ಮನೆ ಜ್ಯೋತಿಷ್ಯ ಪುನರ್ವಸು ನಕ್ಷತ್ರ ಮತ್ತು ಜಾತಕ

ಪುನರ್ವಸು ನಕ್ಷತ್ರ ಮತ್ತು ಜಾತಕ

0

 ಪುನರ್ವಸು ( ಚತುರ್ಥ ಚರಣ)  :

Join Our Whatsapp Group

   ಈ ಚರಣದ ಕ್ಷೇತ್ರ ವ್ಯಾಪ್ತಿ 6ಅಂಶಗಳಿಂದ 3 ಅಂಶ 20 ಕಲಾ ಕರ್ಕರಾಶಿರಲ್ಲಿ ರಾಶಿಯ ಸ್ವಾಮಿ ಚಂದ್ರ.ನಮಾಕ್ಷರ ಹೀ. ಇನ್ನುಳಿದ ಅಂಶಗಳು ಮೊದಲು ಮೂರು ಚರಣದಂತೆಯೇ.

 ಜಾತಕನ ಸ್ವರೂಪ (ನಾಲ್ಕನೇ ಚರಣ ) :

     ಸಮೃದ್ಧಿ ಕಲ್ಪನಾಶಕ್ತಿ ಪ್ರಾಮಾಣಿಕ ನಿಜವಾದ ತಿಳುವಳಿಕೆಯುಕ್ತ,ವಿಶ್ವಸನೀಯ ಕ್ಷಮಾಶೀಲ, ಸೌಂದರ್ಯದ ಪ್ರಶಂ ಸಕ,ಸುಂದರ ಸ್ತ್ರೀ ಪುರುಷರತ್ತ ಆಕರ್ಷಿತ,ವಾಸ್ತವಿಕ ಮತ್ತು ಸೂಕ್ತ ನಿರ್ಣಯ ತೆಗೆದುಕೊಳ್ಳುವುದರಲ್ಲಿ ಸಮರ್ಥ ಪ್ರಭಾವಶಾಲಿ ತರ್ಕ ಮಂಡಿಸುವವ, ಉತ್ತಮ ಶಕ್ತಿ ಮತ್ತು ಉತ್ತಮ ಅಂಗಸೌಷ್ಠವಯುಕ್ತ ಅನೇಕ  ಸ್ತೋತ್ರಗಳನ್ನು ಬಲ್ಲವ ಅಧಿಕ ಸಂತಾನಯುಕ್ತ ನ್ಯಾಯಪ್ರಿಯ,ದಾನಿ, ಪರೋಪಕಾರಿ, ಸಹಾನುಭೂತಿ ತೋರುವವ, ಧನವಂತ ಕುಲದಲ್ಲಿ ಜನಿಸಿದವ ಶಿಕ್ಷಿತ, ರಾಜನೀತಿ ಬಲ್ಲವ, ರಾಜಕುಲ ಅಥವಾ ರಾಜ್ಯೋದ್ಯೋಗಿಗಳಿಗೆ ಸಂಬಂಧಿಸಿದವ ನೇತೃತ್ವ ವಹಿಸುವವ ಅಧ್ಯಾಪಕ, ಪ್ರಾಧ್ಯಾಪಕ,ಕವಿ, ತತ್ವಜ್ಞಾನಿ ಕಾನೂನು ಪಂಡಿತ,ಜಲವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಅಭಿರುಚಿಯುಳ್ಳವ, ಭ್ರಮಣ ಪ್ರಿಯ, ಯಾತ್ರಿಕ

 ಉದ್ಯೋಗ :

       ಬ್ಯಾಂಕರ್, ದೇಹಿಕತಜ್ಞ, ಧಾರ್ಮಿಕ ಮುಖಂಡ ಮಂದಿರ ಮುಂತಾದವುಗಳಿಗೆ ಸಂಬಂಧಿತ, ಉತ್ತಮ ಅವಕಾಶಗಳಲ್ಲಿ ವಿದ್ಯಮಾನವಾಗಿರುವವ ಶುಭ ಕಾರ್ಯಗಳನ್ನು ಪೂರೈಸುವವ, ಸಾಕ್ಷಿಕಾರ,ಅರ್ಥಶಾಸ್ತ್ರಜ್ಞ ಸಂಖ್ಯಾಕಾರ, ನ್ಯಾಯವಾದಿ, ನ್ಯಾಯಾಧೀಶ,ವ್ಯಖ್ಯಾನಕಾರ, ಪ್ರಾಂಶುಪಾಲ, ಪ್ರಧಾನಧ್ಯಾಪಕ,  ಬಹುಮೂಲ್ಯ ಮತ್ತು ಐತಿಹಾಸಿಕ ವಸ್ತುಗಳ ಸಂಗ್ರಹಮಾಡುವವ, ವ್ಯಾಪಾರಿ, ನಾವಿಕ, ಪರ್ಯಟನೆ ಸಾರ್ವಜನಿಕ ಹಿತಕಾರಿ ಸಂಸ್ಥೆ, ಜಲ ಪದಾರ್ಥ ಅಥವಾ ದ್ರವ ಪದಾರ್ಥಗಳ ಮಾರಾಟಗಾರ ರೋಗಿಯ ಸೇವಕ, ಜಲವಿತರಣೆ ಅಥವಾ ಕೆರೆ ನಿರ್ಮಾಣದ ಕಾರ್ಯ ಮಹಿಳಾ ಸಂಸ್ಥೆಗಳಲ್ಲಿ ಪ್ರಮುಖ ಅಥವಾ ಸ್ತ್ರೀಯರ ಇಲಾಖೆಯ ಅಧಿಕಾರಿ.

 ರೋಗ :

      ಜಲೋದರ ಬೆರಿಬೆರಿ,  ಉದರ ವಿಕಾರ,ಅನಿಯಮಿತ ಆಹಾರ ಸೇವನೆ ರಕ್ತವಿಕಾರ, ಕ್ಷಯ, ನ್ಯೂಮೊನಿಯಾ ಶ್ವಾಸನಾಳದ ಬಾವು, ಯಕೃತ್ತ್ ವೃದ್ದಿ, ಕಾಮಲೆ, ಅತಿಹಸಿವೆ,ಅಜೀರ್ಣ,ಸ್ವಾದ ಲೋಲುಪತೆ, ಮಂದಾಗ್ನಿ ಅಥವಾ ಅಪಚನ.

 ವಿಶೇಷ:

     ಚಂದ್ರನ ರಾಶಿ ಮತ್ತು ಗುರುವಿನ ನಕ್ಷತ್ರದಲ್ಲಿ ಜನಿಸಿದ ಇಂಥ ಜಾತಕನು ಮಹತ್ವಪೂರ್ಣ ಜೀವನ ನಡೆಸುವವ, ಆಚಾರ ನಿಯಮಗಳಿಗೆ ಸಾಮರ್ಥನೆ ನೀಡುವವ, ಸ್ವಯಂ ಅನಿಯಮಿತ ಜೀವನ ನಡೆಸುವ ಒಲವಿರುವವನಾಗುತ್ತಾನೆ. ಇಂಥ ಜಾತಕನಿಗೆ ಸರಕಾರದಿಂದ ವಿಶೇಷ ಲಾಭ ಪ್ರಾಪ್ತಿಯಾಗುತ್ತದೆ. ಒಂದು ವೇಳೆ ಗುರುಗ್ರಹ ಶುಭವಾಗಿದ್ದರೆ, ಮಂತ್ರಿ ಪದವಿಯನ್ನು ಪ್ರಾಪ್ತಿ ಹೊಂದಲು ಸಫಲನಾಗುತ್ತಾನೆ. ಸಮಸ್ತರ ಸ್ನೇಹ ಸಂಪಾದಿಸಲು ಸಾಮರ್ಥ್ಯನಾಗುವ ಈತ, ಆರ್ಥಿಕವಾಗಿ ಶ್ರೀಮಂತನಾಗುತ್ತಾನೆ. ಮಾನವೀಯ ಇಚ್ಛೆಗಳ ಪ್ರೇರಕ ಹಾಗೂ ಪ್ರತಿನಿಧಿಯಾಗುವ ಕಾರಣ  ಶ್ರೆಯಸ್ಸುನ್ನು ಪ್ರಾಪ್ತಿ ಹೊಂದುತ್ತಾನೆ.ಸೂರ್ಯನು ಈ ನಕ್ಷತ್ರದ ಮೇಲೆ ಶ್ರಾವಣ ಮಾಸದ ಆರಂಭದಲ್ಲಿ ಸುಮಾರು ಮೂರು ದಿನಗಳಲ್ಲಿರುತ್ತಾನೆ.ಚಂದ್ರ ಪ್ರತಿ 27ನೆಯ ದಿನ ಸುಮಾರು ಆರು ಗಂಟೆಗಳ ಅವಧಿಯವರೆಗೆ ಪುನರ್ವಸು ನಕ್ಷತ್ರ ಚತುರ್ಥ ಚರಣದ ಮೇಲೆ ಭ್ರಮಣ ಮಾಡುತ್ತಾನೆ.ಸೂರ್ಯ,ಚಂದ್ರರು,ಈ ನಕ್ಷತ್ರದ ಚತುರ್ಥ ಚರಣದ ಮೇಲೆ ಭ್ರಮಣಿಸುವಾಗ, ಕುಂಡಲಿಯಲ್ಲಿ ಇವರ ಭಾವಸ್ತಿತಿಯ ಅನುಸಾರ ಜಾತಕನಿಗೆ ಫಲಗಳು ಪ್ರಾಪ್ತಿಯಾಗುತ್ತವೆ.