ನ್ಯಾಯಾಧೀಶರು : ದೇವಾಲಯಕ್ಕೆ ಯಾಕೆ ಕನ್ನಹಾಕ್ದೆ?
ಕಳ್ಳ : ಸ್ವಾಮಿ, ಅದು ಭಾರತೀಯ ಸಂಪ್ರದಾಯ ಯಾವುದೇ ಕೆಲಸವನ್ನು ದೇವರಿಂದ ಶುರು ಮಾಡ್ತೀವಿ.
ಮಾಲಿಕ : ಏನಯ್ಯ ಮೊನ್ನೆ ತಾನೇ ನೀನು ಕಟ್ಟಿದ ಗೋಡೆ ಬಿದ್ದೇ ಹೋಗಿದ್ಯಲ್ಲ.
ಕಂಟ್ರಾಕ್ಟರ್ : ನಾನು ಅವತ್ತೇ ಹೇಳಿದನಲ್ಲ ಸಾರ್.
ಮಾಲೀಕ : ಏನಂತ?
ಕಂಟ್ರಾಕ್ಟರ್ : ಅದೇ ನೀವು ಕೊಟ್ಟ ಚೆಕ್ ಬೌನ್ಸ್ ಆದರೆ ಗೋಡೆ ತಾನೇ ತಾನಾಗಿ ಬಿದ್ ಹೋಗುತ್ತೇಂತ.
ಒಬ್ಬ ಮಂತ್ರಿ ತನ್ನ ಕಾರ್ಯದರ್ಶಿಯನ್ನು ಕರೆದು ಹೀಗೆ ಹೇಳಿದ, “ನನ್ನ ಭಾಷಣದಲ್ಲಿ ಇಷ್ಟು ದೊಡ್ಡ ದೊಡ್ಡ ಶಬ್ದಗಳನ್ನು ಉಪಯೋಗಿಸಬೇಡ. ಏಕೆಂದರೆ ನಾನೇನೂ ಭಾಷಣ ಮಾಡುತ್ತಿದ್ದೇನೆ ಎಂಬುದು ನನಗೆ ತಿಳಿಯಬೇಡವ”