ಕ್ಷೇತ್ರ – 20 ಡಿಗ್ರಿ ಯಿಂದ 30ಡಿಗ್ರಿ. ಕಲಾ – ಮಿಥುನರಾಶಿ, ರಾಶಿಸ್ವಾಮಿ – ಬುಧ, ನಕ್ಷತ್ರಸ್ವಾಮಿ – ಗುರು, ಯೋನಿ – ಮಾರ್ಜಾಲ, ಗಣ – ದೇವ, ನಾಡಿ – ಆದ್ಯ, ನಾಮಾಕ್ಷರ – ಕೆ, ಕೇ, ಹ, ಶರೀರ ಭಾಗ – ಕಿವಿ, ಕುತ್ತಿಗೆ, ಹೆಗಲು.
ರೋಗಗಳು :- ಗಳಗಂಡ, ಶ್ವಾಸನಾಳ ತಡೆ, ನಿಮೋನಿಯಾ, ಒಣ ಕೆಮ್ಮು, ಹೊಟ್ಟೆಯಲ್ಲಿ ತೊಂದರೆ, ಹೃದಯದಲ್ಲಿ ಉರಿ, ಕಿವಿ ಸೋರುವುದು, ಕಿವಿಯಲ್ಲಿ ಗುಳ್ಳೆ, ಅಯೋಡಿನ್ ಕೊರತೆ, ಶ್ವಾಸಕೋಶದ ನಡುಕ, ಸಕ್ಕರೆ ಅಂಶ ಹೆಚ್ಚಾಗುವುದು, ಹೊಟ್ಟೆ ಬೆಳೆಯುವುದು.
ಸಂರಚನೆ :- ವಿಶಾಲವಾದ ದೃಷ್ಟಿಕೋನ, ತೀಕ್ಷ್ಣ ಬುದ್ಧಿ, ಉತ್ತಮ ನೆನಪಿನ ಶಕ್ತಿ ಹೊಂದುವದು, ಸಾಂಸಾರಿಕ ಸುಖ ಹೊಂದುವುದು, ಸತ್ಯ ಹೇಳುವದು, ಶುದ್ಧಾಚರಣೆ, ಸಮಾಧಾನ ಚಿತ್ತವಿರುವುದು, ಉತ್ತಮ ವ್ಯವಹಾರ, ಉಚ್ಚಕಾಲದಲ್ಲಿ ಜನನ, ಜ್ಞಾನಪ್ರಾಪ್ತಿಯ ಹಂಬಲ, ಬುದ್ಧಿವಂತ, ಶ್ರೀಮಂತ, ನೌಕರರನ್ನು ಸಾಕುವವನು – ಕಲಾಕಾರ, ವ್ಯಾಪಾರಿ, ಪ್ರಸಿದ್ಧ ವ್ಯಕ್ತಿಯಾಗುವನು, ರೋಗ ಪೀಡಿತ, ಹೆಚ್ಚು ನೀರು ಕುಡಿಯುವವ, ಸಂತುಷ್ಟ ದಿವ್ಯ ನೆನಪಿನ ಶಕ್ತಿ ಇರುವವನು, ಧರ್ಮಕಾರ್ಯಗಳಿಗೆ ಪ್ರಸಿದ್ಧನಾದ ವ್ಯಕ್ತಿಯಾಗುವನು ಈ ನಕ್ಷತ್ರದಲ್ಲಿ ಹುಟ್ಟಿದವರು ಒಟ್ಟಿನಲ್ಲಿ ಒಳ್ಳೆಯ ವ್ಯಕ್ತಿಗಳಾಗುತ್ತಾರೆ.
ಉದ್ಯೋಗ, ವಿಶೇಷಗಳು :- ಪತ್ರಕರ್ತನಾಗಿ ಜಯ ಪಡೆಯುವರು, ಸಂಪಾದನಾ, ಪ್ರಕಾಶನ, ಸಂಶೋಧನಾ, ಕಥೆ, ಕಾದಂಬರಿ ಲೇಖನ, ಭಾಷಣ, ಪ್ರವಚನ, ಧರ್ಮ ಪ್ರಚಾರ ಕಾರ್ಯ, ಕಾನೂನು, ಸಾಹಿತ್ಯ, ಎಮರ್ಜೆನ್ಸಿ ಹಣಕಾಸಿನ ವ್ಯವಹಾರದ ದಲಾಲ, ಲೆಕ್ಕಪರೀಕ್ಷಕ ಇಂಜಿನಿಯರ್, ಶಿಕ್ಷಕ ಆಡಳಿತಗಾರ, ಗಣಿತಜ್ಞ, ಜ್ಯೋತಿಷಿ, ವಸ್ತ್ರ ವ್ಯಾಪಾರಿ, ರಾಜ್ಯದೂತ, ಮಂತ್ರಿ, ಮೇಯರ್, ಅಂಚೆಯವ, ಉಣ್ಣೆ ಮಾರುವವ, ಹೀಗೆ ಅನೇಕ ಉದ್ಯೋಗಿಯಾಗಬಹುದು.
ಈ ಜಾತಕದವರಿಗೆ ಸಂತಾನಕಾರನು ಕುಂಡಲಿಯಲ್ಲಿ ಗೋಚರನಾಗಿದ್ದಾನೆ, ಸಂತಾನ ಪ್ರಾಪ್ತಿಯಾಗುವುದು. ಈ ನಕ್ಷತ್ರದ ಸ್ವಾಮಿ ಗುರುವಾಗಿದ್ದರಿಂದ ಬುದ್ಧಿಯ ವಿಷಯದಲ್ಲಿ ಅತ್ಯಂತ ಪ್ರತಿಭಾನ್ವಿತರಾಗಿರುವವರು. 45 ವರ್ಷಗಳವರೆಗೆ ಈ ನಕ್ಷತ್ರದಲ್ಲಿ ಒಳ್ಳೆಯ ಹೆಸರು ಬಂದಿದ್ದರು ಮುಂದೆ ಸುಪ್ರಸಿದ್ಧರಾಗುವ ಅವಕಾಶವಿರುವುದು.
ಈ ರಾಶಿಯಲ್ಲಿ ಜನಿಸಿದವರು ವಿಚಾರಶೀಲರು, ಮೇಧಾವಿಗಳು, ದಂತರೋಗ ಪೀಡಿತರು, ಮಾವನ ಮನೆಯಿಂದ ಹಣ ಪಡೆಯುವವರು, ಬಿಳಿ ವಸ್ತ್ರಪ್ರಿಯ, ಉಚ್ಚಾಭಿಲಾಶಿ, ಕೈಕಾಲು ನೋವು ಇರುವವರು, ದುರ್ಘಟನೆಗಳಾಗುವವರು ಆಗಬಹುದಾಗಿದೆ. ಗುರು ಮತ್ತು ಬುಧ ಗ್ರಹಗಳು ಈ ನಕ್ಷತ್ರದ ಮೂಲಕ ಹಾದು ಹೋದಾಗ ವಿಶೇಷ ಫಲ ಉಂಟಾಗುವವು. ಸೂರ್ಯನು ಈ ನಕ್ಷತ್ರದಲ್ಲಿ ಆಷಾಡ ಮಾಸದ ಕೊನೆ 20 ದಿನಗಳಲ್ಲಿ ಇರುವವನು ಚಂದ್ರನು 27 ದಿನಗಳಲ್ಲಿ ಒಮ್ಮೆ 20 ಗಂಟೆ ಇರುವನು.