ಮನೆ ರಾಜ್ಯ ಸಾರ್ವಜನಿಕ ಸ್ಪಂದನೆ ಅತಿಮುಖ್ಯ:ಸಂತೋಷ್ ಲಾಡ್

ಸಾರ್ವಜನಿಕ ಸ್ಪಂದನೆ ಅತಿಮುಖ್ಯ:ಸಂತೋಷ್ ಲಾಡ್

0

ಧಾರವಾಡ/ಬೆಂಗಳೂರು: ಮೊದಲ ಹಂತದ ಸಾರ್ವಜನಿಕ ಸ್ಪಂದನೆ ಮಾಡುವುದು ಅತಿಮುಖ್ಯ.ಇದರಿಂದ ಸಮಸ್ಯೆಗಳೇನೇ ಇದ್ದರೂ ಜನತೆಗೆ  ಆತ್ಮವಿಶ್ವಾಸದೊಂದಿಗೆ ಸಾಂತ್ವನ ದೊರೆಯುತ್ತದೆ.ಈ ಮೊದಲ ಹೆಜ್ಜೆ ಜಿಲ್ಲಾ ಹಂತದ ಎಲ್ಲಾ ಅಧಿಕಾರಿಗಳು ತಮ್ಮಲ್ಲಿ ದೃಢಗೊಳಿಸಬೇಕು ಎಂದು ಕಾರ್ಮಿಕ ಸಚಿವರೂ ಆಗಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸೂಚಿಸಿದರು.

ಆಡಳಿತ ತಂತ್ರಕ್ಕೆ ಚುರುಕು ಮುಟ್ಟಿಸಿ ಕ್ರಿಯಾಶೀಲಗೊಳಿಸುವ ಉದ್ದೇಶದಿಂದ‌ ಮುಖ್ಯಮಂತ್ರಿಗಳು “ಜನತಾ‌ದರ್ಶನ”ಕ್ಕೆ ಕರೆ ನೀಡಿದ್ದರ ಹಿನ್ನಲೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಂದು ತಮ್ಮ ಉಸ್ತುವಾರಿ ಜಿಲ್ಲೆ ಧಾರವಾಡದ ಜಿಲ್ಲಾಡಳಿತಕ್ಕೊಂದಿಷ್ಟು ಚುರುಕು ಮುಟ್ಟಿಸಿದರು.

ಜಿಲ್ಲಾ ಪ್ರವಾಸಿ ಮಂದಿರದಲ್ಲಿ ಇಂದು ಬೆಳಿಗ್ಗೆ  ಜನತಾದರ್ಶನ ನಡೆಸಿದ ಸಂತೋಷ್ ಲಾಡ್, ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.  ಜಿಲ್ಲಾಧಿಕಾರಿಗಳು,ತಾಲೂಕು ಮಟ್ಟದ ಅಧಿಕಾರಿಗಳು ಮೊದಲು ಸ್ವೀಕರಿಸಬೇಕು.ಸಮಸ್ಯೆಗಳು ಏನೆಂಬುದನ್ನು ಜಿಲ್ಲಾ ಜನತೆ ಅವರುಗಳಿಗೆ ಮನವರಿಕೆ ಮಾಡಿಕೊಡಬೇಕು.ಸಣ್ಣಪುಟ್ಟ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಬಗೆಹರಿಸಬಹುದಾದ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಮೊದಲು ಬಗೆಹರಿಸಬೇಕು.ತಳಮಟ್ಟದಿಂದಲೇ ತಳಮಟ್ಟದ ಸಮಸ್ಯೆಗಳು ಮೊದಲು ಪರಿಹಾರವಾಗಬೇಕು.ಸ್ಥಳೀಯವಾಗಿ ಬಗೆಹರಿಸಲಾಗದ ಸಮಸ್ಯೆಗಳನ್ನು ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳಿಗೆ ಆ ಮೂಲಕ ಉಸ್ತುವಾರಿ ಸಚಿವರ ಗಮನಕ್ಕೆ ತರುವುದರ ಮೂಲಕ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ.ಯಾವುದೇ ಅಧಿಕಾರಿಗಳಿರಲೀ ಯಾರೇ ಇರಲಿ ಮೊದಲು ಜನತೆಗೆ ಸ್ಪಂದಿಸಬೇಕು.ಸಾರ್ವಜನಿಕರ ಅಹವಾಲು ಸ್ವೀಕರಿಸುವ ಮತ್ತು ಎಷ್ಟು ಸಾಧ್ಯವೋ ಅಷ್ಟು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವ ಕಾಳಜಿ ಈ ಜನತಾ ದರ್ಶನದ ಹಿಂದಿದೆ ಎಂಬ ಸರ್ಕಾರದ ಉದ್ದೇಶವನ್ನು ಎಲ್ಲರೂ ಅರಿಯಬೇಕೆಂದರು.

ಜನತಾದರ್ಶನ ವೇಳೆ  ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್, ಶಾಸಕರಾದ ಎಂ.ಆರ್.ಪಾಟೀಲ್,ಕೋನರೆಡ್ಡಿ,ಜಿಲ್ಲಾ ಪೊಲೀಸ್ ಅಧಿಕಾರಿಗಳು,ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಮತ್ತಿತರ ಪ್ರಮುಖ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.

ಇನ್ನು ಇದೇ ವೇಳೆ ಜನತಾ ದರ್ಶನ ಬಳಿಕ ಸಚಿವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ,ಜಿಲ್ಲಾ ಹಾಗೂ ಜಿಲ್ಲೆಯಲ್ಲಿನ ತಾಲೂಕುಗಳ ಪ್ರಗತಿಯ ವಿವರ ಪಡೆದರು. ಈ ಸಭೆಯಲ್ಲಿ  ಶಾಸಕರಾದ  ಕೋನರೆಡ್ಡಿ, ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ದಾರವಾಡ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು, ಪೋಲಿಸ್ ವರಿಷ್ಠಾಧಿಕಾರಿಗಳು ಈ ಸಬೆಯಲ್ಲಿ ಉಪಸ್ಥಿತರಿದ್ದರು.

ಹಿಂದಿನ ಲೇಖನಮೀನಿನ ಲಾರಿಗೆ ಸ್ಕೂಟರ್‌ ಢಿಕ್ಕಿ: ಯುವಕ ಸಾವು
ಮುಂದಿನ ಲೇಖನನಕಲಿ ಜಾತಿ ಪ್ರಮಾಣ ಪತ್ರ ಪಡೆದು ಶಿಕ್ಷಕ ಹುದ್ದೆ ಪಡೆಯಲು ಯತ್ನ: ನಿರೀಕ್ಷಣಾ ಜಾಮೀನು ನಿರಾಕರಿಸಿದ ಹೈಕೋರ್ಟ್‌