ಮನೆ ಜ್ಯೋತಿಷ್ಯ ಪುನರ್ವಸು ನಕ್ಷತ್ರ ಮತ್ತು ಜಾತಕ

ಪುನರ್ವಸು ನಕ್ಷತ್ರ ಮತ್ತು ಜಾತಕ

0

    ಪುನರ್ವಸು ನಕ್ಷತ್ರದ ಪ್ರಥಮ ಮೂರು ಚರಣಗಳ ಕ್ಷೇತ್ರ ವ್ಯಾಪ್ತಿ 20ಅಂಶದಿಂದ 30 ಅಂಶ ಮಿಥುನ ರಾಶಿ.ರಾಶಿಸ್ವಾಮಿ ಬುಧ, ನಕ್ಷತ್ರ ಸ್ವಾಮಿ ಗುರು, ನಕ್ಷತ್ರ ದೇವತೆ ಅದಿತಿ. ಆದ್ಯನಾಡಿ, ಬೆಕ್ಕಿನ ಯೋನಿ, ದೇವಗಣ, ನಕ್ಷತ್ರ ಸಮೂಹ 4, ಆಕಾಶಭಾಗ ದಕ್ಷಿಣ. ನಮಕ್ಷರ ಕೇ, ಕೋ, ಹಾ,  ಈ ನಕ್ಷತ್ರದ ಮೂರು ಚರಣಗಳು ಪ್ರತಿನಿಧಿಸುವ ಜಾತಕನ ಶರೀರದ ಭಾಗ ಕಿವಿ,ಕಪಾಳ, ಹೆಗಲು.

Join Our Whatsapp Group

 ಪುನರ್ವಸು ನಕ್ಷತ್ರದ ಜಾತಕಾನ ಸ್ವರೂಪ :

     ವಿಶಾಲ ದೃಷ್ಟಿಕೋನ ತೀವ್ರ ಬುದ್ಧಿ ಉತ್ತಮ ಸ್ಮರಣಶಕ್ತಿ,ಭೌತಿಕ ಇಚ್ಛೆಗಳಿಂದ ಪರಿಪೂರ್ಣ,ಸೂಕ್ತ ಪೂರ್ವಾನುಮಾನದಲ್ಲಿ ಕುಶಲ, ಸ್ಪಷ್ಟ ದೃಷ್ಟಿಕೋನ,  ವಾಸ್ತವಿಕ ನಿರ್ಣಯ, ವ್ಯವಹಾರಿಕ ಕಾರ್ಯ ಸಾಮರ್ಥ್ಯ,ಸಮತೋಲಿತ ಮನಸ್ಸು ಅಧಿಕಾಧಿಕ ಜ್ಞಾನ ವ್ಯಾಪ್ತಿಯ, ಉದ್ದೇಶ, ಸತ್ಯವಾದಿ, ಉಚ್ಚ ಕುಲದಲ್ಲಿ ಜನನ,ಧರ್ಮಾರ್ಥ ಕಾರ್ಯಗಳಿಗಾಗಿ ಪ್ರಸಿದ್ಧ. ಸುಂದರ ರೂಪಿ,ಬುದ್ದಿವಂತ ಮತ್ತು ಶ್ರೀಮಂತ, ನೌಕರ ಚಾಕರದಿಂದ ಯುಕ್ತ ಕಲಾವಿದ, ವ್ಯಾಪಾರಿ, ಪ್ರಸಿದ್ಧ ಪ್ರಾಪ್ತಿಹೊಂದುವವ ಆತ್ಮಕೇಂದ್ರಿತ, ಸಂತೋಷ ಪ್ರವೃತ್ತಿಯವ, ಪ್ರತಿಪ್ರದರ್ಶನ, ಸುಶೀಲ, ಉದಾಸ,ರೋಗಗಳಿಂದ ಪೀಡಿತ,ಜಲ ಸೇವಿಸುವವ ಸಂತುಷ್ಟ ಮತ್ತು ದಿವ್ಯ ಜ್ಞಾನಿ.

 ಪುನರ್ವಸು ಜಾತಕನ ಉದ್ಯೋಗ :

       ಪ್ರತಿಕಾರಂಗದಲ್ಲಿ ಸಫಲತೆ ಈ ನಕ್ಷತ್ರದ ಬುಧನ ರಾಶಿಯಲ್ಲಿ ರುವುದರಿಂದ ಸಂಪಾದನೆ, ಪ್ರಕಾಶನ, ಸಂಶೋಧನೆ, ಮೇಲ್ವಿಚಾರಣೆ, ಕಥೆಗಳ ಲೇಖನ, ಜಾಹೀರಾತು, ವ್ಯಕ್ತಾ ಪ್ರವಕ್ತಾ, ಪ್ರಚಾರ ಕಾರ್ಯ,ಧಾರ್ಮಿಕ ಸಂಸ್ಥೆಗಳ ಅಧ್ಯಕ್ಷ, ಕಾನೂನು, ಸಹಿತ್ರ, ಕಾವ್ಯ, ಜೀವವಿಮೆ ಪ್ರತಿನಿಧಿ,ಆರ್ಥಿಕದಲಿಲಾಲಿ, ಲೆಕ್ಕಾಧಿಕಾರಿ  ಲೆಕ್ಕಪರೀಕ್ಷಕ, ಸಿವಿನ್ ನ್ಯಾಯಾಧೀಶ ಸಿವಿಲ್ ಇಂಜಿನಿಯರ್,ದಂತ ವಿಶೇಷಜ್ಞ. ಮಹಾಪೌರ, ಪುರಸಭಾ ಸದಸ್ಯ ಶಾಲೆಯ ಮೇಷ್ಟ್ರು, ದುಭಾಷಿ ಅನುವಾದಕ, ಕಾರ್ಯದರ್ಶಿ, ನೊಂದಾವಣಿ ಅಧಿಕಾರಿ, ರಾಜದೂತ, ಸಂದೇಶವಾಹಕ,ಅಂಚೆಪೇದೆ, ಪಂಡಿತ, ಜ್ಯೋತಿಷಿ, ಗಣಿತಜ್ಞ,ಲಿಪಿಕ, ಬಟ್ಟೆಮಾರಾಟಗಾರ ಉಣ್ಣೆಯ ಪದಾರ್ಥಗಳ ಮಾರಾಟಗಾರ.