕುಟುಂಬಸ್ಥರಲ್ಲಿ ಮಲೇರಿಯಾ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಿ ಎಂದು ಮಲೇರಿಯಾ ನಿಯಂತ್ರಣಅಧಿಕಾರಿಡಾ:ಕಾಂತರಾಜುಅವರು ಹೇಳಿದರು.

ಇಂದು (ಏ. ೨೫) ವಿಶ್ವ ಮಲೇರಿಯ ದಿನಾಚರಣೆ ಪ್ರಯುಕ್ತಆಯೋಜಿಸಲಾಗಿದ್ದ ಮಲೇರಿಯ ನಿಯಂತ್ರಣಕುರಿತಜಾಗೃತಿಜಾಥಾಕಾರ್ಯಕ್ರಮಕ್ಕೆ ಹಸಿರು ಭಾವುಟ ಹಾರಿಸುವ ಮೂಲಕ ಚಾಲನೆ ನೀಡಿಅವರು ಮಾತನಾಡಿ, ಜೂನ್ ಮಾಹೆಯಿಂದ ಮಳೆ ಕಾಲ ಶುರುವಾಗಲಿದ್ದು ಸೊಳ್ಳೆಗಳ ಸಂತಾನೋತ್ಪಾತಿ ಹೆಚ್ಚಾಗುವ ಸಾಧ್ಯತೆಯಿದೆ.ಇವುಗಳಿಂದ ಮಲೇರಿಯಾ ಹಾಗೂ ರೋಗವಾಹಕ ಅಶ್ರಿತ ರೋಗಗಳು ಬರುವ ಸಾಧ್ಯತೆಯಿದೆಎಂದರು.

ಮಲೇರಿಯಾಎನ್ನುವಂತದ್ದುಅನಾಫಲೀಸ್ ಎಂಬ ಸೋಂಕಿತ ಹೆಣ್ಣು ಸೊಳ್ಳೆ ಕಚ್ಚಿದರೆ ಬರುವಂತಹ ಕಾಯಿಲೆ ಆಗಿದೆ.ಇದುಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆಯನ್ನು ಸಹ ಹೊಂದಿದ್ದು ಪ್ರತಿಯೊಬ್ಬರೂಜಾಗರುಕರಾಗಿರಿಎಂದು ಹೇಳಿದರು.

ನಮ್ಮಜಿಲ್ಲೆಯಲ್ಲಿಯಾವುದೇ ಮಲೇರಿಯಾ ಪ್ರಕರಣಗಳು ಕಂಡುಬಂದಿಲ್ಲದಿರುವುದು ಸಂತಸದ ವಿ?ಯವಾಗಿದ್ದು, ಜನರು ಸಾಧ್ಯವಾದ? ಸೊಳ್ಳೆ ಕಚ್ಚುವಿಕೆಯಿಂದದೂರವಿರಿಎಂದರು.

ಸೊಳ್ಳೆಗಳನ್ನು ನಿಯಂತ್ರಿಸಲು ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುಬೇಕು ಹಾಗೂ ಕಟ್ಟಡಗಳ ನಿರ್ಮಾಣ ಪ್ರದೇಶ ಹಾಗೂ ಇತರಅಭಿವೃದ್ಧಿಕಾಮಗಾರಿ ಪ್ರದೇಶಗಳಲ್ಲಿ ನೀರು ನಿಲ್ಲದಂತೆಎಚ್ಚರ ವಹಿಬೇಕು ಎಂದು ತಿಳಿಸಿದರು.

ಜಾನುವಾರುಗಳು ನೀರುಕುಡಿಯುವ ಶೇಖರಣಾ ತೊಟ್ಟಿಗಳನ್ನು ವಾರಕ್ಕೊಮ್ಮೆ ಸ್ವಚ್ಚಗೊಳಿಸುವುದು, ಶಾಶ್ವತ ನೀರಿನ ತಾಣಗಳು ಹಾಗೂ ಕಾರಂಜಿಗಳಲ್ಲಿ ಲಾರ್ವಾಹಾರಿ ಮೀನು ಮರಿಗಳನ್ನು ಬಿಡುವುದು ಹಾಗೂ ಸೊಳ್ಳೆ ಕಡಿತದಿಂದ ಪಾರಾಗಲು ಸ್ವಯಂರಕ್ಷಣಾ ವಿಧಾನಗಳನ್ನು ಸಹ ಅನುಸರಿಸಿ ಎಂದು ಮಲೇರಿಯಾ ಮುನ್ನಚ್ಚರಿಕೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು.

ಮಲೇರಿಯ ನಿಯಂತ್ರಣಕುರಿತಜಾಗೃತಿಜಾಥಾವು ನಗರದಜಯಚಾಮರಾಜ ವೃತ್ತದಿಂದ ಹೊರಟು ಬೆಂಗಳೂರು, ಮೈಸೂರು ಮುಖ್ಯರಸ್ತೆ ಮುಖಾಂತರಜಿಲ್ಲಾಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಗೆತಲುಪಿತು.
ನಗರದ ವಿವಿಧಕಾಲೇಜಿನ ನಸಿಂಗ್ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರುಕಾಲ್ನಡಿಗೆಜಾಥದಲ್ಲಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿತಾಲ್ಲೂಕುಆರೋಗ್ಯಾಧಿಕಾರಿಜವರೇಗೌಡ, ಜಿಲ್ಲಾಕ್ಷಯರೋಗ ಹಾಗೂ ಏಡ್ಸ್ ನಿಯಂತ್ರಣಾಧಿಕಾರಿಆಶಾಲತಾ ಸೇರಿದಂತೆಇನ್ನಿತರ ಸಿಬ್ಬಂದಿ ವರ್ಗದವರು ಹಾಜರಿದ್ದರು.